More

    ಬುಧವಾರ ಒಂದೇ ದಿನದಲ್ಲಿ 20% ಏರಿಕೆ ಕಂಡ ಸ್ಟಾಕ್​ಗಳು: ಗುರುವಾರವೂ ಈ ಷೇರುಗಳಲ್ಲಿ ಸಿಗಬಹುದು ಲಾಭ

    ಮುಂಬೈ: ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಅನಿಶ್ಚಿತತೆಯಿದೆ. ಬುಧವಾರದ ವಹಿವಾಟಿನ ಏರಿಳಿತಗಳಿಂದ ಪ್ರಭಾವಿತವಾಗದ ಕೆಲವು ಪೆನ್ನಿ ಸ್ಟಾಕ್‌ಗಳು ಮಾರುಕಟ್ಟೆಯಲ್ಲಿದ್ದವು. ಈ ಷೇರುಗಳು ಶೇಕಡಾ 20ರಷ್ಟು ಏರಿಕೆ ಕಂಡು, ಅಪ್ಪರ್​ ಸರ್ಕ್ಯೂಟ್ ಹಿಟ್​ ಆದವು.

    ವಾಸ್ತವವಾಗಿ ಈ ಷೇರುಗಳು ಏರುಗತಿ ಪ್ರವೃತ್ತಿ ಹೊಂದಿರುವ ಷೇರುಗಳಾಗಿವೆ. ಬುಧವಾರದ ಲಾಭದ ನಂತರ, ಗುರುವಾರದ ಮಾರುಕಟ್ಟೆಯಲ್ಲೂ ಈ ಷೇರುಗಳು ಗಮನಾರ್ಹ ಲಾಭವನ್ನು ನೀಡಬಹುದಾಗಿದೆ.

    ಆ ಪೆನ್ನಿ ಸ್ಟಾಕ್‌ಗಳು ಯಾವುವು ಎಂಬುದನ್ನು ನೋಡೋಣ, ಗುರುವಾರದ ಮಾರುಕಟ್ಟೆಯಲ್ಲಿ ಈ ಷೇರುಗಳಲ್ಲಿ ಬಂಪರ್ ಲಾಭ ಕಾಣಬಹುದಾಗಿದೆ.

    ಶೆಮರೂ ಎಂಟರ್‌ಟೈನ್‌ಮೆಂಟ್ ಪ್ರೈವೇಟ್​ ಲಿಮಿಟೆಡ್​ (Shemaroo Entertainment PVT Ltd):

    ಬುಧವಾರ ಮಾರುಕಟ್ಟೆಯಲ್ಲಿ ಖರೀದಿದಾರರು ಈ ಸ್ಟಾಕ್ ಅನ್ನು ಮುಗಿಬಿದ್ದು ಖರೀದಿಸಿದರು. ಶೇಕಡಾ 20ರಷ್ಟು ಹೆಚ್ಚಿದ ನಂತರ ಈ ಸ್ಟಾಕ್ ರೂ 156.50 ಮಟ್ಟದಲ್ಲಿ ಕೊನೆಗೊಂಡಿತು. ಗುರುವಾರದ ಮಾರುಕಟ್ಟೆಯಲ್ಲೂ ಈ ಸ್ಟಾಕ್ ಅದ್ಭುತ ಬೆಳವಣಿಗೆಯನ್ನು ತೋರಿಸಬಹುದು.

    ಬಿಪಿಎಲ್ ಲಿಮಿಟೆಡ್​ (BPL Ltd):

    ಬುಧವಾರ ಈ ಸ್ಟಾಕ್‌ನಲ್ಲಿ ಭಾರಿ ಏರಿಕೆ ಕಂಡುಬಂದಿದೆ. 20 ಪ್ರತಿಶತದಷ್ಟು ಹೆಚ್ಚಿದ ನಂತರ ಇದು ರೂ 93.80 ರ ಮಟ್ಟದಲ್ಲಿ ಕೊನೆಗೊಂಡಿತು. ಏರುಗತಿಯಲ್ಲಿರುವ ಈ ಷೇರು ಗುರುವಾರದ ವಹಿವಾಟಿನಲ್ಲೂ ಏರಿಕೆ ಕಾಣಬಹುದು.

    ಕ್ಲಾರಾ ಇಂಡಸ್ಟ್ರೀಸ್ (Clara Industries):
    ಈ ಸ್ಟಾಕ್‌ನಲ್ಲಿ ಖರೀದಿ ಚಟುವಟಿಕೆಗಳು ಕಂಡುಬಂದಿವೆ. ಬುಧವಾರ ಶೇ. 20ರಷ್ಟು ಏರಿಕೆಯಾದ ನಂತರ ರೂ. 174.95 ರ ಮಟ್ಟದಲ್ಲಿ ಮುಟ್ಟಿತು. ಬುಧವಾರದ ನಂತರದ ಮುಂದಿನ ವಹಿವಾಟಿನಲ್ಲಿ ಈ ಸ್ಟಾಕ್‌ನಲ್ಲಿ ಖರೀದಿ ಚಟುವಟಿಕೆಗಳನ್ನು ಕಾಣಬಹುದು, ಈ ಸ್ಟಾಕ್ ಮತ್ತೆ ಏರುವುದನ್ನು ಕಾಣಬಹುದು.

    ಲಿ ಲಾವೊಯಿರ್ (Le Lavoir):

    ಬುಧವಾರ ಈ ಸ್ಟಾಕ್‌ನಲ್ಲಿ ಶೇಕಡಾ 20 ರಷ್ಟು ಏರಿಕೆ ಕಂಡುಬಂದಿದೆ. ಈ ಷೇರು ಬೆಲೆ ರೂ. 117.86 ರ ಮಟ್ಟದಲ್ಲಿ ಕೊನೆಗೊಂಡಿತು. ಈ ಸ್ಟಾಕ್‌ನಲ್ಲಿ ಬುಲ್ಲಿಶ್ ಸೆಂಟಿಮೆಂಟ್‌ಗಳು ಸೃಷ್ಟಿಯಾಗುತ್ತಿದ್ದು, ಗುರುವಾರವೂ ಈ ಭಾವನೆಗಳು ಮುಂದುವರಿಯುವ ಸಾಧ್ಯತೆಯಿದೆ. ಗುರುವಾರವೂ ಈ ಷೇರು ಏರಿಕೆಯಾಗಬಹುದು.

    ಸೋನು ಇನ್ಫ್ರಾಟೆಕ್ (Sonu Infratech):


    ಈ ಸ್ಟಾಕ್ ಬುಧವಾರದ ವಹಿವಾಟಿನಲ್ಲಿ ಗಮನಾರ್ಹ ಏರಿಕೆ ಕಂಡಿತು. ಇದು ಶೇಕಡಾ 20ರ ಏರಿಕೆಯೊಂದಿಗೆ ರೂ 49.10 ರ ಮಟ್ಟ ಮುಟ್ಟಿತು. ಈ ಸ್ಟಾಕ್‌ನಲ್ಲಿ ಖರೀದಿದಾರರಿದ್ದಾರೆ. ಗುರುವಾರವೂ ಈ ಷೇರು ಏರಿಕೆಯನ್ನು ಕಾಣಬಹುದು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts