More

    ವಚನಗಳು ವಿದ್ಯಾಥಿರ್ಗಳ ವ್ಯಕ್ತಿತ್ವ ವಿಕಸನಕ್ಕೆ ಮಾರ್ಗದಶಿರ್ : ಶ್ರೀದೇವಿ ಶೆಟ್ಟರ್​

    ವಿಜಯವಾಣಿ ಸುದ್ದಿಜಾಲ ಗದಗ
    ವಚನ ಸಾಹಿತ್ಯವು ಸುಲಭವಾಗಿ ಅರ್ಥವಾಗುವ ಮತ್ತು ಅಪಾರ ಜ್ಞಾನವನ್ನು ನೀಡುವ ಸಾಹಿತ್ಯವಾಗಿದೆ. ವಿದ್ಯಾಥಿರ್ಗಳ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ಮಾರ್ಗದಶಿರ್ಯಾಗಿವೆ ಎಂದು ತೊಂಟದಾರ್ಯ ಜಾತ್ರಾ ಸಮಿತಿಯ ಉಪಾಧ್ಯೆ ಶ್ರೀದೇವಿ ಶೆಟ್ಟರ್​ ಹೇಳಿದರು.
    ನಗರದ ತೋಂಟದಾರ್ಯ ಸಂಸ್ಥೆಯಲ್ಲಿ ಶುಕ್ರವಾರ ಅಕ್ಕಮಹಾದೇವಿ ಯೋಗ ವಿಜ್ಞಾನಕೇಂದ್ರವು ವಿಶ್ವ ಮಹಿಳಾ ದಿನದ ಅಂಗವಾಗಿ ಆಯೋಜಿಸಿದ್ದ ವಚನ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾಥಿರ್ಗಳು ಕೇವಲ ಪಠ್ಯ ವಿಷಯದ ಜೊತೆಗೆ ವಚನಗಳನ್ನು ಅಧ್ಯಯನ ಮಾಡಬೇಕು ಎಂದರು.
    ವಿಶ್ವಗುರು ಬಸವೇಶ್ವರರು ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಸಮಸಮಾಜವನ್ನು ನಿಮಿರ್ಸಲು ಶ್ರಮಿಸಿದ ಮಹಾತ್ಮರಾಗಿದ್ದರು. ಇತ್ತೀಚೆಗೆ ಕರ್ನಾಟಕ ಸರ್ಕಾರ ಬಸವೇಶ್ವರರನ್ನು ಕರ್ನಾಟಕದ ಸಾಂಸತಿಕ ನಾಯಕ ಎಂದು ೂಷಿಸಿರುವುದು ಶ್ಲಾನೀಯ. ಮಕ್ಕಳನ್ನು ಪ್ರಜ್ಞಾವಂತ ನಾಗರಿಕರನ್ನಾಗಿಸುವ ನಿಟ್ಟಿನಲ್ಲಿ, ಅವರು ಮೌಲ್ಯಯುತ ಜೀವನ ನಡೆಸುವ ನಿಟ್ಟಿನಲ್ಲಿ ವಚನಸಾಹಿತ್ಯದ ಅಧ್ಯಯನ ಮಹತ್ವ ರ್ಪೂಣವಾಗಿದೆ ಎಂದರು.
    ನಗರಸಭೆ ಅಧ್ಯೆ ಶಿವಲೀಲಾ ಅಕ್ಕಿ ಮಾತನಾಡಿ, ವಚನ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿರುವ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಕಾರ್ಯ ಅಭಿನಂದನೀಯ. ಇಂತಹ ಮೌಲಿಕ ಸ್ಪರ್ಧೆಗಳಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವುದು ಮುಖ್ಯವಾಗಿರುತ್ತದೆ. ವಿದ್ಯಾಥಿರ್ಗಳು ತಮ್ಮ ಜೀವನದಲ್ಲಿ ಶಿಕರಿಗೆ ಗೌರವ ನೀಡಬೇಕು. ಪ್ರತಿಯೊಬ್ಬ ವಿದ್ಯಾಥಿರ್ ತಂದೆ&ತಾಯಿಗಳೊಂದಿಗೆ, ಗುರು&ಹಿರಿಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸುವ ವಚನಸಾಹಿತ್ಯ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುತ್ತವೆ. ಸಾಮಾಜಿಕ ಸ್ವಾಸವನ್ನು ಕಾಪಾಡುವ ಕೆಲಸವನ್ನು ವಚನಗಳು ಮಾಡುತ್ತವೆ ಎಂದರು.
    ವಚನ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾಥಿರ್ಗಳಿಗೆ ಬಹುಮಾನ ವಿತರಿಸಲಾಯಿತು. ಕೊಟ್ರೇಶ ಮೆಣಸಿನಕಾಯಿ, ಅಕ್ಕಮಹಾದೇವಿ ಚಟ್ಟಿ, ಸುವರ್ಣ ವಸ್ತ್ರದ, ವಿಶಾಲಾ ಕುರಗೋಡ, ಕವಿತಾ ನಾರಗುಣ್ಣವರ, ಸುರೇಖಾ ಕುಂಬಾರಗೇರಿಮಠ, ಸುಮಾ ಹಿರೇಮಠ, ಕೆ. ಎಂ. ಗೌಡರ, ಬಶೀರಾ ಕಲೇಬಾಯಿ, ಮಂಜುಳಾ ಭೂಮಣ್ಣವರ, ಶಶಿಧರಗೌಡ ಪಾಟೀಲ ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts