More

    ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ಪ್ರಶ್ನೆ! ಶಾಕಿಂಗ್ ಉತ್ತರ ಕೊಟ್ಟ ನಟಿ ರಾಕುಲ್ ಪ್ರೀತ್

    ಮುಂಬೈ: ಬ್ಲಾಕ್​ಬಸ್ಟರ್​ ತೆಲುಗು ಸಿನಿಮಾಗಳಲ್ಲಿ ನಟಿಸಿ, ಮಿಂಚಿರುವ ನಟಿ ರಾಕುಲ್ ಪ್ರೀತ್ ಸಿಂಗ್ ಇತ್ತೀಚೆಗಷ್ಟೇ ನಟ-ನಿರ್ಮಾಪಕ ಜಾಕಿ ಭಗ್ನಾನಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಳೆದ ಕೆಲವು ವಾರಗಳ ಹಿಂದೆ ಗೋವಾದಲ್ಲಿ ನಡೆದ ಅತ್ಯಂತ ಆತ್ಮೀಯ ಕೂಟದಲ್ಲಿ ಈ ಜೋಡಿಯ ಅದ್ದೂರಿ ವಿವಾಹ ನಡೆದಿದ್ದು, ಸುದ್ದಿಗಾರರೊಬ್ಬರು ಇತ್ತೀಚಿನ ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ನಟಿ ಕೊಟ್ಟ ಉತ್ತರ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಇದನ್ನೂ ಓದಿ: ವಚನಗಳು ವಿದ್ಯಾಥಿರ್ಗಳ ವ್ಯಕ್ತಿತ್ವ ವಿಕಸನಕ್ಕೆ ಮಾರ್ಗದಶಿರ್ : ಶ್ರೀದೇವಿ ಶೆಟ್ಟರ್​

    ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನೀವು ಈಗ ನಿಮ್ಮ ಬೋಲ್ಡ್ ಡ್ರೆಸ್ಸಿಂಗ್ ಸ್ಟೈಲ್​ ಅನ್ನು ಅಡ್ಜೆಸ್ಟ್​ ಮಾಡಿಕೊಳ್ಳುತ್ತೀರೋ ಹೇಗೆ? ಎಂದು ಪ್ರಶ್ನಿಸಿದರು. ಈ ಪ್ರಶ್ನೆ ಆಲಿಸಿದ ರಾಕುಲ್, “ಡ್ರೆಸ್ಸಿಂಗ್​ ಬಗ್ಗೆ ನನ್ನ ಪತಿ ತುಂಬಾನೇ ಕೂಲ್ ಇದ್ದಾರೆ. ಪತಿಯ ಮನೆಯವರೂ ಕೂಡ ಕೂಲ್ ಆಗಿದ್ದಾರೆ. ಹಾಗಾಗಿ ಯಾವುದೇ ತೊಂದರೆಯಿಲ್ಲ” ಎಂದು ಹೇಳಿದರು. ಆದ್ರೆ…

    “ನಟಿಯರ ಬೋಲ್ಡ್​ ಡ್ರೆಸ್ಸಿಂಗ್​ ಬಗ್ಗೆ ಪ್ರಶ್ನೆ ಮಾಡುವ ನೀವು, ಯಾಕೆ ನಟರನ್ನು ಇದೇ ರೀತಿಯಲ್ಲಿ ಪ್ರಶ್ನಿಸುವುದಿಲ್ಲ? ಮದುವೆಯಾದ ಬಳಿಕ ನಟರು ತಮ್ಮ ಡ್ರೆಸ್ಸಿಂಗ್​ ಸ್ಟೈಲ್​ನ ಬದಲಾಯಿಸುತ್ತಾರಾ? ಇಲ್ಲ ಅಲ್ವೇ” ಎಂದು ಹೇಳುವ ಮೂಲಕ ಖಡಕ್​ ಉತ್ತರ ಕೊಟ್ಟಿದ್ದಾರೆ. ಸದ್ಯ ನಟಿಯ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ,(ಏಜೆನ್ಸೀಸ್).

    ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts