More

    ಮೇನಕಾ, ವರುಣ್ ಗಾಂಧಿಗೆ ಬಿಜೆಪಿ ಟಿಕೆಟ್​ ಘೋಷಣೆಯಾಗದಿದ್ದೇಕೆ? ಕಾರಣ ಇಲ್ಲಿದೆ ನೋಡಿ..

    ನವದೆಹಲಿ: ಮಾರ್ಚ್ 2 ರಂದು ಬಿಜೆಪಿ ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ 51ಕ್ಕೆ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತು. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಮತ್ತೆ ಸ್ಪರ್ಧಿಸುವುದು ಖಚಿತವಾಯಿತು. ಆದರೆ ಬಿಜೆಪಿ ಕಾರ್ಯಕರ್ತರು ಮತ್ತು ಪ್ರತಿಪಕ್ಷಗಳು ಕುತೂಹಲದಿಂದ ಕಾಯುತ್ತಿದ್ದ ಆ ಎರಡು ಹೆಸರುಗಳು ಆ ಪಟ್ಟಿಯಲ್ಲಿ ನಾಪತ್ತೆಯಾಗಿವೆ. ಅವರು ಬೇರಾರೂ ಅಲ್ಲ, ಒಬ್ಬರು ಮೇನಕಾ ಗಾಂಧಿ ಮತ್ತು ಎರಡನೆಯವರು ಅವರ ಮಗ ವರುಣ್ ಗಾಂಧಿ.

    ಇದನ್ನೂ ಓದಿ:  ‘ಕೇಜ್ರಿವಾಲ್ ಪ್ರಮುಖ ಸಂಚುಕೋರ..10 ದಿನ ಕಸ್ಟಡಿಗೆ ನೀಡಿ’: ನ್ಯಾಯಾಲಯಕ್ಕೆ ಇಡಿ ಮನವಿ

    ನೆಹರು ಕುಂಟುಂಬದಿಂದ ಹೊರಬಂದು ಬಿಜೆಪಿ ಜತೆ ಗುರ್ತಿಸಿಕೊಂಡಿದ್ದ ಅಮ್ಮ ಮಗನ ಭವಿಷ್ಯ ಇಲ್ಲಿಗೇ ಮುಗಿಯಿತೇ ಎಂಬ ಸಂದೇಹ ಈಗ ಎಲ್ಲೆಡೆ ಮೂಡುತ್ತಿದೆ.

    ಇದಕ್ಕೆ ಕಾರಣಗಳೂ ಇಲ್ಲದಿಲ್ಲ, ವರುಣ್​ ಗಾಂಧಿಯ ಕ್ಷೇತ್ರವಾದ ಪಿಲಿಭಿತ್‌ನಲ್ಲಿ ಮೊದಲ ಹಂತದಲ್ಲಿ ಏಪ್ರಿಲ್ 19 ರಂದು ಚುನಾವಣೆ ನಡೆಯಲಿದೆ. ಮೇ 25ರಂದು ಮೇನಕಾ ಗಾಂಧಿ ಸ್ಪರ್ಧಿಸುತ್ತಿದ್ದ ಸುಲ್ತಾನ್‌ಪುರ ಆರನೇ ಹಂತದಲ್ಲಿ ಚುನಾವಣೆ ನಡೆಯುತ್ತದೆ.

    ಮೇನಕಾ ಮತ್ತು ವರುಣ್ ವಿಚಾರದಲ್ಲಿ ಟಿಕೆಟ್​ ಘೋಷಿಸಲು ಬಿಜೆಪಿಯಲ್ಲಿ ಅನಿಶ್ಚಿತತೆ ಏಕೆ? ಇದಕ್ಕೆ ಕಾರಣ ಇಲ್ಲದಿಲ್ಲ..

    2019ರಲ್ಲಿ ಮೇನಕಾ ಸುಲ್ತಾನ್‌ಪುರದಿಂದ ಹತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಎಸ್‌ಪಿ ಅಭ್ಯರ್ಥಿಯನ್ನು ಸೋಲಿಸಿದ್ದರು. ಆದರೆ ಪ್ರಧಾನಿ ಮೋದಿ ಅವರ ಎರಡನೇ ಅಧಿಕಾರಾವಧಿಯಲ್ಲಿ ಮೇನಕಾ ಅಥವಾ ವರುಣ್ ಅವರನ್ನು ಸಂಪುಟಕ್ಕೆ ಪರಿಗಣಿಸಿರಲಿಲ್ಲ. ಅದರೊಂದಿಗೆ ಅವರಿಬ್ಬರೂ ಪ್ರತಿಪಕ್ಷಗಳ ಜೊತೆಗೆ ಕೇಂದ್ರ ಮತ್ತು ಯುಪಿಯಲ್ಲಿ ಯೋಗಿ ಸರ್ಕಾರವನ್ನು ಟೀಕೆಗೆ ಇಳಿದರು. ಇದು ಆಗಾಗ್ಗೆ ಟೀಕಾ ಪ್ರಹಾರ ತುಂಬಾ ದೂರ ಹೋಗುತ್ತಿತ್ತು. ಅದರೊಂದಿಗೆ ತಾಯಿ-ಮಗ ಪಕ್ಷದ ಕೆಂಗಣ್ಣಿಗೆ ಗುರಿಯಾದರು.

    ಮೇನಕಾ ಗಾಂಧಿಯವರ ರಾಜಕೀಯವು ರಾಜೀವ್ ಗಾಂಧಿ ವಿರುದ್ಧ 1984 ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಅಮೇಥಿಯಲ್ಲಿ ಸೋತರೂ ಸ್ವತಂತ್ರ ಅಭ್ಯರ್ಥಿಯಾಗಿ ಪಿಲಿಬಿತ್ ನಲ್ಲಿ ಗೆದ್ದು ಇತಿಹಾಸ ನಿರ್ಮಿಸಿದರು. ಬಳಿಕ ಮೂರು ದಶಕಗಳ ಕಾಲ ಮೇನಕಾ ಅದೇ ಕ್ಷೇತ್ರವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿಕೊಂಡರು.

    ಸಂಜಯ್ ಗಾಂಧಿಯ ಉತ್ತರಾಧಿಕಾರಿಯಾಗಲು ನಿರ್ಧರಿಸಿ ಪ್ರಧಾನಿ ಇಂದಿರಾ ಅವರ ನಿವಾಸದಿಂದ ಹೊರಬಂದಾಗ ಮೇನಕಾ ಅವರಿಗೆ 25 ವರ್ಷ ವಯಸ್ಸಾಗಿತ್ತು. ಇಂದು ಅರವತ್ತೇಳನೇ ವಯಸ್ಸಿನಲ್ಲಿದ್ದರೂ, ಅವರ ರಾಜಕೀಯ ಜೀವನವು ಸವಾಲುಗಳು, ವಿವಾದಗಳ ಜತೆ ಏರಿಳಿತಗಳನ್ನು ತುಂಬಿಕೊಂಡಿದೆ. ‘

    ಶಿಸ್ತಿನ ಪಕ್ಷ ಬಿಜೆಪಿಯಲ್ಲಿದ್ದರೂ, ಅಮ್ಮ-ಮಗ ಗಂಭಿರವಾಗಿ ಮಾತನಾಡುವುದು ಮತ್ತು ನಡವಳಿಕೆ ರೂಪಿಸಿಕೊಂಡಿದ್ದರೆ ಇಷ್ಟರ ಹೊತ್ತಿಗಾಗಲೇ ವಯಸ್ಸಿನ ಅಂತರದಿಂದ ಮೇನಕಾಗೆ ಟಿಕೆಟ್​ ನೀಡಿದಿದ್ದರೂ, ಕನಿಷ್ಠ ವರುಣ್​ಗಾಂಧಿಗಾದರೂ ಟಿಕೆಟ್​ ಸಿಗುತ್ತಿತ್ತೇನೋ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

    ಮಕ್ಕಾದಲ್ಲಿ ಉಪವಾಸ ಬಿಡಲು ಹೊರಟಿದ್ದವರ ಮೇಲೆ ನುಗ್ಗಿದ ಕಾರು: ಭಾರತೀಯ ಮೃತ್ಯು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts