More

    ಕೊಹ್ಲಿ ಕುರಿತು ಅಪಹಾಸ್ಯ ಮಾಡಲು ಹೋಗಿ ಟೀಕೆಗೆ ಗುರಿಯಾದ ಪಾಕ್ ಕ್ರಿಕಟಿಗ

    ಜೈಪುರ: ಹಾಲಿ ಐಪಿಎಲ್​ ಋತುವಿನಲ್ಲಿ ಆರ್​ಸಿಬಿ ಪರ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ವಿರಾಟ್​ ಕೊಹ್ಲಿ ಆಡಿರುವ ಐದು ಪಂದ್ಯಗಳಿಂದ 105.33 ಸರಾಸರಿಯಲ್ಲಿ 316 ರನ್​ ಗಳಿಸುವ ಮೂಲಕ ಆರೆಂಜ್​ ಕ್ಯಾಪನ್ನು ತಮ್ಮದಾಗಿಸಿಕೊಂಡಿದ್ದಾರೆ. ಉತ್ತಮ ಲಯದಲ್ಲಿರುವ ವಿರಾಟ್​ ಕೊಹ್ಲಿ ಶನಿವಾರ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಐಪಿಎಲ್​ನಲ್ಲಿ 8ನೇ ಶತಕ ಬಾರಿಸಿದ ಹೊರತಾಗಿಯೂ ವಿರಾಟ್​ ಕೊಹ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದು, ತಂಡದ ಬದಲು ತಮ್ಮ ಸ್ವಾರ್ಥಕ್ಕಾಗಿ ಆಟವಾಡಿದರು 250 ರನ್​ ಗಳಿಸಬಹುದಾದ ಪಿಚ್​ನಲ್ಲಿ ಈ ರೀತಿ ಆಟವಾಡಿ ತಂಡಕ್ಕೆ ಅನ್ಯಾಯ ಎಸಗಿದ್ಧಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಕ್ರಿಕೆಟಿಗ ವಿರಾಟ್​ ಕೊಹ್ಲಿ ಅವರನ್ನು ಟೀಕಿಸಿ ಟೀಕೆಗೆ ಗುರಿಯಾಗಿದ್ದಾರೆ.

    ಇದನ್ನೂ ಓದಿ: ಸೋಲಿನ ನಡುವೆಯೂ ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ವಿರಾಟ್​ ಕೊಹ್ಲಿ

    ಐಪಿಎಲ್ ಇತಿಹಾಸದಲ್ಲಿ ಅತ್ಯಂತ ನಿಧಾನಗತಿಯ ಶತಕ ಬಾರಿಸಿದ ವಿರಾಟ್​ ಕೊಹ್ಲಿ ಅವರಿಗೆ ಅಭಿನಂದನೆಗಳು. ಯಾರಿಂದ ಆರ್​ಸಿಬಿ ಪಂದ್ಯ ಸೋಲು ಕಂಡಿತ್ತು ಎಂದು ನೀವು ಭಾವಿಸುತ್ತೀರಿ ಎಂದು ಟ್ವೀಟ್​ ಮಾಡಿ ವಿರಾಟ್​ ಕೊಹ್ಲಿ ಅವರನ್ನು ಗೇಲಿ ಮಾಡಿದ್ದಾರೆ. ಕ್ರಿಕೆಟ್​ ವಿಚಾರಕ್ಕೆ ಬರುವುದಾದರೆ ವಿರಾಟ್​​​ ಹಾಗೂ ಜುನೈದ್​ ಬದ್ಧ ವೈರಿಗಳಾಗಿದ್ದು, ವಿರಾಟ್​ ಬಗ್ಗೆ ಪೋಸ್ಟ್​ ಮಾಡಿ ಜುನೈದ್​ ಅನೇಕ ಬಾರಿ ಟೀಕೆಗೆ ಗುರಿಯಾಗಿದ್ದಾರೆ.

    ಇತ್ತ ಜುನೈದ್​ ಪೋಸ್ಟ್​ಗೆ ತಿರುಗೇಟು ನೀಡಿರುವ ಕ್ರಿಕೆಟ್​ ಪ್ರೇಮಿಗಳು ವಿರಾಟ್ ಕೊಹ್ಲಿಯ ಹೆಸರು ಹೇಳಿಕೊಂಡು ಪಾಕಿಸ್ತಾನದ ಕ್ರಿಕೆಟಿಗರು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಮೊದಲಿಗೆ ಇಂಗ್ಲೀಷ್​ನಲ್ಲಿ ಕೊಹ್ಲಿ ಹೆಸರನ್ನು ಸರಿಯಾಗಿ ಬರೆಯಲು ಕಲಿ ಆ ನಂತರ ಟೀಕಿಸಿ ಇನ್ನೊಬ್ಬರನ್ನು ಮೆಚ್ಚಿಸುವಂತೆ ಎಂದು ತಿರುಗೇಟು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts