More

    ವಿರಾಮದ ಬಳಿಕ ದಿಗ್ಗಜರ ಸಮಾಗಮಕ್ಕೆ ವೇದಿಕೆ ಸಜ್ಜು: ಹೇಗಿದೆ ಆರ್‌ಸಿಬಿ-ಸಿಎಸ್‌ಕೆ ಆಡುವ ಹನ್ನೊಂದರ ಬಳಗ ?

    ಚೆನ್ನೈ: ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿರುವ ಐಪಿಎಲ್ 17ನೇ ಆವೃತ್ತಿಗೆ ಶುಕ್ರವಾರ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್ ಹಾಗೂ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪ್ರಶಸ್ತಿ ಬರ ನೀಗಿಸುವ ಹಂಬಲದಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಕಡಲ ತೀರದ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.

    ವಿರಾಮದ ಬಳಿಕ ದಿಗ್ಗಜರ ಸಮಾಗಮ: ಕಳೆದ ಎರಡು ವರ್ಷಗಳಿಂದ ಟೀಮ್ ಇಂಡಿಯಾ ಹಾಗೂ ಸಿಎಸ್‌ಕೆ ಮಾಜಿ ನಾಯಕ ಧೋನಿಗೆ ಕೊನೆಯ ಆವೃತ್ತಿ ಎಂದು ಅಭಿಮಾನಿಗಳು ಕುತೂಹಲದಿಂದ ನೆಚ್ಚಿನ ಆಟಗಾರನಿಗೆ ಭಾರಿ ಬೆಂಬಲ ನೀಡಿದ್ದರು. ಆದರೆ ನಿವೃತ್ತಿಯ ಸುಳಿವು ನೀಡದ ಧೋನಿ ಪಾಲಿಗೆ ಈ ಆವೃತ್ತಿ ಬಹುತೇಕ ಕೊನೇ ಎನಿಸಿದೆ. 42 ವರ್ಷದ ಧೋನಿ ಕಳೆದ ವರ್ಷ ಮಂಡಿನೋವಿನ ಸಮಸ್ಯೆಯ ನಡುವೆಯೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಬಳಿಕ ಶಸಚಿಕಿತ್ಸೆಗೆ ಒಳಪಟ್ಟು ಸಂಪೂರ್ಣವಾಗಿ ಫಿಟ್ ಆಗಿರುವ ಧೋನಿ ಹೊಸ ಕೇಶ ವಿನ್ಯಾಸದೊಂದಿಗೆ 10 ತಿಂಗಳ ಬಳಿಕ ಅಂಗಣದಲ್ಲಿ ಕಾಣಿಸಿಕೊಳ್ಳಲಿದ್ದು, ಪ್ರಮುಖ ಆಕರ್ಷಣೆಯಾಗಿರಲಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ, ಹಾಗೂ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಹ ಈ ಬಾರಿ ಪ್ರಶಸ್ತಿ ಜಯಿಸುವ ವಿಶ್ವಾಸ ವ್ಯಕ್ತಪಡಿಸಿದ್ದು, ಸುಮಾರು 80 ದಿನಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲಿದ್ದಾರೆ. ಜನವರಿಯಲ್ಲಿ ಬೆಂಗಳೂರಿನಲ್ಲಿ ಅಂತಿಮ ಪಂದ್ಯವನ್ನಾಡಿದ್ದ ಕೊಹ್ಲಿ ಬಳಿಕ, 2ನೇ ಮಗುವಿನ ನಿರೀಕ್ಷೆಯಲ್ಲಿ ಕ್ರಿಕೆಟ್‌ನಿಂದ ದೂರವಿದ್ದರು. ನೆಚ್ಚಿನ ಇಬ್ಬರು ಆಟಗಾರರನ್ನು ಒಂದೇ ವೇದಿಕೆಯಲ್ಲಿ ನೋಡಲು ಅಭಿಮಾನಿಗಳು ಕಾತರದಲ್ಲಿದ್ದಾರೆ.

    ಟೀಮ್ ನ್ಯೂಸ್
    ಆರ್‌ಸಿಬಿ: ಪ್ಲೆಸಿಸ್ ಜತೆಗೆ ಕೊಹ್ಲಿ ಇನಿಂಗ್ಸ್ ಆರಂಭಿಸಲಿದ್ದು, ತಂಡದ ದುಬಾರಿ ಆಟಗಾರ ಕ್ಯಾಮರಾನ್ ಗ್ರೀನ್ 3ನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಫಿನಿಷರ್ ಪಾತ್ರ ನಿರ್ವಹಿಸಬಲ್ಲ ಆಟಗಾರರ ಕೊರತೆ ಇದೆ. ಸಿರಾಜ್ ಬೌಲಿಂಗ್ ವಿಭಾಗ ಮುನ್ನಡೆಸಲಿದ್ದು, 3ನೇ ವೇಗಿ ಸ್ಥಾನಕ್ಕೆ ಯಶ್ ದಯಾಳ್, ಆಕಾಶ್ ದೀಪ್ ನಡುವೆ ತೀವ್ರ ಪೈಪೋಟಿ ಇದೆ. 4ನೇ ವಿದೇಶಿ ಆಟಗಾರನ ಆಯ್ಕೆಯೂ ತಂಡಕ್ಕೆ ಸವಾಲೆನಿಸಿದೆ.
    ಸಂಭಾವ್ಯ ತಂಡ: ್ಾ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಕ್ಯಾಮರಾನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿ.ಕೀ), ರಜತ್ ಪಾಟೀದಾರ್, ಮೊಹಮದ್ ಸಿರಾಜ್, ವೈಶಾಕ್ ವಿಜಯ್‌ಕುಮಾರ್, ಟಾಮ್ ಕರ‌್ರನ್/ಲಾಕಿ ರ್ಗ್ಯುಸನ್, ಯಶ್ ದಯಾಳ್/ಆಕಾಶ್ ದೀಪ್, ಮಯಾಂಕ್ ದಾಗರ್/ಕರ್ಣ್ ಶರ್ಮ.

    ಸಿಎಸ್‌ಕೆ: ರಚಿನ್ ರವೀಂದ್ರ ಪದಾರ್ಪಣೆ ಮಾಡುವ ನಿರೀಕ್ಷೆ ಇದ್ದು, ಋತುರಾಜ್ ಜತೆಗೆ ಆರಂಭಿಸಲಿದ್ದಾರೆ. 3ನೇ ಕ್ರಮಾಂಕದಲ್ಲಿ ಅನುಭವಿ ಅಜಿಂಕ್ಯ ರಹಾನೆ ಆಡುವ ಸಾಧ್ಯತೆ ಇದೆ. ಆದರೆ ಅನುಭವಿ ವೇಗಿಗಳ ಕೊರತೆ ತಂಡದಲ್ಲಿದೆ. ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಜತೆಗೆ ತುಷಾರ್ ದೇಶಪಾಂಡೆ ರೇಸ್‌ನಲ್ಲಿದ್ದಾರೆ.
    ಸಂಭಾವ್ಯ ತಂಡ: ರಚಿನ್ ರವೀಂದ್ರ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಡೆರಿಲ್ ಮಿಚೆಲ್/ಮೊಯಿನ್ ಅಲಿ, ಎಂಎಸ್ ಧೋನಿ(ವಿ,ಕೀ), ಶಿವಂ ದುಬೆ/ತುಷಾರ್ ದೇಶಪಾಂಡೆ, ರವೀಂದ್ರ ಜಡೇಜಾ, ದೀಪಕ್ ಚಹರ್, ಮಹೀಶ್ ತೀಕ್ಷಣ, ಶಾರ್ದೂಲ್ ಠಾಕೂರ್, ಮುಕೇಶ್ ಚೌಧರಿ.

    ಮುಖಾಮುಖಿ: 31
    ಆರ್‌ಸಿಬಿ: 10
    ಸಿಎಸ್‌ಕೆ: 20
    ರದ್ದು: 1
    ಆರಂಭ: ರಾತ್ರಿ 8.00
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಸಿನಿಮಾ (ಒಟಿಟಿ).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts