More

    499 ರಿಂದ 1 ರೂಪಾಯಿಗೆ ಕುಸಿದಿದ್ದ ಷೇರು: ರಿಲಯನ್ಸ್ ಪವರ್ ಸ್ಟಾಕ್​ಗೆ ಈಗ ಭರ್ಜರಿ ಡಿಮ್ಯಾಂಡು ಏಕೆ?

    ಮುಂಬೈ: ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಪವರ್ ಕಂಪನಿಯ ಷೇರುಗಳಲ್ಲಿ ಬಲವಾದ ಏರಿಕೆ ಕಂಡುಬಂದಿದೆ. ರಿಲಯನ್ಸ್ ಪವರ್‌ನ ಷೇರುಗಳ ಬೆಲೆ ಬುಧವಾರ ಶೇಕಡಾ 5 ರಷ್ಟು ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್‌ ಹಿಟ್​ ಆಯಿತು. ಈ ಷೇರು 23.90 ರೂ ತಲುಪಿತು. ಕಳೆದ 5 ದಿನಗಳಲ್ಲಿ ಕಂಪನಿಯ ಷೇರುಗಳ ಬೆಲೆ 20% ಕ್ಕಿಂತ ಹೆಚ್ಚು ಏರಿಕೆಯಾಗಿದೆ.

    ರಿಲಯನ್ಸ್ ಪವರ್ ಕಳೆದ ವಾರ ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಡಿಬಿಎಸ್ ಬ್ಯಾಂಕ್‌ಗಳ ಸಾಲವನ್ನು ಇತ್ಯರ್ಥಪಡಿಸಿದೆ ಎಂದು ವರದಿಯಾಗಿದೆ.

    ವಾಣಿಜ್ಯ ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು, ರಿಲಯನ್ಸ್ ಪವರ್ ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಸಾಲ ಮುಕ್ತವಾಗಲು ಬಯಸಿದೆ ಎಂದು ಹೇಳಿದ್ದಾರೆ.

    ಕಳೆದ 4 ವರ್ಷಗಳಲ್ಲಿ ರಿಲಯನ್ಸ್ ಪವರ್ ಷೇರುಗಳಲ್ಲಿ ಭಾರಿ ಏರಿಕೆಯಾಗಿದೆ. ಕಳೆದ 4 ವರ್ಷಗಳಲ್ಲಿ ಕಂಪನಿಯ ಷೇರುಗಳ ಬೆಲೆ ಅಂದಾಜು 2000% ಏರಿಕೆಯಾಗಿದೆ. ರಿಲಯನ್ಸ್ ಪವರ್‌ನ ಷೇರುಗಳ ಬೆಲೆ 27 ಮಾರ್ಚ್ 2020 ರಂದು 1.13 ರೂ. ಇತ್ತು. ಈಗ 23.90 ರೂ.ಗೆ ತಲುಪಿದೆ. ಕಳೆದ ಒಂದು ವರ್ಷದಲ್ಲಿ, ರಿಲಯನ್ಸ್ ಪವರ್ ಷೇರುಗಳ ಬೆಲೆ ಅಂದಾಜು 130% ರಷ್ಟು ಜಿಗಿದಿದೆ.

    ಕಂಪನಿಯ ಷೇರುಗಳ 52 ವಾರಗಳ ಗರಿಷ್ಠ ಮಟ್ಟವು 33.10 ರೂ. ಇದೆ. ಇದೇ ಸಮಯದಲ್ಲಿ, ರಿಲಯನ್ಸ್ ಪವರ್ ಷೇರುಗಳ 52 ವಾರಗಳ ಕನಿಷ್ಠ ಬೆಲೆ 9.05 ರೂ. ಇದೆ.

    ರಿಲಯನ್ಸ್ ಪವರ್‌ನ ಮೂಲ ಕಂಪನಿಯಾದ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಕೂಡ ಜೆಸಿ ಫ್ಲವರ್ಸ್ ಅಸೆಟ್ ರಿಕನ್‌ಸ್ಟ್ರಕ್ಷನ್ ಕಂಪನಿಯ 2100 ಕೋಟಿ ರೂ.ಗಳ ಬಾಕಿಯನ್ನು ಇತ್ಯರ್ಥಗೊಳಿಸಲು ಸಿದ್ಧತೆ ನಡೆಸಿದೆ. ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನ ಷೇರುಗಳ ಬೆಲೆ ಬುಧವಾರ 2% ರಷ್ಟು ಏರಿಕೆಯಾಗಿ 248.10 ರೂ. ತಲುಪಿದೆ.

    ಕಳೆದ 4 ವರ್ಷಗಳಲ್ಲಿ, ರಿಲಯನ್ಸ್ ಇನ್ಫ್ರಾ ಷೇರುಗಳ ಬೆಲೆ ಅಂದಾಜು 2550% ರಷ್ಟು ಏರಿಕೆಯಾಗಿದೆ. ಕಂಪನಿಯ ಷೇರುಗಳ ಬೆಲೆ ಮಾರ್ಚ್ 27, 2020 ರಂದು 9.20 ರೂ. ಇತ್ತು. ಈಗ ರೂ 248.10 ತಲುಪಿದೆ. ರಿಲಯನ್ಸ್ ಇನ್ಫ್ರಾ ಷೇರುಗಳ 52 ವಾರಗಳ ಗರಿಷ್ಠ ಬೆಲೆ 264 ರೂ. ಇದೆ. ಈ ಷೇರಿ ಸಾರ್ವಕಾಲಿಕ ಗರಿಷ್ಠ ಬೆಲೆ ರೂ 499.74 ಹಾಗೂ ಕನಿಷ್ಠ ಬೆಲೆ 1 ರೂಪಾಯಿ ಇದೆ.

    ಸುಪ್ರಸಿದ್ಧ ಇನ್ವೆಸ್ಟರ್​ ಜುಂಜುನ್‌ವಾಲಾ ಖರೀದಿಸಿದ ಸ್ಟಾಕ್​: ಬುಧವಾರ ಒಂದೇ ದಿನದಲ್ಲಿ 20% ಹೆಚ್ಚಳದೊಂದಿಗೆ ಅಪ್ಪರ್​ ಸರ್ಕ್ಯೂಟ್‌ ಹಿಟ್​

    ಸದ್ಯ ಕುಸಿತ ಕಂಡು ರೂ 379 ತಲುಪಿರುವ ಟಾಟಾ ಷೇರು: ರೂ. 500ರವರೆಗೂ ಏರಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು

    ಬುಧವಾರ ಒಂದೇ ದಿನದಲ್ಲಿ 20% ಏರಿಕೆ ಕಂಡ ಸ್ಟಾಕ್​ಗಳು: ಗುರುವಾರವೂ ಈ ಷೇರುಗಳಲ್ಲಿ ಸಿಗಬಹುದು ಲಾಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts