More

    ರೂ. 45ರಿಂದ 517ಕ್ಕೆ ಏರಿದ ಷೇರು ಬೆಲೆ: ಸೆಮಿಕಂಡಕ್ಟರ್​ ಘಟಕ ಸ್ಥಾಪನೆ ಘೋಷಿಸುತ್ತಿದ್ದಂತೆಯೇ ಷೇರು ಬೆಲೆ ಗಗನಕ್ಕೆ

    ಮುಂಬೈ: ಸಿಜಿ ಪವರ್ ಮತ್ತು ಇಂಡಸ್ಟ್ರಿಯಲ್ ಸೋಲುಷನ್ಸ್​ (CG Power and Industrial Solutions) ಷೇರುಗಳು ಬುಧವಾರ ಭಾರೀ ಪ್ರಮಾಣದಲ್ಲಿ ವಹಿವಾಟು ನಡೆಸಿದವು.

    ಇಂಟ್ರಾ-ಡೇ ವಹಿವಾಟಿನಲ್ಲಿ, ಈ ಕಂಪನಿಯ ಷೇರುಗಳ ಬೆಲೆ ಶೇಕಡಾ 8 ರಷ್ಟು ಜಿಗಿದು ರೂ 517 ಕ್ಕೆ ತಲುಪಿತು. ಈ ಮೂಲಕ ಮುರುಗಪ್ಪ ಸಮೂಹದ ಈ ಕಂಪನಿಯ ಷೇರುಗಳು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 517 ರೂ. ತಲುಪಿದವು. ಈ ಸ್ಟಾಕ್ ಸತತ 5 ನೇ ದಿನ ಉನ್ನತ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಈ ಅವಧಿಯಲ್ಲಿ ಈ ಸ್ಟಾಕ್​ ಬೆಲೆ 10% ವರೆಗೆ ಹೆಚ್ಚಾಗಿದೆ.

    ಕಂಪನಿಯು ಗುರ್​ಗಾಂವ್​ನಲ್ಲಿ ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪಿಸಲಿದೆ. ಜಪಾನ್‌ನ ರೆನೆಸಾಸ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಮತ್ತು ಥಾಯ್ಲೆಂಡ್‌ನ ಸ್ಟಾರ್ಸ್ ಮೈಕ್ರೋಎಲೆಕ್ಟ್ರಾನಿಕ್ಸ್ ಸಹಯೋಗದಲ್ಲಿದೆ ಈ ಘಟಕವನ್ನು ಸ್ಥಾಪಿಸಲಾಗುವುದು ಎಂದು ಹೇಳಿದೆ.

    ಗುಜರಾತ್ ಸಾಣಂದ್​ನಲ್ಲಿ ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪಿಸಲಿದೆ. ರೂ 7,600 ಕೋಟಿ ಬಂಡವಾಳದಲ್ಲಿ ಈ ಘಟಕ ಸ್ಥಾಪನೆಯಾಗಲಿದೆ. ರೆನೆಸಾಸ್ ವಿಶೇಷ ಚಿಪ್‌ಗಳ ಮೇಲೆ ಕೇಂದ್ರೀಕರಿಸುವ ಸೆಮಿಕಂಡಕ್ಟರ್​ ಕಂಪನಿಯಾಗಿದೆ. ಇದು 12 ಸೆಮಿಕಂಡಕ್ಟರ್ ಸೌಲಭ್ಯಗಳನ್ನು ನಿರ್ವಹಿಸುತ್ತದೆ. ಅಲ್ಲದೆ, ಮೈಕ್ರೋಕಂಟ್ರೋಲರ್, ಅನಲಾಗ್, ಪವರ್ ಮತ್ತು ಸಿಸ್ಟಮ್ ಆನ್ ಚಿಪ್ (‘SoC’) ಉತ್ಪನ್ನಗಳಲ್ಲಿ ಪ್ರಮುಖ ಕಂಪನಿಯಾಗಿದೆ. ಫೆಬ್ರವರಿ 29 ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಭಾರತದ ಸೆಮಿಕಂಡಕ್ಟರ್ ಯೋಜನೆ ಅಡಿಯಲ್ಲಿ ಜಂಟಿ ಯೋಜನೆಗೆ ಅನುಮೋದನೆ ನೀಡಿದೆ..

    ಕಂಪನಿಯ ಷೇರುಗಳ ಬೆಲೆ ಕಳೆದ ಒಂದು ತಿಂಗಳಲ್ಲಿ 17% ಮತ್ತು ಈ ವರ್ಷದ ಆರಂಭದಿಂದ ಇದುವರೆಗೆ 11% ಹೆಚ್ಚಾಗಿದೆ. ಈ ಸ್ಟಾಕ್ ಒಂದು ವರ್ಷದಲ್ಲಿ 75% ರಷ್ಟು ಏರಿಕೆ ಕಂಡಿದೆ. ಈ ಷೇರು ಕಳೆದ 5 ವರ್ಷಗಳಲ್ಲಿ 1,031.64% ಲಾಭವನ್ನು ನೀಡಿದೆ. ಈ ಅವಧಿಯಲ್ಲಿ ಇದರ ಬೆಲೆ 45 ರೂ.ನಿಂದ ಪ್ರಸ್ತುತ 516.65 ರೂ.ಗೆ ಏರಿಕೆಯಾಗಿದೆ.

    ಆಟೋ ಷೇರು ಖರೀದಿಸಿದರೆ 100% ಲಾಭ: ಮಾರುಕಟ್ಟೆ ತಜ್ಞನ ಸಲಹೆ

     

    ಕಾರು ತಯಾರಿಸುವ ಸಜ್ಜನ್​ ಜಿಂದಾಲ್​ ಕನಸು ನನಸು: ಎಂಜಿ ಮೋಟಾರ್​ ಜತೆಗೂಡಿ ಜಂಟಿ ಉದ್ಯಮ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts