More

    ಸುಪ್ರೀಂ ಕೋರ್ಟ್ ಆದೇಶದ ನಂತರ ಚುನಾವಣಾ ಆಯೋಗಕ್ಕೆ ಮಾಹಿತಿ ಹಸ್ತಾಂತರಿಸಿದ ಎಸ್‌ಬಿಐ

    ನವದೆಹಲಿ: ಸುಪ್ರೀಂ ಕೋರ್ಟ್ ಎಚ್ಚರಿಕೆಯ ನಂತರ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಚುನಾವಣಾ ಬಾಂಡ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಹಸ್ತಾಂತರಿಸಿದೆ.

    ಇದು ಚುನಾವಣಾ ಬಾಂಡ್‌ಗಳ ಸರಣಿ ಸಂಖ್ಯೆಗಳು ಮತ್ತು ಪ್ರತಿ ಬಾಂಡ್‌ನ ವಿಶಿಷ್ಟ ಸಂಖ್ಯೆಗಳನ್ನು ಒಳಗೊಂಡಿರುತ್ತದೆ. ಅಫಿಡವಿಟ್‌ನಲ್ಲಿ ಖಾತೆ ಸಂಖ್ಯೆ ಮತ್ತು ಕೆವೈಸಿ ಮಾಹಿತಿಯನ್ನು ಹೊರತುಪಡಿಸಿ ಎಲ್ಲವನ್ನೂ ಹಸ್ತಾಂತರಿಸಲಾಗಿದೆ ಎಂದು ಎಸ್‌ಬಿಐ ಹೇಳಿದೆ.

    ಇದನ್ನೂ ಓದಿ:ದೀಪಿಕಾಗಿಂತ ಕರೀನಾ ಬೆಸ್ಟ್​..ಇಮ್ತಿಯಾಜ್ ಅಲಿ ಹೀಗೆ ಹೇಳಿದ್ದೇಕೆ?

    ಈ ಹಿಂದೆ ಎಸ್ ಬಿಐ ಸಲ್ಲಿಸಿದ್ದ ಮಾಹಿತಿ ಪೂರ್ಣವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ಗುರುವಾರ(ಮಾ.21)ರಂದು ಸಂಜೆ 5 ಗಂಟೆಯೊಳಗೆ ಎಲ್ಲ ಮಾಹಿತಿ ನೀಡುವಂತೆ ಅಂತಿಮ ಸೂಚನೆ ನೀಡಿತ್ತು. ಪಡೆದ ಮಾಹಿತಿಯನ್ನು ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕು ಎಂದೂ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ಸೂಚಿಸಿತ್ತು.

    ಎಲೆಕ್ಟ್ರೋಲ್ ಬಾಂಡ್ ಸ್ಕಿಮ್ ರದ್ದುಗೊಳಿಸಿದ ಆದೇಶದಲ್ಲಿ ಬಾಂಡ್ ಖರೀದಿಸಿದ ಮತ್ತು ಪಡೆದವರ ಹೆಸರು, ದಿನಾಂಕ, ಮೊತ್ತ ಸೇರಿದಂತೆ ಎಲ್ಲಾ ಮಾಹಿತಿಯನ್ನು ನೀಡುವಂತೆ ನ್ಯಾಯಾಲಯವು ಈ ಹಿಂದೆ ಸೂಚಿಸಿತ್ತು. ಆದಾಗ್ಯೂ, ಬಾಂಡ್ ಸಂಖ್ಯೆಗಳನ್ನು ಸಾರ್ವಜನಿಕಗೊಳಿಸಲಾಗಿಲ್ಲ. ಕೋರ್ಟ್​ ಉಲ್ಲೇಖಿಸಿದ ಮಾಹಿತಿಯನ್ನು ಮಾತ್ರ ಆಯೋಗಕ್ಕೆ ರವಾನಿಸಲಾಗಿದೆ ಎಂದು ಎಸ್‌ಬಿಐ ಪ್ರಕಟಿಸಿದೆ.

    ಬಳಿಕ ನ್ಯಾಯಾಲಯವು ಎಲ್ಲ ವಿವರಗಳನ್ನೂ ಪರಿಶೀಲಿಸಿತು. ಮಾರ್ಚ್ 18 ರಂದು ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆ ನಡೆಸಿದಾಗ ಸಮರ್ಪಕ ಮಾಹಿತಿ ಮಾತ್ರವಲ್ಲದೆ ಎಲೆಕ್ರಟ್ರಾಲ್ ಬಾಂಡ್‌ಗಳಿಗೆ ಸಂಬಂಧಿಸಿದಂತೆ ತನ್ನಲ್ಲಿರುವ ಎಲ್ಲಾ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಹಸ್ತಾಂತರಿಸುವಂತೆ ಎಸ್‌ಬಿಐಗೆ ಸೂಚಿಸಿತ್ತು. ಈ ಸಂಬಂಧ ಎಸ್‌ಬಿಐಗೂ ನೋಟಿಸ್ ಕಳುಹಿಸಲಾಗಿತ್ತು.

    ಜಪಾನ್​ನಲ್ಲಿ ಭೂಕಂಪ.. 28ನೇ ಮಹಡಿಯಲ್ಲಿ ರಾಜಮೌಳಿ ಕುಟುಂಬ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts