More

  ದಾಖಲೆಯ ಗರಿಷ್ಠ ಮಟ್ಟ ಮುಟ್ಟಿದ ಚಿನ್ನದ ಬೆಲೆ : ಬಂಗಾರದ ದರ ಗಗನಕ್ಕೆ ಏರುತ್ತಿರುವುದೇಕೆ?

  ಮುಂಬೈ: ಚಿನ್ನದ ಬೆಲೆ ಗುರುವಾರ ಮಾರ್ಚ್ 21ರಂದು ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿತು. ಹೊಸ ಇತಿಹಾಸ ಸೃಷ್ಟಿಸುವ ಮೂಲಕ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು, ಪ್ರತಿ 10 ಗ್ರಾಂಗೆ 66778 ರೂ. ತಲುಪಿದೆ.

  ಗುರುವಾರ ಭವಿಷ್ಯದ ಬೆಲೆಯು ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ 10 ಗ್ರಾಂಗೆ ರೂ. 66,100 ಕ್ಕೆ ಪ್ರಾರಂಭವಾಯಿತು ಮತ್ತು ಸರಕು ಮಾರುಕಟ್ಟೆ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ 10 ಗ್ರಾಂಗೆ ರೂ. 66,778 ರ ಗರಿಷ್ಠ ಮಟ್ಟವನ್ನು ಮುಟ್ಟಿತು.

  ಎಂಸಿಎಕ್ಸ್ ನಂತರ, ಗುರುವಾರ ಚಿನ್ನ ಮತ್ತು ಬೆಳ್ಳಿಯ ದರಗಳು ಬುಲಿಯನ್ ಮಾರುಕಟ್ಟೆಯಲ್ಲಿ ಗಗನಕ್ಕೇರುತ್ತಿವೆ. ಬುಧವಾರದ ಮುಕ್ತಾಯದ ಬೆಲೆಗೆ ಹೋಲಿಸಿದರೆ 24 ಕ್ಯಾರೆಟ್ ಚಿನ್ನವು 10 ಗ್ರಾಂಗೆ 1279 ರೂ.ಗಳಷ್ಟು ದುಬಾರಿಯಾಗಿದ್ದು, 66968 ರೂ. ತಲುಪಿತು. ಇದು ಸಾರ್ವಕಾಲಿಕ ಗರಿಷ್ಠ ಬೆಲೆ. ಬೆಳ್ಳಿ ಪ್ರತಿ ಕೆಜಿಗೆ 1562 ರೂಪಾಯಿ ಏರಿಕೆಯಾಗಿ 75448 ರೂಪಾಯಿಗಳಿಗೆ ತಲುಪಿದೆ.

  ಇದೀಗ 22ಕ್ಯಾರೆಟ್ ಚಿನ್ನದ ಬೆಲೆ 61324 ರೂ ಆಗಿದ್ದು, 18 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 50226 ರೂ ಆಗಿದೆ. ಇದು ಜಿಎಸ್‌ಟಿ ಮತ್ತು ಆಭರಣ ತಯಾರಿಕೆ ಶುಲ್ಕ ಹೊರತುಪಡಿಸಿದ ಬೆಲೆಯಾಗಿದೆ. ಮಾರ್ಚ್‌ನಲ್ಲಿ ಐದನೇ ಬಾರಿಗೆ ಚಿನ್ನದ ಬೆಲೆ ಹೊಸ ಶಿಖರಗಳನ್ನು ಮುಟ್ಟಿದೆ. ಇದಕ್ಕೂ ಮೊದಲು ಮಾರ್ಚ್ 11 ರಂದು ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತ್ತು. ಈ ತಿಂಗಳು ಮಾರ್ಚ್ 5ರಂದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 64598 ರೂ. ತಲುಪಿತ್ತು. ಎರಡು ದಿನಗಳ ನಂತರ ಮಾರ್ಚ್ 7 ರಂದು ಇತಿಹಾಸ ಸೃಷ್ಟಿಸಿ 65049 ರೂ. ತಲುಪಿತ್ತು.

  ಗುರುವಾರ ದೇಶೀಯ ಮಾರುಕಟ್ಟೆಯಲ್ಲಿ MCX ನಲ್ಲಿ ಚಿನ್ನದ ಬೆಲೆಯು ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆ ಔನ್ಸ್‌ಗೆ 2,200 ಡಾಲರ್‌ಗಿಂತ ಹೆಚ್ಚಿದೆ.

  ಬುಧವಾರದಂದು, ಬುಲಿಯನ್ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 65689 ರೂ. ಇತ್ತು. IBJA ಬಿಡುಗಡೆ ಮಾಡಿದ ದರದ ಪ್ರಕಾರ, 23 ಕ್ಯಾರೆಟ್ ಚಿನ್ನವು 10 ಗ್ರಾಂಗೆ 65426 ರೂ. 22ಕ್ಯಾರೆಟ್ ಚಿನ್ನ ರೂ. 60171ಕ್ಕೆ ಹಾಗೂ 18 ಕ್ಯಾರೆಟ್ ಚಿನ್ನ ರೂ. 49267ಕ್ಕೆ ಮುಕ್ತಾಯವಾಗಿದೆ. ಇದೇ ವೇಳೆ 14 ಕ್ಯಾರೆಟ್ ಚಿನ್ನದ ದರ 38428 ರೂ.ಗೆ ತಲುಪಿದೆ. ಬೆಳ್ಳಿ ಪ್ರತಿ ಕೆಜಿಗೆ 73886 ರೂ. ತಲುಪಿತ್ತು.

  ಚಿನ್ನದ ಬೆಲೆ ಏರಿಕೆಗೆ ಕಾರಣಗಳ ಕುರಿತು ಮಾತನಾಡಿದ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸರಕು ಮತ್ತು ಕರೆನ್ಸಿ ಮುಖ್ಯಸ್ಥ ಅನುಜ್ ಗುಪ್ತಾ, “ಬುಧವಾರದ ಅಮೆರಿಕದ ಕೇಂದ್ರೀಯ ಬ್ಯಾಂಕ್​ ಆಗಿರುವ ಫೆಡರಲ್​ ರಿಸರ್ವ್​ ಸಭೆಯ ನಂತರ ವಿಶ್ವದಾದ್ಯಂತ ಚಿನ್ನದ ಬೆಲೆ ಹೆಚ್ಚುತ್ತಿದೆ. 2024 ರಲ್ಲಿ ಅಮೆರಿಕದ ಫೆಡರಲ್​ ರಿಸರ್ವ್​ ಬ್ಯಾಂಕ ಬಡ್ಡಿ ದರ ಕಡಿತದ ಸುದ್ದಿಯು ಚಿನ್ನದ ಏರಿಕೆಗೆ ಪ್ರಮುಖ ಕಾರಣವಾಗಿದೆ.

  ಹೋಳಿ ಹಬ್ಬಕ್ಕೆ 9 ಷೇರುಗಳ ಆಯ್ಕೆ: ಇಬ್ಬರು ಮಾರುಕಟ್ಟೆ ತಜ್ಞರ ಸ್ಟಾಕ್​ ಪಿಕ್​ ಹೀಗಿದೆ…

  499 ರಿಂದ 1 ರೂಪಾಯಿಗೆ ಕುಸಿದಿದ್ದ ಷೇರು: ರಿಲಯನ್ಸ್ ಪವರ್ ಸ್ಟಾಕ್​ಗೆ ಈಗ ಭರ್ಜರಿ ಡಿಮ್ಯಾಂಡು ಏಕೆ?

  ಸುಪ್ರಸಿದ್ಧ ಇನ್ವೆಸ್ಟರ್​ ಜುಂಜುನ್‌ವಾಲಾ ಖರೀದಿಸಿದ ಸ್ಟಾಕ್​: ಬುಧವಾರ ಒಂದೇ ದಿನದಲ್ಲಿ 20% ಹೆಚ್ಚಳದೊಂದಿಗೆ ಅಪ್ಪರ್​ ಸರ್ಕ್ಯೂಟ್‌ ಹಿಟ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts