More

    ಸುಪ್ರಸಿದ್ಧ ಇನ್ವೆಸ್ಟರ್​ ಜುಂಜುನ್‌ವಾಲಾ ಖರೀದಿಸಿದ ಸ್ಟಾಕ್​: ಬುಧವಾರ ಒಂದೇ ದಿನದಲ್ಲಿ 20% ಹೆಚ್ಚಳದೊಂದಿಗೆ ಅಪ್ಪರ್​ ಸರ್ಕ್ಯೂಟ್‌ ಹಿಟ್​

    ಮುಂಬೈ: ಅನುಭವಿ ಹೂಡಿಕೆದಾರರಾದ ರೇಖಾ ಜುಂಜುನ್‌ವಾಲಾ ಅವರ ಪೋರ್ಟ್‌ಫೋಲಿಯೊ ಸ್ಟಾಕ್ ಆಗಿರುವ ಮೆಟ್ರೋ ಬ್ರ್ಯಾಂಡ್ಸ್ (Metro Brands) ಬುಧವಾರ ಭಾರಿ ಖರೀದಿಗೆ ಸಾಕ್ಷಿಯಾಗಿದೆ.

    ವಾರದ ಮೂರನೇ ವಹಿವಾಟಿನ ದಿನವಾದ ಬುಧವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಈ ಷೇರು 20 ಪ್ರತಿಶತದಷ್ಟು ಜಿಗಿತದೊಂದಿಗೆ 1237.95 ರೂ.ಗೆ ತಲುಪಿತ್ತು. ಈ ಮೂಲಕ ಅಪ್ಪರ್​ ಸರ್ಕ್ಯೂಟ್ ಹಿಟ್​ ಆಯಿತು. ನಂತರ ಲಾಭಕ್ಕಾಗಿ ಮಾರಾಟ ನಡೆದಿದ್ದರಿಂದ ಈ ಷೇರು ಬೆಲೆ ಬುಧವಾರ ಅಂತಿಮವಾಗಿ 13.84% ರಷ್ಟು ಲಾಭದೊಂದಿಗೆ 1175.15 ರೂ. ತಲುಪಿತು.

    ಮೆಟ್ರೋ ಬ್ರ್ಯಾಂಡ್ಸ್ ಲಿಮಿಟೆಡ್‌ನಲ್ಲಿ ಶೇಕಡಾ 74.17 ರಷ್ಟು ಪಾಲು ಪ್ರವರ್ತಕರ ಬಳಿ ಇದೆ. ಸಾರ್ವಜನಿಕ ಷೇರುಗಳ ಪಾಲು ಶೇಕಡಾ 25.83 ಇದೆ. ಕಂಪನಿಯ ಪ್ರವರ್ತಕರು ಅಥವಾ ಪ್ರವರ್ತಕರ ಗುಂಪಿನಲ್ಲಿ ಮುಮ್ತಾಜ್ ಜಾಫರ್, ಸುಲೇಮಾನ್ ಸದ್ರುದ್ದೀನ್ ಭಾಂಜಿ, ರಫೀಕ್ ಮಲಿಕ್, ಫರಾ ಮಲಿಕ್ ಭಂಜಿ, ಅಲಿಶಾ ರಫೀಕ್ ಮಲಿಕ್ ಸೇರಿದ್ದಾರೆ. ದಿವಂಗತ ಹಿರಿಯ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರ ಪತ್ನಿ ರೇಖಾ ಜುಂಜುನ್‌ವಾಲಾ ಅವರು ಡಿಸೆಂಬರ್ ಅಂತ್ಯದಲ್ಲಿ ಕಂಪನಿಯಲ್ಲಿ ಶೇಕಡಾ 4.8 ಪಾಲನ್ನು ಹೊಂದಿದ್ದಾರೆ. ಇದು 1,30,51,206 ಷೇರುಗಳಿಗೆ ಸಮನಾಗಿದೆ.

    ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ ಮೆಟ್ರೋ ಬ್ರ್ಯಾಂಡ್ಸ್ 113 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. ಕಾರ್ಯಾಚರಣೆಗಳ ಆದಾಯವು ಈ ತ್ರೈಮಾಸಿಕದಲ್ಲಿ 6.14% ರಷ್ಟು ಏರಿಕೆಯಾಗಿದ್ದು, 635.5 ಕೋಟಿ ರೂ.ಗಳಿಗೆ ತಲುಪಿದೆ. ಹಿಂದಿನ ವರ್ಷದ ಅವಧಿಯಲ್ಲಿ 598.7 ಕೋಟಿ ರೂ. ಆದಾಯ ಇತ್ತು. ಮೆಟ್ರೋ ಬ್ರ್ಯಾಂಡ್ಸ್ ಲಿಮಿಟೆಡ್ ಅನ್ನು 1955 ರಲ್ಲಿ ಪ್ರಾರಂಭಿಸಲಾಯಿತು. ಅಂದಿನಿಂದ ಇದು ಎಲ್ಲಾ ಪಾದರಕ್ಷೆಗಳ ಅಗತ್ಯಗಳಿಗಾಗಿ ಒಂದು ಪ್ರಮುಖ ಕಂಪನಿಯಾಗಿ ಬೆಳೆದಿದೆ.

    ಜುಂಜುನ್‌ವಾಲಾ ಕುಟುಂಬದ ಬೆಂಬಲಿತ ಮೆಟ್ರೋ ಬ್ರ್ಯಾಂಡ್​ಗಳ ಐಪಿಒ ಡಿಸೆಂಬರ್ 2021 ರಲ್ಲಿ ಬಂದಿತ್ತು. ಈ ಐಪಿಒ ಬೆಲೆ ಬ್ಯಾಂಡ್ 485-500 ರೂ. ಇತ್ತು.

     

    ಸದ್ಯ ಕುಸಿತ ಕಂಡು ರೂ 379 ತಲುಪಿರುವ ಟಾಟಾ ಷೇರು: ರೂ. 500ರವರೆಗೂ ಏರಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts