More

    ಯುಗಾದಿ ಹಬ್ಬದಂದು ಈ ದೇಗುಲದಲ್ಲಿ ಮೊದಲ ಪೂಜೆ ಸಲ್ಲಿಸುವುದು ಮುಸ್ಲಿಮರು; ಕಾರಣ ಹೀಗಿದೆ

    ಅಮರಾವತಿ: ಹಿಂದೂಗಳಿಗೆ ಹೊಸ ವರ್ಷ ಆರಂಭವಾಗುವುದೇ ಯುಗಾದಿ ಹಬ್ಬದಿಂದ ಎಂದು ಎಲ್ಲರಿಗೂ ತಿಳಿದಿದೆ.  ಈ ಹಬ್ಬದಂದು ಮಾಡುವ ಕೆಲವು ಕೆಲಸಗಳು ನಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ, ಸಂತೃಪ್ತಿ ನೆಲೆಸುವಂತೆ ಮಾಡುತ್ತದೆ. ಯುಗಾದಿ ಹಬ್ಬದಂದು ಪ್ರತಿಯೊಬ್ಬರು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಆದರೆ, ಮುಸ್ಲಿಮರು ಯುಗಾದಿ ಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಇದು ಇಲ್ಲಿನ ವಾಡಿಕೆಯಾಗಿದ್ದು ಪ್ರತಿ ವರ್ಷ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಾರೆ.

    ಆಂಧ್ರಪ್ರದೇಶ ಕಡಪ ಜಿಲ್ಲೆಯಲ್ಲಿರುವ ಸುಪ್ರಸಿದ್ದ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಯುಗಾದಿ ಹಬ್ಬದಂದು ಮುಸ್ಲಿಂ ಮಹಿಳೆಯರು ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಪ್ರತಿ ವರ್ಷ ಯುಗಾದಿ ದಿನದಂದು ಮುಸ್ಲಿಂ ಭಕ್ತರಿಂದ ತುಂಬಿರುತ್ತದೆ. ಯುಗಾದಿ ದಿನದಂದು ಮುಸ್ಲಿಮರು ಇಲ್ಲಿಗೆ ಬಂದು ಪೂಜೆ ಸಲ್ಲಿಸುವುದು ವಾಡಿಕೆ.

    ಇದಕ್ಕೆ ಪ್ರಮುಖ ಕಾರಣವೆಂದರೆ ವೆಂಕಟೇಶ್ವರ ದೇವರ ಎರಡನೇ ಪತ್ನಿ ಬೀಬಿ ನಾಂಚಾರಮ್ಮ ಮುಸ್ಲಿಂ ಮಹಿಳೆಯಾಗಿರುವುದು ಎನ್ನಲಾಗಿದೆ. ಇದರಿಂದಾಗಿ ಪ್ರತಿ ವರ್ಷ ಯುಗಾದಿಯಂದು ಮುಸ್ಲಿಮರು ದೇಗುಲಕ್ಕೆ ಬಂದು ಪೂಜಿಸುತ್ತಾರೆ. ಈ ವೇಳೆ, ಮುಸ್ಲಿಂ ಮಹಿಳೆಯರು ಬೀಬಿ ನಾಂಚಾರಮ್ಮ ಅವರನ್ನು ಜನ್ಮದಾತೆ ಎಂದು ಪರಿಗಣಿಸಿ ಸೀರೆಯನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ.

    muslim devotees

    ಇದನ್ನೂ ಓದಿ: ರಾಜಸ್ಥಾನ ವಿರುದ್ಧ ಸೋತರೂ ಟೀಮ್​ ಇಂಡಿಯಾ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಮುರಿದ ಆರ್​ಸಿಬಿ

    ಇದಲ್ಲದೆ ಬೀಬಿ ನಾಂಚಾರಮ್ಮ ದೇವಿಯ ಜೊತೆಗೆ ವೆಂಕಟೇಶ್ವರ ಸ್ವಾಮಿಯನ್ನು ಪೂಜಿಸುತ್ತಾರೆ. ಏಕೆಂದರೆ ವೆಂಕಟೇಶ್ವರ ದೇವರು ತಮ್ಮ ಸೊಸೆಯನ್ನು ಮದುವೆಯಾದ ಕಾರಣ, ಮುಸ್ಲಿಮರು ಅವರನ್ನು ಸಂಬಂಧಿ ಎಂದು ಪರಿಗಣಿಸುತ್ತಾರೆ. ಯುಗಾದಿ ಹಬ್ಬದಂದು ಮುಸ್ಲಿಮರು ಈ ದೇವಾಲಯದಲ್ಲಿ ಮೊದಲ ಪೂಜೆಯನ್ನು ಮಾಡುತ್ಥಾರೆ. ಪ್ರತಿ ವರ್ಷ ಈ ಪೂಜೆಯಲ್ಲಿ ಮುಸ್ಲಿಮರು ತಮ್ಮ ಹರಕೆಗಳನ್ನು ಪೂರೈಸುತ್ತಾರೆ ಎಂದು ತಿಳಿದು ಬಂದಿದೆ.

    ಕಡಪದ ವೆಂಕಟೇಶ್ವರ ಸ್ಯಾಮಿ ದೇವಾಲಯಕ್ಕೆ ಪ್ರತಿ ವರ್ಷ ಯುಗಾದಿ ಹಬ್ಬದಂದು ಬಂದು ಪೂಜೆ ಸಲ್ಲಿಸಿದರೆ ಇಷ್ಟಾರ್ಧಗಳು ನೆರವೇರುತ್ತವೆ ಎಂಬುದು ಜನರ ನಂಬಿಕೆಯಾಗಿದ್ದು, ಅದಕ್ಕಾಗಿಯೇ ಪ್ರತಿ ವರ್ಷ ಯುಗಾದಿ ದಿನದಂದು ಮುಸ್ಲಿಮರು ದೇಗುಲಕ್ಕೆ ಬಂದು ವೆಂಕಟೇಶ್ವರನನ್ನು ಪೂಜಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts