More

    ಭಾರತದ ಸಾರ್ವಭೌಮತ್ವಕ್ಕೆ ನಿಷ್ಠೆ ತೋರಿದ ಕಾಶ್ಮೀರ ಪ್ರತ್ಯೇಕವಾದಿ ನಾಯಕ ಗಿಲಾನಿ ಮೊಮ್ಮಗಳು, ಶಬೀರ್ ಪುತ್ರಿ..!

    ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ, ಮೃತ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರ ಮೊಮ್ಮಗಳು ರುವಾ ಶಾ ಮತ್ತು ಬಂಧಿತ ಪ್ರತ್ಯೇಕತಾವಾದಿ ನಾಯಕ ಶಬೀರ್ ಅಹ್ಮದ್ ಶಾ ಅವರ ಹಿರಿಯ ಪುತ್ರಿ ಸಮಾ ಶಬೀರ್ ಭಾರತದ ಸಾರ್ಒವಭೌಮತೆಗೆ ತಮ್ಮ ನಿಷ್ಠೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ:ಮೇಡಮ್ ಟುಸ್ಸಾಡ್ಸ್​ನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ: ಅನಾವರಣ ಯಾವಾಗ ಗೊತ್ತಾ? ವಿವರ ಇಲ್ಲಿದೆ ನೋಡಿ.. 

    ಈ ಬೆಳವಣಿಗೆಯು ಕಾಶ್ಮೀರಿ ಕಣಿವೆಯಲ್ಲಿನ ಪ್ರತ್ಯೇಕತಾವಾದಕ್ಕೆ ದೊಡ್ಡ ಹೊಡೆತ ಎಂದು ಪರಿಗಣಿಸಲಾಗಿದೆ. ಮಾರ್ಚ್ 21 ರಂದು ಗುರುವಾರ ಕಾಶ್ಮೀರದ ಪ್ರಾದೇಶಿಕ ಪತ್ರಿಕೆಗಳಲ್ಲಿ ಪ್ರಕಟವಾದ ಒಂದೇ ರೀತಿಯ ಸಾರ್ವಜನಿಕ ಪ್ರಕಟಣೆಗಳಲ್ಲಿ ರುವಾ ಮತ್ತು ಸಾಮಾ  ಭಾರತ ಕ್ಕೇ ನಮ್ಮ ನಿಷ್ಠೆ ಎಂದು ಘೋಷಿಸಿಕೊಂಡಿದ್ದಾರೆ.

    “ನಾನು ಭಾರತದ ಒಕ್ಕೂಟಕ್ಕೆ ನಿಷ್ಠಾವಂತ ಪ್ರಜೆಯಾಗಿದ್ದೇನೆ. ಭಾರತದ ಒಕ್ಕೂಟದ ವಿರುದ್ಧ ಅಜೆಂಡಾ ಹೊಂದಿರುವ ಯಾವುದೇ ಸಂಘಟನೆ ಅಥವಾ ಸಂಘದೊಂದಿಗೆ ಸಂಬಂಧ ಹೊಂದಿಲ್ಲ. ನನ್ನ ದೇಶದ ಸಂವಿಧಾನಕ್ಕೆ ನಾನು ನಿಷ್ಠೆ ಹೊಂದಿದ್ದೇನೆ” ಎಂದು ಗಿಲಾನಿ ಅಳಿಯ ಅಲ್ತಾಫ್ ಅವರ ಪುತ್ರಿ ರುವಾ ಶಾ ಹೇಳಿದ್ದಾರೆ. ರುವಾ ತಂದೆ ಭಯೋತ್ಪಾದನೆ ಆರೋಪದಲ್ಲಿ ಜೈಲಿನಲ್ಲಿದ್ದ. ದೀರ್ಘಕಾಲದ ಅನಾರೋಗ್ಯದ ನಂತರ ಕಳೆದ ವರ್ಷ ಅವನು ಮೃತಪಟ್ಟಿದ್ದ.
    “ನಾನು ಡಿಎಫ್‌ಪಿ ಅಥವಾ ಅದರ ಸಿದ್ಧಾಂತದೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ” ನನ್ನನ್ನು ಯಾರಾದರೂ ಪ್ರತ್ಯೇಕತಾವಾದಿ ಗುಂಪಿನೊಂದಿಗೆ ಬೆಸುಗೆ ಹಾಕಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಕೆ ಎಚ್ಚರಿಸಿದ್ದಾಳೆ.

    ಇದೇ ರೀತಿಯ ಸಾರ್ವಜನಿಕ ಪ್ರಕಟಣೆಯಲ್ಲಿ, ಶಬೀರ್ ಶಾನ 24 ವರ್ಷದ ಪುತ್ರಿ ಸಮಾ, “ನಾನು ಭಾರತದ ನಿಷ್ಠಾವಂತ ಪ್ರಜೆ ಮತ್ತು ನಾನು ಭಾರತದ ಒಕ್ಕೂಟದ ಸಾರ್ವಭೌಮತ್ವಕ್ಕೆ ವಿರುದ್ಧವಾದ ಯಾವುದೇ ವ್ಯಕ್ತಿ ಅಥವಾ ಸಂಘಟನೆಯೊಂದಿಗೆ ಸಂಬಂಧ ಹೊಂದಿಲ್ಲ.” ಎಂದು ತಿಳಿಸಿದ್ದಾಳೆ.
    ಶಬೀರ್ ಶಾ ಅವರನ್ನು 2017 ರಲ್ಲಿ ಜಾರಿ ನಿರ್ದೇಶನಾಲಯವು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವ ಆರೋಪದ ಮೇಲೆ ಮನಿ ಲಾಂಡರಿಂಗ್ ಚಟುವಟಿಕೆಗಳನ್ನು ಬಂಧಿಸಿತ್ತು. ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ ಕೂಡ ಆತನ ಮೇಲೆ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪ ಹೊರಿಸಿತ್ತು.

    ಇಸ್ರೋದ ಮರುಬಳಕೆಯ ‘ಪುಷ್ಪಕ್’ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ- ಬಾಹ್ಯಾಕಾಶದಿಂದ ಹಿಂದಿರುಗುವ ಆರ್​ಎಲ್​ವಿ ವಾಹನದ ವಿಶೇಷತೆ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts