More

    ಕೊಹ್ಲಿ ಒಂದು ಬಾರಿ ಹೇರ್​ಸ್ಟೈಲ್​ ಮಾಡಿಸಿದರೆ ಅದರ ಬೆಲೆ ಎಷ್ಟು ಗೊತ್ತಾ?; ಆಚ್ಚರಿಯ ಹೇಳಿಕೆ ನೀಡಿದ ಆಲಿಮ್​ ಹಕೀಮ್​

    ಮುಂಬೈ: ಹಾಲಿ ಐಪಿಎಲ್​ ಋತುವಿನಲ್ಲಿ ಆರ್​ಸಿಬಿ ಪರ ಉತ್ತಮ ಪ್ರದರ್ಶನ ನೀಡುತ್ತಿರುವ ವಿರಾಟ್​ ಕೊಹ್ಲಿ ಕ್ರಿಕೆಟ್​​ ಹೊರತುಪಡಿಸಿದರೆ ಅತ್ಯಂತ ಸ್ಟೈಲಿಶ್ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರು ಎಂದು ಹೇಳಬಹುದಾಗಿದೆ. ಅವರ ಡ್ರೆಸ್ಸಿಂಗ್​ ಸೆನ್ಸ್​, ಹೇರ್​ಸ್ಟೈಲ್​ಗಾಗಿ ಒಂದು ಫ್ಯಾನ್​ಬೇಸ್​ ಇದ್ದು ಇದನ್ನು ಅನೇಕರು ಅನುಸರಿಸುತ್ತಾರೆ.

    ವಿರಾಟ್​ ಕೊಹ್ಲಿ ಸೇರಿದಂತೆ ಭಾರತ ಕ್ರಿಕೆಟ್​ ತಂಡದ ಆಟಗಾರರು, ಬಾಲಿವುಡ್​ನ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಖ್ಯಾತ ಹೇರ್​ಸ್ಟೈಲಿಸ್ಟ್​ ಆಲಿಮ್ ಹಕೀಮ್ ಅವರ ಸಲೂನ್​ಗೆ ಭೇಟಿ ನೀಡಿರುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ. ಕ್ರಿಕೆಟಿಗರಾದ ವಿರಾಟ್​ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್​ ಧೋನಿ ಆಕಿಮ್​ ಹಲೀಮ್ ಅವರ ಬಳಿ​ ಹೇರ್ ಸ್ಟೈಲಿಂಗ್ ಮಾಡಿಸುವುದು ಹೊಸ ವಿಚಾರವೇನಲ್ಲ. ಆದರೆ, ಇವರು ಒಂದು ಹೇರ್​ಕಟ್​ಗೆ ಎಷ್ಟು ಚಾರ್ಜ್​ ಮಾಡುತ್ತಾರೆ ಎಂದು ಕೇಳಿದರೆ ನೀವು ಬೆರಗಾಗೋದು ಮಾತ್ರ ಗ್ಯಾರಂಟಿ.

    ಈ ಕುರಿತು ಮಾತನಾಡಿರುವ ಆಕಿಮ್​ ಹಲೀಮ್​, ಮಹಿ ಸರ್ ಮತ್ತು ವಿರಾಟ್, ಅವರು ತುಂಬಾ ಹಳೆಯ ಸ್ನೇಹಿತರು ಮತ್ತು ಅವರು ಬಹಳ ಸಮಯದಿಂದ ನನ್ನ ಸಲೂನ್​ಗೆ ಭೇಟಿ ಕೊಡುತ್ತಿದ್ದಾರೆ. ಪ್ರಸ್ತುತ ಐಪಿಎಲ್​ ನಡೆಯುತ್ತಿರುವುದರಿಂದ ವಿರಾಟ್​ ವಿಭಿನ್ನವಾದ ಹೇರ್​​ಕಟ್​ ಮಾಡಿಸಿದ್ದಾರೆ. ಪ್ರತಿಬಾರಿಯೂ ಅವರೇ ಹೊಸ ತರಹದ ಕೇಶ ವಿನ್ಯಾಸವನ್ನು ಮಾಡುವಂತೆ ನಮಗೆ ಸಲಹೆ ನೀಡುತ್ತಾರೆ.

    Virat Kohli

    ಇದನ್ನೂ ಓದಿ: ಹಿರಿತೆರೆಯಿಂದ ಕಿರುತೆರೆಯಲ್ಲಿ ಮಿಂಚಲು ಸಜ್ಜಾದ ಹರಿಪ್ರಿಯಾ

    ಪ್ರತಿಬಾರಿ ನಾವಿಬ್ಬರು ಭೇಟಿ ಮಾಡಿದಾಗ ಮುಂದಿನ ಬಾರಿ ಯಾವ ರೀತಿಯ ಹೇರ್​ ಕಟ್​ ಮಾಡಿಸಬೇಕು ಎಂಬುದರ ಬಗ್ಗೆ ಹೆಚ್ಚು ಮಾತನಾಡುತ್ತೇವೆ. ಪ್ರತಿಬಾರಿ ಅವರು ಮಾಡಿಸುವ ಕಟ್ಟಿಂಗ್​ ಟ್ರೆಂಡ್​ ಆಗುತ್ತದೆ ಮತ್ತು ಹಲವರು ಅದೇ ರೀತಿಯ ಹೇರ್​ ಸ್ಟೈಲಿಂಗ್​ ಮಾಡಿಸುತ್ತಾರೆ. ವಿರಾಟ್​ ಕೊಹ್ಲಿ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಕೊಹ್ಲಿಯ ಸ್ಟೈಲನ್ನು ಅನೇಕರು ಅನುಸರಿಸುತ್ತಾರೆ. ಸ್ಟೈಲ್​ ಮಾಡುವ ವಿಚಾರಕ್ಕೆ ಬಂದರೆ ವಿರಾಟ್​ ಕೊಹ್ಲಿ ಯಾವತ್ತಿದ್ದರೂ ನಂಬರ್​ ಒನ್​ ಎಂದು ಹೇಳುತ್ತೇನೆ.

    ವಿರಾಟ್​ ಕೊಹ್ಲಿ ಪ್ರತಿಬಾರಿ ಕಟ್ಟಿಂಗ್​ ಮಾಡಿಸಲು ಬಂದಾಗ ಎಷ್ಟು ಚಾರ್ಜ್​ ಮಾಡುತ್ತೀರಿ ಎಂದು ಆಕಿಮ್​ ಹಲೀಮ್​ ಅವರ ಬಳಿ ಕೇಳಿದಾಗ ನಾನು ವಿಧಿಸುವ ಶುಲ್ಕ ಬಹಳ ಸರಳವಾಗಿದ್ದು, ಎಲ್ಲರಿಗೂ ತಿಳಿದಿರುವಂತೆ ನನ್ನ ಸಲೂನ್​ನಲ್ಲಿ ಬೆಲೆಗಳು ಒಂದು ಲಕ್ಷದಿಂದ ಪ್ರಾರಂಭವಾಗುತ್ತದೆ. ಆದರೆ, ಸೆಲೆಬ್ರಿಟಿಗಳಿಗೆ ವಿಧಿಸುವ ದರವನ್ನು ಮಾತ್ರ ನಾನು ಹೇಳಲು ಸಾಧ್ಯವಿಲ್ಲ ಎಂದು ಆಕಿಮ್​ ಹಲೀಮ್​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts