More

  ಅಮೀರ್ ಚಿತ್ರದಲ್ಲಿ 5 ಸೆಕೆಂಡ್ ಪಾತ್ರದಲ್ಲಿ ನಟಿಸಿದ ನಂತರ ಅದೃಷ್ಟವೇ ಬದಲಾಯ್ತು..ಇಂದು ಅವರಿಗೆ ಉದ್ಯೋಗ ಮಾತ್ರವಲ್ಲ, ಗೆಳತಿಯೂ ಇದ್ದಾರೆ!

  ಬೆಂಗಳೂರು: ಚಿತ್ರರಂಗಕ್ಕೆ ಬರುವ ಮುನ್ನ ಅನೇಕ ಕಲಾವಿದರು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿರುತ್ತಾರೆ. ದಕ್ಷಿಣದ ತಲೈವಾ ರಜನಿಕಾಂತ್ ಒಂದು ಕಾಲದಲ್ಲಿ ಕಂಡಕ್ಟರ್ ಆಗಿದ್ದರು. ಜಾಕಿ ಶ್ರಾಫ್ ಕೂಡ ಸ್ಲಂಗಳಲ್ಲಿ ವಾಸಿಸುತ್ತಿದ್ದರು. ಆದರೆ ಚಿತ್ರರಂಗಕ್ಕೆ ಬಂದ ನಂತರ ಅವರ ಅದೃಷ್ಟ ಬದಲಾಗಿದೆ. ಇಂದು ಅವರು ಅದ್ದೂರಿ ಜೀವನವನ್ನು ನಡೆಸುತ್ತಿದ್ದಾರೆ. ಇಲ್ಲಿ ಇಂದು ನಾವು ನಿಮಗೆ ಸ್ಟಾರ್ ಅಲ್ಲದ ಮತ್ತು ಒಂದು ಕಾಲದಲ್ಲಿ ಬೀದಿಗಳಲ್ಲಿ ಭಿಕ್ಷೆ ಬೇಡುವ ಮೂಲಕ ಜೀವನ ಸಾಗಿಸುತ್ತಿದ್ದ ವ್ಯಕ್ತಿಯ ಕಥೆಯನ್ನು ಹೇಳುತ್ತೇವೆ.

  ಅವರು ಅಮೀರ್ ಖಾನ್ ಬ್ಲಾಕ್‌ಬಸ್ಟರ್ ಚಲನಚಿತ್ರದಲ್ಲಿ ಕೇವಲ 5 ಸೆಕೆಂಡುಗಳಲ್ಲಿ ನಟಿಸಿದ ನಂತರ ಭವಿಷ್ಯವೇ ಬದಲಾಯಿತು. ನಾವು ಹೇಳುತ್ತಿರುವ ನಟ ಬೇರೆ ಯಾರೂ ಅಲ್ಲ, ಅಮೀರ್ ಖಾನ್ ಅಭಿನಯದ ಪಿಕೆ ಚಿತ್ರದಲ್ಲಿ ಭಿಕ್ಷುಕನ ಪಾತ್ರವನ್ನು ನಿರ್ವಹಿಸಿದ ಮನೋಜ್ ರಾಯ್.  

  ಅಮೀರ್ ಚಿತ್ರದಲ್ಲಿ 5 ಸೆಕೆಂಡ್ ಪಾತ್ರದಲ್ಲಿ ನಟಿಸಿದ ನಂತರ ಅದೃಷ್ಟವೇ ಬದಲಾಯ್ತು..ಇಂದು ಅವರಿಗೆ ಉದ್ಯೋಗ ಮಾತ್ರವಲ್ಲ, ಗೆಳತಿಯೂ ಇದ್ದಾರೆ!

  ಉತ್ತರ-ಮಧ್ಯ ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಬೇಡತಿ ನಿವಾಸಿ ಮನೋಜ್ ರಾಯ್, ಜೀವನಕ್ಕಾಗಿ ಭಿಕ್ಷೆ ಬೇಡುತ್ತಿದ್ದರು. ದಿನಗೂಲಿ ಕಾರ್ಮಿಕನ ಮಗ ಮನೋಜ್ ಹುಟ್ಟಿದ ತಕ್ಷಣ ತನ್ನ ತಾಯಿಯನ್ನು ಕಳೆದುಕೊಂಡಿದ್ದರು. ನಂತರ ಅವರ ತಂದೆಯೂ ಅನಾರೋಗ್ಯಕ್ಕೆ ತುತ್ತಾಗಿದ್ದು, ಮನೆಯ ಆರ್ಥಿಕ ಸ್ಥಿತಿ ಸಂಪೂರ್ಣ ಕುಸಿಯಿತು. ಇದಾದ ನಂತರ ಮನೋಜ್ ಶಾಲೆ ತೊರೆದು ಕುಟುಂಬಕ್ಕೆ ಆಸರೆಯಾಗಲು ಭಿಕ್ಷೆ ಬೇಡತೊಗಿದರು. ನಂತರ ಮನೋಜ್ ಕೆಲಸ ಹುಡುಕಿಕೊಂಡು ದೆಹಲಿಗೆ ಹೋಗಲು ರೈಲು ಹತ್ತಿದರು. ಆದರೆ, ಇಲ್ಲೂ ಮನೋಜ್ ಕೈಯಲ್ಲಿ ಭಿಕ್ಷಾಪಾತ್ರೆ ಹಿಡಿದು ಭಿಕ್ಷೆ ಬೇಡಲು ಆರಂಭಿಸಿದರು.

  ಹಿಂದೊಮ್ಮೆ ನೀಡಿದ ಸಂದರ್ಶನದಲ್ಲಿ ಮನೋಜ್ ತಮ್ಮ ಕಥೆಯನ್ನು ಹೇಳಿದ್ದರು.  “ನಾನು ಜಂತರ್ ಮಂತರ್ ನಲ್ಲಿ ಭಿಕ್ಷೆ ಬೇಡುತ್ತಿದ್ದೆ. ಈ ಸಮಯದಲ್ಲಿ ಇಬ್ಬರು ಮಹನೀಯರು ನನ್ನ ಬಳಿ ಬಂದು ನಾನು ನಟಿಸಬಹುದೇ ಎಂದು ಕೇಳಿದರು. ಎರಡು ಹೊತ್ತಿನ ಊಟವನ್ನು ಸಂಪಾದಿಸಲು ನಾನು ಕುರುಡನಂತೆ ನಟಿಸಿದ್ದೇನೆ. ಹೊರಡುವ ಮೊದಲು ಅವರು ನನಗೆ ಫೋನ್ ಸಂಖ್ಯೆ ಮತ್ತು 20 ರೂ ನೋಟು ನೀಡಿದರು” ಎಂದರು.

   ಅಮೀರ್ ಖಾನ್ ಅವರ ‘ಪಿಕೆ’ಗೆ ಮನೋಜ್ ಆಡಿಷನ್ ನೀಡಿದ್ದರು. ಇದಾದ ನಂತರ ಮನೋಜ್ ಅವರನ್ನು ನೆಹರೂ ಸ್ಟೇಡಿಯಂನಲ್ಲಿ ಆಡಿಷನ್‌ಗೆ ಕರೆಯಲಾಯಿತು. ಅವರು ಅಮೀರ್ ಖಾನ್ ಅವರ ‘ಪಿಕೆ’ ಚಿತ್ರದ ಪಾತ್ರವನ್ನು ಪಡೆಯಲು ಇತರ ಏಳು ಭಿಕ್ಷುಕರನ್ನು ಹಿಂದಿಕ್ಕಿದರು. 

  “ನಾನು ಮರುದಿನ ಹೋಗಿ ಸಿನಿಮಾ ಯೂನಿಟ್ ಸೇರಿಕೊಂಡೆ. ನನ್ನನ್ನು ಇತರ ಏಳು ಮಂದಿ ಭಿಕ್ಷುಕರೊಂದಿಗೆ ಆಡಿಷನ್‌ಗೆ ಕರೆದೊಯ್ಯಲಾಯಿತು, ಎಲ್ಲರೂ ದೃಷ್ಟಿ ವಿಕಲಚೇತನರು. ನಾನು ಚಲನಚಿತ್ರ ಅಥವಾ ನಟರ ಬಗ್ಗೆ ಗಮನಹರಿಸಲಿಲ್ಲ. ನನ್ನ ಆಯ್ಕೆಯ ತನಕ ಒಂದು ವಾರದವರೆಗೆ ಎಲ್ಲ ಉಚಿತವಾಗಿತ್ತು, ಆಹಾರವು ನನಗೆ ಮುಖ್ಯವಾಗಿತ್ತು.” ಎಂದು ಹೇಳಿದ್ದಾರೆ ಮನೋಜ್.

  ಅಮೀರ್ ಚಿತ್ರದಲ್ಲಿ 5 ಸೆಕೆಂಡ್ ಪಾತ್ರದಲ್ಲಿ ನಟಿಸಿದ ನಂತರ ಅದೃಷ್ಟವೇ ಬದಲಾಯ್ತು..ಇಂದು ಅವರಿಗೆ ಉದ್ಯೋಗ ಮಾತ್ರವಲ್ಲ, ಗೆಳತಿಯೂ ಇದ್ದಾರೆ!

  ಮನೋಜ್ ರಾಯ್‌ಗೆ ಪಿಕೆ’ ಯಲ್ಲಿ 5-ಸೆಕೆಂಡ್ ಪಾತ್ರ ಸಿಕ್ಕಿತು. ರಾಜ್‌ಕುಮಾರ್ ಹಿರಾನಿ ಅವರ ಅಮೀರ್ ಖಾನ್ ಅಭಿನಯದ ಪಿಕೆ ಚಿತ್ರದಲ್ಲಿ ಮನೋಜ್ ರಾಯ್ 5-ಸೆಕೆಂಡ್ ಪಾತ್ರವನ್ನು ಪಡೆದರು. ಇದರಲ್ಲಿ ಅವರು ಅಂಧ ಭಿಕ್ಷುಕನ ಪಾತ್ರವನ್ನು ನಿರ್ವಹಿಸಿದರು. ಅಮೀರ್ ಖಾನ್ ಬಂದು ತನ್ನ ಬಟ್ಟಲಿನಿಂದ ನಾಣ್ಯಗಳನ್ನು ಹೊರತೆಗೆಯುವವರೆಗೂ ಅವರು ನಿಂತುಕೊಂಡು ಕೋಲಿನ ಬೆಂಬಲವನ್ನು ತೆಗೆದುಕೊಳ್ಳಬೇಕಾಗಿತ್ತು.

  ಅನುಷ್ಕಾ ಶರ್ಮಾ ಮತ್ತು ಸುಶಾಂತ್ ಸಿಂಗ್ ರಜಪೂತ್ ಜೊತೆಗೆ ಇತರ ನಟರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ‘ಪಿಕೆ’ ಬ್ಲಾಕ್ಬಸ್ಟರ್ ಆಯಿತು. ಚಿತ್ರವು ವಿಶ್ವಾದ್ಯಂತ 722 ಕೋಟಿ ರೂ. ಬಾಚಿತು.

  5 ಸೆಕೆಂಡ್‌ಗಳ ಪಾತ್ರವು ಅವರ ಭವಿಷ್ಯವನ್ನು ಬದಲಾಯಿಸಿತು. ಇದೇ ಸಂದರ್ಶನದಲ್ಲಿ ಮನೋಜ್ ರಾಯ್ ಅವರು ‘ಪಿಕೆ’ಗೆ ಬಂದ ನಂತರ ತಮ್ಮ ಜೀವನ ಬದಲಾಗಿದೆ ಎಂದು ಬಹಿರಂಗಪಡಿಸಿದ್ದರು. ಈ ಚಿತ್ರದಿಂದ ಬಂದ ಹಣದಲ್ಲಿ ಮನೋಜ್ ತಮ್ಮ ಹಳ್ಳಿಯಲ್ಲಿ ಹೊಸ ಅಂಗಡಿಯನ್ನು ಖರೀದಿಸಿದರು ಮತ್ತು “ಚಿತ್ರದಿಂದ ಬಂದ ಹಣದಿಂದ ನಾನು ನನ್ನ ಹಳ್ಳಿಗೆ ಮರಳಿದೆ, ನನಗೆ ಹಳ್ಳಿಯಲ್ಲಿ ಅಂಗಡಿಯಲ್ಲಿ ಕೆಲಸವಿದೆ, ಫೇಸ್‌ಬುಕ್ ಖಾತೆ ಇದೆ. ಗೆಳತಿಯೂ ಇದ್ದಾಳೆ. ಹೌದು, ಜನರು ಈಗ ನನ್ನನ್ನು ಪಿಕೆ ಹನಿ ಸಿಂಗ್ ಎಂದು ಕರೆಯುತ್ತಾರೆ. ಇದೆಲ್ಲವೂ ಚಿತ್ರದಿಂದಾಗಿ ಸಾಧ್ಯವಾಯಿತು” ಎಂದಿದ್ದಾರೆ. ಮನೋಜ್. 

  ‘ನನಗೆ ಟಿಕೆಟ್ ಸಿಕ್ಕಿದೆ’ ಎಂದ ನಟಿ ಊರ್ವಶಿ; ಇವರ ವಿರುದ್ಧ ಸ್ಪರ್ಧೆ ಮಾಡೋದು ಯಾರು?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts