More

  ಹುಚ್ಚು ಹಿಡಿದಿದೆ… ಕನ್ನಡತಿ ಶ್ರೀಲೀಲಾ ಬಗ್ಗೆ ಆರ್​. ಅಶ್ವಿನ್​ ಮಾಡಿದ ಕಾಮೆಂಟ್​ ಸಿಕ್ಕಾಪಟ್ಟೆ ವೈರಲ್​

  ಹೈದರಾಬಾದ್​: ‘ಕುರ್ಚಿನಿ ಮಡತಪೆಟ್ಟಿ’ ಹಾಡು ಮತ್ತು ವಿಶೇಷ ಡಾನ್ಸ್​ ಸ್ಟೆಪ್ಸ್​ನಿಂದಲೇ ಮಹೇಶ್​ ಬಾಬು ನಟನೆಯ ಹಾಗೂ ತ್ರಿವಿಕ್ರಮ್​ ಶ್ರೀನಿವಾಸ್​ ನಟನೆಯ ಗುಂಟೂರು ಖಾರಂ ಸಿನಿಮಾ ಭಾರಿ ಹೈಪ್​ ಕ್ರಿಯೆಟ್​ ಮಾಡಿತ್ತು. ಇಂದಿಗೂ ಈ ಚಿತ್ರದ ಹಾಡು ಮತ್ತು ಡಾನ್ಸ್​ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇದೆ. ಅದರಲ್ಲೂ ರೀಲ್ಸ್​ನಲ್ಲಿ ಬಹುತೇಕ ಮಂದಿ ಕುರ್ಚಿನಿ ಮಡತಪೆಟ್ಟಿ ಹಾಡಿಗೆ ಸೊಂಟ ಬಳುಕಿಸಿದ್ದಾರೆ.

  ಈ ಹಾಡಿನಲ್ಲಿ ಮಹೇಶ್​ ಬಾಬುಗಿಂತ ವಿಶೇಷ ಗಮನ ಸೆಳೆದಿದ್ದ ನಮ್ಮ ಕನ್ನಡತಿ ಶ್ರೀಲೀಲಾ. ಅವರ ಮಾದಕ ಡಾನ್ಸ್​ಗೆ ಮರಳಾಗದವರೇ ಇಲ್ಲ ಎನ್ನಬಹುದು. ಇದೀಗ ಆ ಸಾಲಿಗೆ ಟೀಮ್​ ಇಂಡಿಯಾ ಸ್ಟಾರ್​ ಸ್ಪಿನ್ನರ್​ ರವಿಚಂದ್ರನ್​ ಅಶ್ವಿನ್​ ಕೂಡ ಸೇರಿದ್ದಾರೆ. ಚಿತ್ರದ ಹಾಡು ಮತ್ತು ಶ್ರೀಲೀಲಾ ಡಾನ್ಸ್​ ಸ್ಟೆಪ್ಸ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

  ಇತ್ತೀಚೆಗೆ ಯೂಟ್ಯೂಬರ್ ಪ್ರಸನ್ನ ಅಗೋರಂ ಅವರೊಂದಿಗೆ ಸಂವಾದ ನಡೆಸಿದ ಅಶ್ವಿನ್ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಗುಂಟೂರು ಖಾರಂ ಸಿನಿಮಾವನ್ನು ‘ಜಾಲಿ ಮತ್ತು ಮನರಂಜನೆ’ ಎಂದು ಕರೆದರು. ಅದರಲ್ಲೂ ‘ಕುರ್ಚಿನಿ ಮಡತಪೆಟ್ಟಿ’ ಹಾಡಿಗಾಗಿ ಶ್ರೀಲೀಲಾ ಅವರ ಡಾನ್ಸ್​ ಸ್ಟೆಪ್ಸ್​ಗಳ ಬಗ್ಗೆ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀಲೀಲಾ ಅವರ ಡಾನ್ಸ್​​ ಅದ್ಭುತವಾಗಿದೆ ಮತ್ತು ನನಗೆ ಹುಚ್ಚು ಹಿಡಿಸಿದೆ ಎಂದರು. ಹಾಡಿನ ಮೇಕಿಂಗ್ ನನಗೆ ತುಂಬಾ ಇಷ್ಟವಾಯಿತು ಎಂದರು.

  ಗುಂಟೂರು ಖಾರಂ ಸಿನಿಮಾವನ್ನು ವೀಕ್ಷಿಸಲು ಅಶ್ವಿನ್​ ಶಿಫಾರಸು ಮಾಡಿದರು. ಮಹೇಶ್ ಬಾಬು ಅವರು ಅತ್ಯುತ್ತಮ ನೃತ್ಯಗಾರ ಎಂದರು. ಈ ಹಾಡಿನ ಬಗ್ಗೆ ಕುತೂಹಲ ಇರುವವರು ಯೂಟ್ಯೂಬ್​ನಲ್ಲಿ ಸರ್ಚ್ ಮಾಡುವಂತೆ ಸೂಚಿಸಿದರು.

  ಅಂದಹಾಗೆ ಗುಂಟೂರು ಖಾರಂ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ಈ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಹೇಳಿಕೊಳ್ಳುವಷ್ಟು ಗಳಿಕೆ ಮಾಡಲಿಲ್ಲ. ಕುರ್ಚಿನಿ ಮಡತಪೆಟ್ಟಿ ಹಾಡಿಗೆ ಸಿಕ್ಕ ಯಶಸ್ಸು ಕೂಡ ಈ ಸಿನಿಮಾಗೆ ಸಿಗಲಿಲ್ಲ. ಈ ಸಿನಿಮಾ ಎದುರು ತೆರೆಕಂಡ ಹನುಮಾನ್​ ಸಿನಿಮಾ ಒಳ್ಳೆಯ ಹೆಸರು ಮತ್ತು ಕಲೆಕ್ಷನ್​ ಮಾಡಿತು. ಆದರೆ, ಗುಂಟೂರು ಖಾರಂ ಸಿನಿಮಾದ ಹಾಡುಗಳು ಮಾತ್ರ ಇಂದಿಗೂ ಬಾರಿ ಸದ್ದು ಮಾಡುತ್ತಲೇ ಇದೆ. (ಏಜೆನ್ಸೀಸ್​)

  ಬಾಲಕಿ ದತ್ತು ಪ್ರಕರಣ: ರೀಲ್ಸ್​ ರಾಣಿ ಸೋನು ಶ್ರೀನಿವಾಸ್​ ಗೌಡ ಪೊಲೀಸ್​ ವಿಚಾರಣೆ ವೇಳೆ ಹೇಳಿದ್ದಿಷ್ಟು…

  ಬಾಲಕಿ ದತ್ತು ಪ್ರಕರಣ: ರೀಲ್ಸ್​ ರಾಣಿ ಸೋನು ಶ್ರೀನಿವಾಸ್​ ಗೌಡ ಪೊಲೀಸ್​ ವಿಚಾರಣೆ ವೇಳೆ ಹೇಳಿದ್ದಿಷ್ಟು…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts