More

    ನನ್ನ ಮಗ ಚುನಾವಣೆಯಲ್ಲಿ ಸೋಲಲಿ ಎಂದು ಶಾಪ ಹಾಕಿದ ಹಿರಿಯ ಕಾಂಗ್ರೆಸ್​ ನಾಯಕ; ಕಾರಣ ಹೀಗಿದೆ

    ತಿರುವನಂತಪುರಂ: ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಫ್ಯಾಮಿಲಿ ಪಾಲಿಟಿಕ್ಸ್​ ಹೆಚ್ಚು ಸದ್ದು ಮಾಡುತ್ತಿದೆ. ಅದಕ್ಕೆ ಪೂರಕವೆಂಬಂತೆ ತಂದೆಯೇ ತನ್ನ ಪುತ್ರ ಚುನಾವಣೆಯಲ್ಲಿ ಸೋಲಲಿ ಎಂದು ಶಾಪ ಹಾಕಿರುವ ಘಟನೆ ಕೇರಳದಲ್ಲಿ ನಡೆದಿದೆ. ಈ ಘಟನೆ ಎಲ್ಲರ ಗಮನ ಸೆಳೆದಿದ್ದು, ಸಖತ್​ ಸದ್ದು ಮಾಡುತ್ತಿದೆ.

    ಕಳೆದ ಕೆಲ ತಿಂಗಳ ಹಿಂದೆ ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಯಾದ ಹಿರಿಯ ಕಾಂಗ್ರೆಸ್​ ನಾಯಕ, ಮಾಜಿ ಕೇಂದ್ರ ಸಚಿವ ಎಕೆ ಆ್ಯಂಟನಿ ಪುತ್ರ ಅನಿಲ್ ಲೋಕಸಭೆ ಚುನಾವಣೆಯಲ್ಲಿ ಸೋಲಲಿ ಎಂದು ಶಾಪ ಹಾಕಿದ್ದಾರೆ. ಈ ಸುದ್ದಿ ಎಲ್ಲೆಡೆ ವೈರಲ್​ ಆಗಿದ್ದು, ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

    AK Antony

    ಇದನ್ನೂ ಓದಿ: ನಾವು ಅಧಿಕಾರಕ್ಕೆ ಬಂದಲ್ಲಿ ಎಣ್ಣೆ ರೇಟ್​ ಕಡಿಮೆ ಮಾಡ್ತೀವಿ ಎಂದು ಭರವಸೆ ನೀಡಿದ ಮಾಜಿ ಸಿಎಂ

    ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಕೆ ಆ್ಯಂಟನಿ, ಕೇರಳದ ಪಟ್ಟನಂತಿಟ್ಟ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅನಿಲ್​ ಈ ಚುನಾವಣೆಯಲ್ಲಿ ಸೋಲಬೇಕು. ಕಾಂಗ್ರೆಸ್​ ಅಭ್ಯರ್ಥಿ ಆ್ಯಂಟೋ ಆ್ಯಂಟೋನಿಯನ್ನು ಜನ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.

    ನನ್ನ ಮಗ ಬಿಜೆಪಿ ಸೇರಿರುವುದನ್ನು ತಪ್ಪು ಎಂದು ಹೇಳುತ್ತೇನೆ ವಿರೋಧಿಸುತ್ತೇನೆ. ಏಕೆಂದರೆ ಕಾಂಗ್ರೆಸ್​ ನನ್ನ ಧರ್ಮವಾಗಿದ್ದು ನಾನು ನನ್ನ ಮಗನ ಕ್ರಮವನ್ನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ಅವನು ಬುದ್ದಿ ಕಲಿಯಬೇಕೆಂದರೆ ಚುನಾವಣೆಯಲ್ಲಿ ಸೋಲಬೇಕು ಎಂದು ಎಕೆ ಆ್ಯಂಟೋನಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts