More

    ಐಐಟಿ, ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಯ ಟೈಮ್ ಟೇಬಲ್ ಸೃಷ್ಟಿಸಿದೆ ಸಂಚಲನ..!

    ನವದೆಹಲಿ: ಐಐಟಿ, ಸಿವಿಲ್ಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಕಷ್ಟಪಟ್ಟು ಓದುತ್ತಾರೆ. ಅವರು ತಮ್ಮ ಕನಸುಗಳನ್ನು ನನಸಾಗಿಸಲು ಯಾರಾದರೂ ಕಲ್ಪಿಸಿಕೊಳ್ಳುವುದಕ್ಕಿಂತ ಹೆಚ್ಚು ಶ್ರಮಿಸುತ್ತಾರೆ. ಹಾಗಾಗಿಯೇ ಐಐಟಿ, ಜೆಇಇಗೆ ಸೇರ್ಪಡೆಯಾಗಬೇಕೆಂದು ಕನಸು ಕಾಣುವ ವಿದ್ಯಾರ್ಥಿಯೊಬ್ಬನ ದೈನಂದಿನ ಟೈಮ್ ಟೇಬಲ್ ವೈರಲ್ ಆಗಿದೆ . ಆತನ ಸ್ನೇಹಿತ ಸ್ವತಃ ಈ ಟೈಮ್ ಟೇಬಲ್ ಅನ್ನು ಹಂಚಿಕೊಂಡಿದ್ದಾರೆ

    ಇದನ್ನೂ ಓದಿ: ಕೇಜ್ರಿವಾಲ್​ಗೆ ಹಿನ್ನಡೆ.. ಇಡಿ ಬಂಧಿಸದಂತೆ ಸಲ್ಲಿಸಿದ್ದ ಅರ್ಜಿ ವಜಾ

    ಶ್ರೀ ಆರ್‌ಸಿ ಎಂಬ ಟ್ವಿಟರ್ ಖಾತೆಯಲ್ಲಿ ಹದಿಹರೆಯದ ಯುವಕ ಐಐಟಿ, ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ತನ್ನ ಸ್ನೇಹಿತನ ವೇಳಾಪಟ್ಟಿಯನ್ನು ಅಪ್‌ಲೋಡ್ ಮಾಡಿದ್ದಾನೆ. ಆ ವೇಳಾಪಟ್ಟಿಯ ಪ್ರಕಾರ, ಆತ ಬೆಳಿಗ್ಗೆ 4.30 ಕ್ಕೆ ಎದ್ದೇಳುತ್ತಾರೆ. ಅದರ ನಂತರ ಅವರು ಹಿಂದಿನ ದಿನದ ಪಾಠಗಳನ್ನು ಒಂದೂವರೆ ಗಂಟೆಗಳ ಕಾಲ ಪರಿಶೀಲಿಸುತ್ತಾರೆ. ನಂತರ ಅವರು ಮತ್ತೆ ಅರ್ಧ ಗಂಟೆಯನ್ನು ಸ್ವಂತ ಕೆಲಸಕ್ಕೆ ಮೀಸಲಿಡುತ್ತಾರೆ. ಅದರ ನಂತರ ಅವರು ಅಧ್ಯಯನದಲ್ಲಿ ತೊಡಗುತ್ತಾರೆ. ಬೆಳಳಗ್ಗೆ 10 ಗಂಟೆಗೆ ಅವರು ಹದಿನೈದು ನಿಮಿಷಗಳ ಕಾಲ ಸಣ್ಣ ನಿದ್ದೆ ಮಾಡುತ್ತಾರೆ. ಅಂದರೆ ಪವರ್ ನಿದ್ದೆ. ಅದರ ನಂತರ ಮತ್ತೆ ಪುಸ್ತಕಗಳೊಂದಿಗೆ ಓದು ಶುರುವಾಗುತ್ತದೆ.

    ಅವರು ಊಟಕ್ಕೆ ಕೇವಲ 20 ನಿಮಿಷ ಕಳೆಯುತ್ತಾರೆ. ಅಲ್ಲಿಂದ ಮತ್ತೆ ಓದಲು ಆರಂಭಿಸಿ. ಅದರ ನಂತರ ಮಧ್ಯಾಹ್ನ 3.00 ರಿಂದ 3.15 ರವರೆಗೆ ರೆಸ್ಟ್​ ಪಡೆದುಕೊಳ್ಳುತ್ತಾರೆ. ಆ ನಂತರ ಮತ್ತೆ ಸ್ಟಡಿ ಮುಂದುವರಿಸುತ್ತಾರೆ. ರಾತ್ರಿ 9.00 ರಿಂದ 9.30 ರವರೆಗೆ ರಾತ್ರಿಯ ಊಟ.. ನಂತರ 12ಗಂಟೆ ವರೆಗೆ ಮತ್ತೆ ಅಧ್ಯಯನ. ಅಷ್ಟೇ ಅಲ್ಲ. ದಿನವಿಡೀ ಅವರನ್ನು ಪ್ರೇರೇಪಿಸುವಂತೆ ವೇಳಾಪಟ್ಟಿಯಡಿಯಲ್ಲಿ ವಾಖ್ಯಗಳನ್ನೂ ಬರೆಯಲಾಗಿದೆ. ಈ ದಿನ ಮತ್ತೆ ಬರುವುದಿಲ್ಲ..ನೀವು ಏನು ಬೇಕಾದರೂ ಮಾಡಿ ಎಂದು ಅವರು ಬರೆದಿದ್ದಾರೆ

    ತನ್ನ ಕುಟುಂಬವನ್ನು ಬಡತನದಿಂದ ಹೊರತರಲು ತನ್ನ ಸ್ನೇಹಿತ ತುಂಬಾ ಪ್ರಯತ್ನಿಸುತ್ತಿದ್ದಾನೆ ಎಂದು ನೆಟಿಜನ್ ಹೇಳಿದ್ದಾನೆ.. ಈ ವೇಳಾಪಟ್ಟಿ ಸದ್ಯ ವೈರಲ್ ಆಗುತ್ತಿದೆ.

    ವಿದ್ಯಾರ್ಥಿನಿಯ ಪರಿಶ್ರಮಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೊಂದು ಶ್ರಮ ಬೇಡ ಎಂದು ಕೆಲವರು ಖುಷಿ ಪಡಿಸಲು ಯತ್ನಿಸಿದ್ದಾರೆ.

    ಹದಿಹರೆಯದಲ್ಲಿ ಕಡಿಮೆ ನಿದ್ದೆ ಮಾಡಿದರೆ ಮುಂದಿನ ದಿನಗಳಲ್ಲಿ ಮೆದುಳಿನ ಸಾಮರ್ಥ್ಯ ಹಾಳಾಗುತ್ತದೆ ಎಂದಿದ್ದಾರೆ. ವ್ಯಾಯಾಮಗಳು ಸಹ ಅವರ ವೇಳಾಪಟ್ಟಿಯ ಭಾಗವಾಗಿರಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ.

    ಸುಪ್ರೀಂ ಕೋರ್ಟ್ ಆದೇಶದ ನಂತರ ಚುನಾವಣಾ ಆಯೋಗಕ್ಕೆ ಮಾಹಿತಿ ಹಸ್ತಾಂತರಿಸಿದ ಎಸ್‌ಬಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts