More

    ಪುಸ್ತಕ ಓದುಗ ಎಂದಿಗೂ ಏಕಾಂಗಿಯಲ್ಲ

    ಶ್ರೀರಂಗಪಟ್ಟಣ: ಪುಸ್ತಕ ಓದುವ ಹವ್ಯಾಸವುಳ್ಳವನು ಎಂದಿಗೂ ಏಕಾಂಗಿಯಾಗುವುದಿಲ್ಲ. ಪ್ರಸ್ತುತ ನಮ್ಮ ಯುವಜನತೆ ಹಾಗೂ ವಿದ್ಯಾರ್ಥಿಗಳು ಮೊಬೈಲ್ ಮರೆತು ಪುಸ್ತಕ ತೆರೆದು ಜ್ಞಾನ ವಿಕಾಸಗೊಳಿಸಿಕೊಳ್ಳಬೇಕು ಎಂದು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕದಲಗೆರೆ ಜಯರಾಮು ಸಲಹೆ ನೀಡಿದರು.


    ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಡಿಜಿಟಲ್ ಗ್ರಂಥಾಲಯ ಹಾಗೂ ಅರಿವು ಕೇಂದ್ರ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿಶ್ವ ಪುಸ್ತಕ ದಿನಾಚರಣೆ ಹಾಗೂ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


    ಮಿತಿಮೀರಿದ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯಿಂದಾಗಿ ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಮೊಬೈಲ್ ಗೀಳಾಗಿ ಪರಿಣಮಿಸಿ ಓದುವ ಹವ್ಯಾಸ ಕ್ಷೀಣಿಸುತ್ತಿರುವುದು ವಿಷಾದಕರ ಸಂಗತಿ. ಮುಂದಿನ ಜನಾಂಗಕ್ಕೆ ಓದುವ ಸಂಸ್ಕೃತಿಯನ್ನು ಉಳಿಸಿ, ವರ್ಗಾಯಿಸಬೇಕಾದರೆ ಪುಸ್ತಕ ಓದುವ ಹವ್ಯಾಸವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವ ಅಗತ್ಯವಿದೆಯೆಂದು ತಿಳಿಸಿದರು.


    ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್‌ಕುಮಾರ್ ಮಾತನಾಡಿ, ಸ್ಥಳೀಯ ಗ್ರಂಥಾಲಯಗಳು ವಿಶ್ವವಿದ್ಯಾಲಯಗಳಿದ್ದಂತೆ. ಸ್ಥಳೀಯ ಗ್ರಂಥಾಲಯದಲ್ಲಿ ಹಲವು ರೀತಿಯ ಮೌಲ್ಯವುಳ್ಳ ಪುಸ್ತಕಗಳು ಲಭ್ಯವಿದ್ದು, ವಿದ್ಯಾರ್ಥಿಗಳು ಮಹನೀಯರ ಆತ್ಮಚರಿತ್ರೆಗಳ ಪುಸ್ತಕಗಳನ್ನು ಅಧ್ಯಯನ ಮಾಡುವುದರಿಂದ ಅವರ ಬದುಕಿನ ಸಾಧಕ-ಬಾಧಕಗಳನ್ನು ಅರಿತು ಬದುಕಿನಲ್ಲಿ ಯಶಸ್ಸು ಕಾಣಬಹುದು ಎಂದರು.


    ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್ ವಿಶ್ವ ಪುಸ್ತಕ ದಿನದ ಮಹತ್ವದ ಬಗ್ಗೆ ಪ್ರಾಸ್ತವಿಕ ಭಾಷಣ ಮಾಡಿದರು. ಲೆಕ್ಕಸಹಾಯಕಿ ದಿವ್ಯಾ, ದಾಸ್‌ಪ್ರಕಾಶ್, ಪಂಚಾಯಿತಿ ಸಿಬ್ಬಂದಿ ಅರುಣ್, ಮಹೇಶ್, ಮಹದೇವು ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts