More

    ಚಿತ್ರದುರ್ಗ ನಗರದಲ್ಲಿ ಇನ್ನಷ್ಟು ಗ್ರಂಥಾಲಯ: ಶಾಸಕ ತಿಪ್ಪಾರೆಡ್ಡಿ ಭರವಸೆ

    ಚಿತ್ರದುರ್ಗ: ವಿದ್ಯಾರ್ಥಿ-ಓದುಗರ ಅಗತ್ಯಕ್ಕೆ ಅನುಗುಣವಾಗಿ ನಗರದ ವಿವಿಧೆಡೆ ಗ್ರಂಥಾಲಯಗಳನ್ನು ನಿರ್ಮಿಸುವುದಾಗಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭರವಸೆ ನೀಡಿದರು.

    ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ನಗರದ ಧವಳಗಿರಿ ಬಡಾವಣೆ ಜ್ಞಾನ ಭಾರತಿ ವಿದ್ಯಾಮಂದಿರ ಬಳಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನಗರ ಕೇಂದ್ರ ಗ್ರಂಥಾಲಯ ಶಾಖಾ ಕಟ್ಟಡ ಹಾಗೂ ಡಿಜಿಟಲ್ ಲೈಬ್ರರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

    ಈಚಿನ ದಿನಗಳಲ್ಲಿ ಜನರಿಗೆ ಗ್ರಂಥಾಲಯಗಳ ಮಹತ್ವ ಅರಿವಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಯುವ ಪೀಳಿಗೆ ಗ್ರಂಥಾಲಯದಿಂದ ಅಗತ್ಯ ಪುಸ್ತಕ, ಮಾಹಿತಿ ಪಡೆಯಬಹುದು. ಮೈಸೂರಿನ ಮಹಾರಾಜರ ದೂರದೃಷ್ಟಿಯಿಂದ ನಗರದಲ್ಲಿ ಉತ್ತಮವಾದ ಗ್ರಂಥಾಲಯ ನಿರ್ಮಾಣವಾಗಿದೆ. ಇದರಿಂದ ಜನರ ಜ್ಞಾನಾರ್ಜನೆಗೆ ಅನುಕೂಲವಾಗಿದೆ ಎಂದರು.

    ನಗರದಲ್ಲಿರುವ ಗ್ರಂಥಾಲಯಗಳ ಶಾಖೆಗಳಿಗೆ ನಿವೇಶನಗಳ ಅಗತ್ಯವಿದ್ದು, ಕೂಡಾದಿಂದ ನಿವೇಶನ ಮಂಜೂರು ಮಾಡಿಸಲಾಗುವುದು. ಸರ್ಕಾರ ಪುಸ್ತಕಗಳ ಖರೀದಿಗೆ ಸಾಕಷ್ಟು ಪ್ರಮಾಣದಲ್ಲಿ ಹಣ ನೀಡುತ್ತಿದೆ. ಕೇಂದ್ರದ ಹೊಸ ಶಿಕ್ಷಣ ನೀತಿಗೂ ಗ್ರಂಥಾಲಯ ಸೌಲಭ್ಯ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.

    ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಉಪಾಧ್ಯಕ್ಷೆ ಅನುರಾಧಾ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ನಗರಸಭೆ ಸದಸ್ಯೆ ಎಸ್.ಸಿ.ತಾರಕೇಶ್ವರಿ, ಲಕ್ಷ್ಮಮ್ಮ, ಹರೀಶ್, ಸುರೇಶ್, ವೆಂಕಟೇಶ್, ಕುಡಾ ಅಧ್ಯಕ್ಷ ಟಿ.ಬದ್ರಿನಾಥ್, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷ ಡಾ.ಬಿ.ರಾಜಶೇಖರಪ್ಪ, ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ, ಕುಮಾರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts