More

    ‘ಅವನಿಗೆ ಕಾಗೆ ಬಣ್ಣ, ಸುಂದರಾಂಗನಲ್ಲ’: ಸಹಕಲಾವಿದನ ಟೀಕಿಸಿದ ಮೋಹಿನಿಯಾಟ್ಟಂ ನೃತ್ಯಗಾರ್ತಿ ಸತ್ಯಭಾಮಾಗೆ ಎದುರಾಯ್ತು ಭಾರಿ ಆಕ್ರೋಶ!

    ತಿರುವನಂತಪುರಂ: ಹಿರಿಯ ಮೋಹಿನಿಯಾಟ್ಟಂ ನೃತ್ಯಗಾರ್ತಿ ಕಲಾಮಂಡಲಂ ಸತ್ಯಭಾಮಾ, ಸಹ ಕಲಾವಿದನ ವರ್ಣಭೇದ ಮತ್ತು ಜನಾಂಗೀಯ ನಿಂಧನೆ ಮಾತುಗಳನ್ನಾಡಿರುವುದು ಕೇರಳದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

    ಇದನ್ನೂ ಓದಿ: ಭಾರತದ ಸಾರ್ವಭೌಮತ್ವಕ್ಕೆ ನಿಷ್ಠೆ ತೋರಿದ ಕಾಶ್ಮೀರ ಪ್ರತ್ಯೇಕವಾದಿ ನಾಯಕ ಗಿಲಾನಿ ಮೊಮ್ಮಗಳು, ಶಬೀರ್ ಪುತ್ರಿ..!

    ಸತ್ಯಭಾಮಾ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸಹ ಕಲಾವಿದ ಡಾ ಆರ್‌ಎಲ್‌ವಿ ರಾಮಕೃಷ್ಣನ್ ವಿರುದ್ಧ ಪರೋಕ್ಷವಾಗಿ ವರ್ಣಭೇದ ಮತ್ತು ಜನಾಂಗೀಯ ನಿಂದನೆ ಮಾಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಸತ್ಯಭಾಮಾ ಟೀಕೆ ನನ್ನನ್ನು ಉದ್ದೇಶಿಸಿದ್ದಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ರಾಮಕೃಷ್ಣನ್ ಹೇಳಿದ್ದಾರೆ.

    ಆದರೆ ರಾಮಕೃಷ್ಣನ್ ಆರೋಪಗಳನ್ನು ನಿರಾಕರಿಸಿದ ಸತ್ಯಭಾಮಾ, ಸಂದರ್ಶನದಲ್ಲಿ ಯಾರನ್ನೂ ಹೆಸರಿಸಿಲ್ಲ ಎಂದು ಹೇಳಿದ್ದಾರೆ. ಸಂದರ್ಶನದಲ್ಲಿ ಸತ್ಯಭಾಮಾ, ” ಮೋಹಿನಿಯಾಟ್ಟಂ ಕಾಲುಗಳನ್ನು ಅಗಲವಾಗಿ ಇಟ್ಟು ನೃತ್ಯ ಮಾಡುವ ಕಲಾ ಪ್ರಕಾರವಾಗಿದೆ. ಪುರುಷರು ಮೋಹಿನಿಯಾಟ್ಟಂ ಅನ್ನು ಸುಂದರವಾಗಿದ್ದರೆ ಮಾತ್ರ ನಿರ್ವಹಿಸಬೇಕು. ಆದರೆ ಅವನ ನೋಟ ಅಸಹನೀಯವಾಗಿದೆ, ಅವನಿಗೆ ಕಾಗೆಯ ಬಣ್ಣವಿದೆ. ತನ್ನ ಕಾಲುಗಳನ್ನು ಅಗಲವಾಗಿ ನಿರ್ವಹಿಸಲು ಅವನಿಗೆ ಆಗದು ಎಂದು ಹೇಳಿದ್ದರು.

    ಸತ್ಯಭಾಮಾ ಯಾರನ್ನು ಉಲ್ಲೇಖಿಸಿ ಮಾತನಾಡಿದ್ದಾರೆ ಎಂಬುದನ್ನು ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ ಸಂದರ್ಶನದ ಭಾಗಗಳನ್ನು ಪ್ರಸ್ತಾಪಿಸಿ ಕೇಳಿದ್ದರು.

    ಸತ್ಯಭಾಮಾ ವಿವಾದಕ್ಕೆ ಒಳಗಾದ ನಂತರವೂ ತನ್ನ ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿದರು. ನಾನು ಹೇಳಿರುವುದಕ್ಕೆ ಬದ್ಧವಾಗಿರುವುದಾಗಿ ಹೇಳಿದರು. ವರದಿಗಾರರ ಪುನರಾವರ್ತಿತ ಪ್ರಶ್ನೆಗಳಿಗೆ ಆಕೆ ಕೋಪಗೊಂಡು, “ಹೆಸರೇ ಸೂಚಿಸುವಂತೆ, ನೃತ್ಯಮಾಡುವವರು ಮೋಹಿನಿಯಾಗಿರಬೇಕು. ಸೌಂದರ್ಯವನ್ನು ಹೊಂದಿರಬೇಕು. ನಾವು ಸೌಂದರ್ಯ ಸ್ಪರ್ಧೆಗಳಲ್ಲಿ ಏಕೆ ಭಾಗವಹಿಸಬಾರದು? ಏಕೆಂದರೆ ಅದಕ್ಕೆ ಸೌಂದರ್ಯ ಮತ್ತು ಬಣ್ಣ ಬೇಕು. ನೀವು ಎಂದಾದರೂ ಕಪ್ಪು ಚರ್ಮದ ಮಕ್ಕಳು ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲುವುದನ್ನು ನೋಡಿದ್ದೀರಾ?”ಎಂದು ಪ್ರಶ್ನಿಸಿದರು.

    ಮಾಧ್ಯಮದವರು ನೀವು ಯಾರನ್ನು ಉಲ್ಲೇಖಿಸುತ್ತಿದ್ದೀರಿ ಎಂದು ಕೇಳಿದಾಗ, ಸತ್ಯಭಾಮಾ, “ನಾನು ಯಾರನ್ನು ಉಲ್ಲೇಖಿಸುತ್ತಿದ್ದೇನೆ ಎಂದು ನೀವು ಯಾಕೆ ತಲೆಕೆಡಿಸಿಕೊಂಡಿದ್ದೀರಿ. ಯಾರೇ ಆಗಿರಲಿ, ನಿಮಗೆ ಏಕೆ ಗೊತ್ತಾಗಬೇಕು?” ಎಂದು ಮರುಪ್ರಶ್ನೆ ಹಾಕಿದ್ದರು.

    “ಕಪ್ಪು ಚರ್ಮದ ಮಕ್ಕಳು ನೃತ್ಯದ ತರಬೇತಿಗೆ ಬಂದರೆ, ನಾವು ಅವರಿಗೆ ತರಬೇತಿ ನೀಡುತ್ತೇವೆ, ಆದರೆ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸದಂತೆ ಹೇಳುತ್ತೇವೆ. ಸ್ಪರ್ಧೆಗಳಲ್ಲಿ ತೀರ್ಪು ನೀಡುವಾಗಲೂ ಸೌಂದರ್ಯಕ್ಕಾಗಿ ಅಂಕಣವಿದೆ ಮತ್ತು ಅಂತಹ ಮಕ್ಕಳಿಗೆ ಅಂಕಗಳನ್ನು ನೀಡಬೇಡಿ ಎಂದು ನಾವು ಸಾಮಾನ್ಯವಾಗಿ ತೀರ್ಪುಗಾರರಿಗೆ ಹೇಳುತ್ತೇವೆ ಎಂದು ಹೇಳಿದ್ದರು.

    ಇನ್ನು ರಾಮಕೃಷ್ಣನ್ ಅವರು, ಸತ್ಯಭಾಮಾ ಪರಿಶಿಷ್ಟ ಜಾತಿ ಮತ್ತು ದಲಿತ ವರ್ಗಗಳನ್ನು ಮಾತ್ರವಲ್ಲದೆ ಕಪ್ಪು ಮೈಬಣ್ಣದ ಎಲ್ಲರನ್ನೂ ಅವಮಾನಿಸಿದ್ದಾರೆ. “ಆಕೆಯ ಪ್ರಕಾರ, ಕಪ್ಪು ಜನರು ಮೋಹಿನಿಯಾಟ್ಟಂ ಅನ್ನು ಅಭ್ಯಾಸ ಮಾಡಬಾರದು. ಆಕೆ ತನ್ನ ಮೈಬಣ್ಣವನ್ನು ಉಲ್ಲೇಖಿಸಿ ತಾಯಿಗೂ ಅಂತಹ ಮಗುವನ್ನು ನೋಡಲು ಕಷ್ಟವಾಗುತ್ತದೆ ಎಂದು ಹೇಳುವ ಮೂಲಕ ನನ್ನ ತಾಯಿಯನ್ನೂ ಅವಮಾನಿಸಿದ್ದಾರೆ ಎಂದು ಹೇಳಿದ್ದು, ಇದನ್ನು ತೀವ್ರವಾಗಿ ಖಂಡಿಸಬೇಕು ಎಂದು ಹೇಳಿದ್ದಾರೆ.

    ಇಸ್ರೋದ ಮರುಬಳಕೆಯ ‘ಪುಷ್ಪಕ್’ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ- ಬಾಹ್ಯಾಕಾಶದಿಂದ ಹಿಂದಿರುಗುವ ಆರ್​ಎಲ್​ವಿ ವಾಹನದ ವಿಶೇಷತೆ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts