More

    ಪಬ್ಲಿಕ್ ಪರೀಕ್ಷೆ ಬಗ್ಗೆ ಮಕ್ಕಳ ಆತಂಕ ನಿವಾರಿಸಿ: ಶಿಕ್ಷಣ ಸಚಿವರಿಗೆ ಪತ್ರ

    ಬೆಂಗಳೂರು: 5,8 ಮತ್ತು 9ನೇ ತರಗತಿ ಪರೀಕ್ಷೆಯ ಗೊಂದಲದಿಂದ ಮಕ್ಕಳ ಮಸಸ್ಸಿನಲ್ಲಿ ಆಗುತ್ತಿರುವ ಕಳವಳ ಮತ್ತು ಆತಂಕ ನಿವಾರಣೆ ಮಾಡಲು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳದಿರುವುದು ಬೇಸರದ ಸಂಗತಿ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್ ನ ನಿರ್ದೇಶಕ ನಾಗಸಿಂಹ ರಾವ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ.

    ಎರಡು ದಿನ ನಡೆದು ಮುಂದೂಡಿಕೆ ಆಗಿರುವ ಪರೀಕ್ಷೆಗಳು ನಡೆಯುತ್ತವೆಯೇ? ಪರೀಕ್ಷೆ ನಿಂತು ಹೋಗುತ್ತದೆಯೇ ? ಎಂಬ ಪ್ರಶ್ನೆಗಳು ಮಕ್ಕಳನ್ನು ಮಾತ್ರವಲ್ಲ ಶಿಕ್ಷಕರನ್ನು ಹಾಗೂ ಪಾಲಕರನ್ನು ಕಾಡುತ್ತಿದೆ ಎಂದು ಆತಂಕ ವ್ಕಕ್ತಪಡಿಸಿದ್ದಾರೆ.

    ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದಲ್ಲಿ ಮಕ್ಕಳ ಶಿಕ್ಷಣದ ಹಕ್ಕು ಹಾಗೂ ಜೀವಿಸುವ ಹಕ್ಕು ಗೊಂದಲ ಪರಿಸ್ಥಿತಿಯಲ್ಲಿದೆ. ಸರ್ಕಾರದ ಆದೇಶದಂತೆ ಪಬ್ಲಿಕ್ ಪರೀಕ್ಷೆಗೆ ಶಾಲೆಗಳು ಮತ್ತು ಪಾಲಕರು ಮಕ್ಕಳನ್ನು ಪರೀಕ್ಷಗೆ ಮಾನಸಿಕವಾಗಿ ಸಿದ್ದಪಡಿಸಿದ್ದರು . ಆದರೆ ಎರಡು ದಿನಗಳ ಪರೀಕ್ಷೆಯ ನಂತರ ನ್ಯಾಯಾಲಯ ಪರೀಕ್ಷೆಗಳನ್ನು ತಡೆಹಿಡಿದಿದೆ. ಪ್ರಕರಣ ನ್ಯಾಯಾಲಯದ ಮುಂದಿದೆ. ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಮಕ್ಕಳು ಮುಂದಿನ ವಿಷಯಗಳ ಪರೀಕ್ಷೆಗೆ ಸಿದ್ಧರಾಗುವುದನ್ನು ಬಿಟ್ಟಿದ್ದಾರೆ. ಹಾಗೆಯೇ, ಮಕ್ಕಳಿಗೆ ಉತ್ಸಾಹ ತುಂಬಲು ಪ್ರೋತ್ಸಾಹ ಮಾಡಲು ಶಾಲೆಗಳು ಸಹ ಯಾವುದೇ ಕ್ರಮ ಕೈ ಗೊಂಡಿಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts