More

  ಮಕ್ಕಾದಲ್ಲಿ ಉಪವಾಸ ಬಿಡಲು ಹೊರಟಿದ್ದವರ ಮೇಲೆ ನುಗ್ಗಿದ ಕಾರು: ಭಾರತೀಯ ಮೃತ್ಯು

  ಮಕ್ಕಾ: ಉಪವಾಸ ಮುರಿಯಲು ಮುಂದಾದ ಜನರ ಮೇಲೆ ವೇಗವಾಗಿ ಬಂದ ಕಾರ್​ ಹರಿದ ಪರಿಣಾಮ ಭಾರತೀಯ ಪ್ರವಾಸಿಗ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

  ಇದನ್ನೂ ಓದಿ: ‘ಅವನಿಗೆ ಕಾಗೆ ಬಣ್ಣ, ಸುಂದರಾಂಗನಲ್ಲ’: ಸಹಕಲಾವಿದನ ಟೀಕಿಸಿದ ಮೋಹಿನಿಯಾಟ್ಟಂ ನೃತ್ಯಗಾರ್ತಿ ಸತ್ಯಭಾಮಾಗೆ ಎದುರಾಯ್ತು ಭಾರಿ ಆಕ್ರೋಶ!

  ಕೇರಳದ ಮಂಚೇರಿ ಪುಲಪೆಟ್ಟ ಎಡಂನ ಪಲ್ಲಿಯಾಲಿ ಪ್ರದೇಶದ ಶ್ರಾಂಬಿಕಲ್ ಮೊಹಮ್ಮದ್ ಬಶೀರ್ ಮೃತ.
  ಗುರುವಾರ ಸಂಜೆ ಮಕ್ಕಾ ಜಹ್ರತುಲ್ ಉಮ್ರಾ ಮಸೀದಿ ಅಂಗಳದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದರೂ, ಸಾವು ನೋವಿನ ಬಗ್ಗೆ ಅಧಿಕೃತವಾಗಿ ವರದಿಯಾಗಿಲ್ಲ.

  ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಉಪವಾಸ ಬಿಡಲು ತೆರಳುತ್ತಿದ್ದವರ ಮೇಲೆ ವೇಗವಾಗಿ ಬಂದ ಕಾರು ಹರಿದಿದೆ. ಬಳಿಕ ಅದು ಸ್ಕಿಡ್ ಆಗಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಜನರ ನಡುವೆ ಪಲ್ಟಿಯಾಗಿದೆ.

  ಸಂಚಾರ ವಿಭಾಗ ಮತ್ತು ಸೌದಿ ರೆಡ್ ಕ್ರೆಸೆಂಟ್ ತಂಡ ಅಪಘಾತ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಅಲ್​ನೂರ್ ಆಸ್ಪತ್ರೆಗೆ ದಾಖಲಿಸಿದೆ.

  ಮದ್ಯದ ವಿರುದ್ಧ ಮಾತನಾಡಿದ ಕೇಜ್ರಿವಾಲ್ ಇಂದು ಮದ್ಯಪಾನ ನೀತಿ ಮಾಡುತ್ತಿದ್ದಾರೆ: ಅಣ್ಣಾ ಹಜಾರೆ ಟೀಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts