ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್​ಬಾಸ್ ಮಾಜಿ ​ ಸ್ಪರ್ಧಿ

Ankita Lokhande
Published on

ಮುಂಬೈ: ಪ್ರತಿಷ್ಠಿತ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 17ರ ಸ್ಪರ್ಧಿ, ಸುಶಾಂತ್​ ಸಿಂಗ್​ ರಜಪೂತ್​ ಅವರ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಇತ್ತೀಚಿನ ದಿನಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಈ ಹಿಂಧೆ ಪ್ರೀತಿ, ಪ್ರೇಮ, ಬ್ರೇಕ್​ಅಪ್ ವಿಚಾರಕ್ಕೆ ಸುದ್ದಿ ಆಗಿದ್ದ ಅಂಕಿತಾ ಲೋಖಂಡೆ ಈಗ ಮದುವೆಯ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

ಉದ್ಯಮಿ ವಿಕ್ಕಿ ಜೈನ್ ಜೊತೆ ಕೆಲ ವರ್ಷದಿಂದ ಡೇಟಿಂಗ್​ ಮಾಡುತ್ತಿದ್ದ ಅಂಕಿತಾ 2021ರಲ್ಲಿ ಮದುವೆಯಾಗಲು ನಿರ್ಧರಿಸಿದರು. ವಿಕ್ಕಿ ಜೈನ್​ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರೂ ಇಬ್ಬರೂ ಪ್ರೀತಿಗೆ ಪ್ರಾಮುಖ್ಯತೆ ನೀಡಿ ಮದುವೆಯಾದರು. ಈಗ ಇವರು ಮತ್ತೆ ಮದುವೆ ಆಗುತ್ತಿರುವ ಫೋಟೋ ವೈರಲ್ ಆಗಿದೆ.

ಮದುವೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಕ್ಕಿ ಹಾಗೂ ಅಂಕಿತಾ ಅವರ ಅನೇಕ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗಿವೆ. ಅಭಿಮಾನಿಗಳು ಇವರಿಗೆ ಪ್ರೀತಿ ಮತ್ತು ಹಾರೈಕೆಗಳನ್ನು ಸುರಿಸಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋ ನೋಡಿ ಅಭಿಮಾನಿಗಳೂ ಶಾಕ್ ಆಗಿದ್ದಾರೆ. 

Ankita Lokhande

ಇದೀಗ ಮೂರನೇ ಬಾರಿಗೆ ಮತ್ತೆ ಮದುವೆಯಾಗಿದ್ದಾರೆ ಎನ್ನಲಾಗಿದೆ. ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಅವರ ಮದುವೆಯ ಸೆಟಪ್‌ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಂಪತಿ ಇದಕ್ಕೂ ಮುಂಚೆ ವಿದೇಶದಲ್ಲಿ ಕ್ರಿಶ್ಚಿಯನ್‌ ಸಂಪ್ರದಾಯದಂತೆ ಮದುವೆ ಆಗಿದ್ದರು.

ಅಂಕಿತಾ ಮತ್ತು ವಿಕ್ಕಿ ಜೈನ್‌ ಅವರು 2021ರ ಡಿಸೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಹಸೆಮಣೆ ಏರಿದ ನಟಿ ಆ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು.ಇದಾದ ಬಳಿಕ 2023ರ 9ನೇ ಅಗಸ್ಟ್‌ನಲ್ಲಿ ಕ್ರಿಶ್ಚಿಯನ್‌ ಸಂಪ್ರದಾಯದಂತೆ ಮದುವೆಯಾದರು. ಇದೀಗ 2024ರಲ್ಲಿ ಮೂರನೇ ಬಾರಿಗೆ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net