More

    ರಾಜಸ್ಥಾನ ವಿರುದ್ಧ ಆರು ವಿಕೆಟ್​ಗಳ ಸೋಲು; ಆರ್​ಸಿಬಿ ನಾಯಕ ಫಾಫ್​ ನೀಡಿದ ಕಾರಣ ಹೀಗಿದೆ

    ಜೈಪುರ: ಇಲ್ಲಿನ ಸವಾಯಿ ಮಾನ್​ಸಿಂಗ್​ ಕ್ರೀಡಾಂಗಣದಲ್ಲಿ ನಡೆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್​ ನಡುವಿನ ಪಂದ್ಯದಲ್ಲಿ ಆರ್​ಸಿಬಿ ತನ್ನ ಸೋಲಿನ ಸ್ಟ್ರೀಕ್​ಅನ್ನು ಮುಂದುವರೆಸಿದ್ದು, ರಾಜಸ್ಥಾನ ಲೀಗ್​ನಲ್ಲಿ ಸತತ ನಾಲ್ಕನೇ ಜಯವನ್ನು ದಾಖಲಿಸಿದೆ. ಈ ಮೂಲಕ ರಾಜಸ್ಥಾನ ರಾಯಲ್ಸ್​ ಹಾಲಿ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ.

    ರಾಜಸ್ಥಾನ ವಿರುದ್ಧ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ವಿರಾಟ್​ ಕೊಹ್ಲಿ (113 ರನ್, 72 ಎಸೆತ, 12 ಬೌಂಡರಿ, 4 ಸಿಕ್ಸರ್) ಶತಕದ ಫಲವಾಗಿ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 183 ರನ್​ ಗಳಿಸಿತ್ತು. ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್​ ತಂಡವು ಜೋಸ್ಟ್​ ಬಟ್ಲರ್ (100 ರನ್​, 58 ಎಸೆತ, 9 ಬೌಂಡರಿ, 4 ಸಿಕ್ಸರ್), ಸಂಜು ಸ್ಯಾಮ್ಸನ್​ (69 ರನ್, 42 ಎಸೆತ, 8 ಬೌಂಡರಿ, 2 ಸಿಕ್ಸರ್​) ಸ್ಫೋಟಕ ಬ್ಯಾಟಿಂಗ್​ ಫಲವಾಗಿ ಗುರಿಯನ್ನು 19.1 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 189 ರನ್​ ಗಳಿಸಿ ಗೆಲುವಿನ ನಗೆ ಬೀರಿತ್ತು. ಈ ಬಗ್ಗೆ ನಾಯಕ ಫಾಫ್​​ ಡು ಪ್ಲೆಸಿಸ್​ ಮಾತನಾಡಿದ್ದು, ಹಲವು ವಿಚಾರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

    Sanju buttler

    ಇದನ್ನೂ ಓದಿ: ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ತನ್ನ ಕೈ ಬೆರಳನ್ನೇ ದೇವಿಗೆ ಅರ್ಪಿಸಿದ ವ್ಯಕ್ತಿ

    ವಿರಾಟ್​ ಬ್ಯಾಟಿಂಗ್​ ಮಾಡುವಾಗ ನಾವು ಟ್ರಿಕಿ ಮತ್ತು ಲೋ ಎಂದು ಕಂಡುಕೊಂಡೆವು 190ಕ್ಕಿಂತ ಹೆಚ್ಚಿನ ರನ್​ ಉತ್ತಮ ಸ್ಕೋರ್​ ಎಂದು ಭಾವಿಸಿದ್ದೆವು. ನಾವು 10ರಿಂದ 15 ರನ್​ ಕಡಿಮೆ ಗಳಿಸಿದ ಕಾರಣ ನಾವು ಸೋಲಬೇಕಾಯ್ತು. ಒಂದು ಕಡೆ ವಿರಾಟ್​ ಉತ್ತಮವಾಗಿ ಆಡಿದರು ಇನ್ನೊಂದೆಡೆ ಗ್ರೀನ್​ ಬದಲಿಗೆ ಬೇರೆ ಆಟಗಾರರು ತೆರಳಿದ್ದರೆ ನಾವು ಇನ್ನಷ್ಟು ರನ್​ಗಳನ್ನು ಗಳಿಸಬಹುದಿತ್ತು. ಪಿಚ್​ ಸಾಕಷ್ಟು ಟ್ರಕಿ ಆಗಿದ್ದ ಕಾರಣ ನಾವು ಹೆಚ್ಚು ರನ್​ ಗಳಿಸಲು ಸಾಧ್ಯವಾಗಲಿಲ್ಲ.

    ಪವರ್​ಪ್ಲೇನ ಕೊನೆಯ ಓವರ್​ನಲ್ಲಿ ಮಯಾಂಕ್​ ದಗಾರ್​ ಅವರ ಬೌಲಿಂಗ್​ ಪಂದ್ಯದ ದಿಕ್ಕನ್ನೇ ಬದಲಿಸಿತ್ತು. ಅವರು ಪಂದ್ಯವನ್ನು ಗೆಲ್ಲಲು ಉತ್ತಮವಾದ ಟಾಸ್​ ಎಂದು ನಾನು ಭಾವಿಸಿದೆ. ಒಂದೇ ಓವರ್​ನಲ್ಲಿ 20 ರನ್​ಗಳನ್ನು ಬಿಟ್ಟುಕೊಟ್ಟಿದ್ದು, ನಮ್ಮ ಮೇಲೆ ಮತ್ತಷ್ಟು ಒತ್ತಡವನ್ನು ಹೆಚ್ಚಿಸಿತ್ತು. ಮಧ್ಯಮ ಕ್ರಮಾಂಕದಲ್ಲಿ ಬಲಗೈ ಬ್ಯಾಟ್ಸಮನ್​ಗಳು ಜಾಸ್ತಿ ಇರುವ ಕಾರಣ ನಾನು ಮಯಾಂಕ್​ ಅವರ ಬಳಿ ಬಾಲ್​ ನೀಡಿದ್ದೆ. ಅಂತಿಮವಾಗಿ ಅದು ಪಂದ್ಯದ ದಿಕ್ಕನ್ನೇ ಬದಲಿಸಿತ್ತು. ನಾವು ಸೋಲು ಒಪ್ಪಿಕೊಳ್ಳಬೇಕಾಯಿತು. ಮುಂದಿನ ಪಂದ್ಯದಲ್ಲಿ ಕಮ್​ಬ್ಯಾಕ್​ ಮಾಡಲಿದ್ದೇವೆ ಎಂದು ಪೋಸ್ಟ್​ ಮ್ಯಾಚ್​ ಪ್ರಸೆಂಟೇಷನ್​ನಲ್ಲಿ ನಾಯಕ ಫಾಫ್​ ಡು ಪ್ಲೆಸಿಸ್​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts