More

    ‘ನಿತ್ಯ ಹಾಗೆ ಮಾಡುವವನನ್ನೇ ಮದುವೆಯಾಗ್ತೇನೆ’.. ಹಿಟ್-2 ನಾಯಕಿ ಹೇಳಿದ್ದೇನು?

    ಹೈದರಾಬಾದ್​: ಮದುವೆಯೆಂದರೆ ಪ್ರತಿಯೊಬ್ಬರ ಜೀವನದಲ್ಲಿ ಒಮ್ಮೆ ಬರುವ ಸಿಹಿಯಾದ ಸಂಭ್ರಮ. ಅದಕ್ಕಾಗಿಯೇ ಯುವಜನ ತಮ್ಮ ಭವಿಷ್ಯದ ಸಂಗಾತಿಯ ಬಗ್ಗೆ ಸಾಕಷ್ಟು ಕಲ್ಪನಾಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಅದರಲ್ಲೂ ಹುಡುಗಿಯರು ತಮ್ಮ ಭಾವಿ ಪತಿಗಾಗಿ ಅನೇಕ ಭರವಸೆಗಳನ್ನು ಹೊಂದಿರುತ್ತಾರೆ. ಇದಕ್ಕೆ ಹೀರೋಯಿನ್​ಗಳೂ ಹೊರತಲ್ಲ. ಇತ್ತೀಚೆಗಷ್ಟೇ ತೆಲುಗಿನ ನಾಯಕಿಯೊಬ್ಬಳು ತನ್ನನ್ನು ವರಿಸುವ ಗಂಡು ಹೇಗಿರಬೇಕು ಎಂದು ಹೇಳಿದ್ದು, ವೈರಲ್​ ಆಗಿದೆ.

    ಇದನ್ನೂ ಓದಿ: ಮೇನಕಾ, ವರುಣ್ ಗಾಂಧಿಗೆ ಬಿಜೆಪಿ ಟಿಕೆಟ್​ ಘೋಷಣೆಯಾಗದಿದ್ದೇಕೆ? ಕಾರಣ ಇಲ್ಲಿದೆ ನೋಡಿ..

    ಇಷ್ಟಕ್ಕೂ ಭಾವಿ ಪತಿ ಹೇಗಿರಬೇಕು ಎಂದು ಕನಸು ಕಾಣುತ್ತಿರುವ ಆ ಕನ್ಯೆ ಯಾರು ಎಂಬುದನ್ನು ನೋಡುವುದಾದರೆ, ಒಂದು ಕಾಲದಲ್ಲಿ ಟಾಲಿವುಡ್​ನಲ್ಲಿ ಹೀರೋಯಿನ್​ ಆಗಿ ಮಿಂಚಿದ ಕೋಮಾಲಿ ಪ್ರಸಾದ್ ಅವರೇ ಭಾವಿಪತಿ ಹೀಗೇ ಇರಬೇಕು ಎಂದು ನಗುತ್ತ ಉತ್ತರಿಸುತ್ತಿದ್ದಾರೆ.

    ‘ನೇನು ಸೀತಾ ದೇವಿ’ (2016) ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೋಮಾಲಿ ಪ್ರಸಾದ್, ನಂತರ, ‘ಅನುಕುನ್ನ ಯೋಕತಿ ಯಾಯಾಡಿ ಯೋಕಾತಿ’, ‘ನೆಪೋಲಿಯನ್’, ‘ಸೆಬಾಸ್ಟಿಯನ್ ಪಿಸಿ 524’ ಮತ್ತು ‘ರೌಡಿ ಬಾಯ್ಸ್’ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇದಾವುದರಲ್ಲೂ ಕೋಮಲಿಗೆ ನಿರೀಕ್ಷಿತ ಮನ್ನಣೆ ಸಿಗಲಿಲ್ಲ. ‘ಹಿಟ್-2’ ಚಿತ್ರ ಹಿಟ್ ಆಯಿತು. ಅಲ್ಲಿಂದೀಚೆ ಆಕೆಗೆ ಸಾಲು ಸಾಲು ಆಫರ್ ಗಳು ಬಂದವು.

    ಈ ಬಾಲೆಯ ಇತ್ತೀಚಿನ ಚಿತ್ರ ‘ಶಶಿವದನೆ’. ಏಪ್ರಿಲ್ 19 ರಂದು ಚಿತ್ರ ತೆರೆಗೆ ಬರಲಿದೆ. ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ನಾಯಕಿ ಕೋಮಾಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಟಾಲಿವುಡ್ ನಲ್ಲಿ ತೆಲುಗು ಹುಡುಗಿಯರಿಗೆ ಅವಕಾಶ ಸಿಗುತ್ತಿಲ್ಲ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ನಮ್ಮ ನಿರ್ದೇಶಕರು ಪ್ರತಿಭಾವಂತ ತೆಲುಗು ಹುಡುಗಿಯರನ್ನು ಹುಡುಕುತ್ತಿದ್ದಾರೆ ಎಂದು ಹೇಳಿದರು.

    ಇನ್ನು ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ ಕೋಮಲಿ, ಎಲ್ಲರಂತೆ ತಾನೂ ಕೂಡ ಒಬ್ಬ ವ್ಯಕ್ತಿಯನ್ನು ಪ್ರೀತಿಸಿ ಕಾರಣಾಂತರಗಳಿಂದ ಬೇರ್ಪಟ್ಟೆ. ಸದ್ಯ ಒಂಟಿಯಾಗಿದ್ದೇನೆ. ನನಗೆ ಡೇಟಿಂಗ್ ಇಷ್ಟವಿಲ್ಲ. ನಾನು ಶಾಸ್ತ್ರೋಕ್ತವಾಗಿ ಮದುವೆಯಾಗಲು ಬಯಸುತ್ತೇನೆ. ದಿನಕ್ಕೆ ಎರಡು ಜೋಕ್..ಒಮ್ಮೆ ಬಿರಿಯಾನಿ ತಿನ್ನಿಸುವ ವ್ಯಕ್ತಿ ಸಿಕ್ಕರೆ ಖಂಡಿತಾ ಮದುವೆಯಾಗುತ್ತೇನೆ. ನನ್ನನ್ನು ಖುಷಿಖುಷಿಯಾಗಿಡುವ ಹುಡುಗ ಸಿಕ್ಕಿದರೆ ಜೀವನಪರ್ಯಂತ ಅವನ ಜೊತೆಯಾಗಿ ಇರುತ್ತೇನೆ ಎನ್ನುತ್ತಾಳೆ ಈ ಚೆಲುವೆ.

    ‘ಕೇಜ್ರಿವಾಲ್ ಪ್ರಮುಖ ಸಂಚುಕೋರ..10 ದಿನ ಕಸ್ಟಡಿಗೆ ನೀಡಿ’: ನ್ಯಾಯಾಲಯಕ್ಕೆ ಇಡಿ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts