More

  ಗಂಡನಾಗಿ ನನ್ನಲ್ಲಿ ನಿನಗೆ ಏನು ಕೊರತೆ ಕಾಣಿಸಿದೆ ಎಂದು ಪ್ರಶ್ನಿಸಿದ ಆಮೀರ್; ಮಾಜಿ ಪತ್ನಿ ಕೊಟ್ಟ ಉತ್ತರ ವೈರಲ್

  ಮುಂಬೈ: ಬಾಲಿವುಡ್​ನ ಸ್ಟಾರ್​ ನಟ ಆಮೀರ್​ ಖಾನ್​ ತಮ್ಮ ಪತ್ನಿ ಕಿರಣ್​ ರಾವ್​ ಅವರಿಂದ ದೂರವಾಗಿ ತುಂಬಾ ವರ್ಷಗಳಾಗುತ್ತ ಬಂದರೂ ಈವರೆಗೆ ಯಾವ ಕಾರಣಕ್ಕೆ ವಿಚ್ಛೇದನ ನೀಡಿದರು ಎಂಬುದು ರಿವೀಲ್​ ಆಗಿಲ್ಲ. ವಿಚ್ಛೇದನ ಪಡೆದ ನಂತರವೂ ಇವರಿಬ್ಬರು ಅನ್ಯೋನ್ಯವಾಗಿದ್ದು, ಇಬ್ಬರು ಆಗಿಂದಾಗೆ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗುತ್ತಿರುತ್ತಾರೆ.

  ಇಬ್ಬರು ವಿಚಾರ ಒಂದಕ್ಕೆ ಮತ್ತೊಮ್ಮೆ ಒಂದಾಗಿದ್ದು, ಒಟ್ಟಾಗಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಕಿರಣ್​ ರಾವ್​ ನಿರ್ದೆಶನದ ಲಾಪತಾ ಲೇಡಿಸ್ ಸಿನಿಮಾಗೆ ಆಮೀರ್​ ಖಾನ್​ ಬಂಡವಾಳ ಹೂಡಿದ್ದು ಮಾರ್ಚ್​ 1ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಇನ್ನು ಸಿನಿಮಾದ ಪ್ರಮೋಶನ್​ ವೇಳೆ ಮಾಜಿ ಪತ್ನಿಯನ್ನು ಉದ್ಧೇಶಿಸಿ ಆಮೀರ್ ಖಾನ್​ ಆಡಿರುವ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಚರ್ಚೆಗೆ ಗುರಿಯಾಗಿದೆ.

  ಖಾಸಗಿ ಸುದ್ದಿ ವಾಹಿನಿ ಒಂದರಲ್ಲಿ ಒಟ್ಟಾಗಿ ಭಾಗಿಯಾಗಿದ್ದ ಆಮೀರ್​ ಹಾಗೂ ಕಿರಣ್​ಗೆ ಪ್ರಶ್ನೆ ಕೇಳಲಾಗುತ್ತದೆ. ಇದಕ್ಕೆ ಆಮೀರ್​ ಉತ್ತರಿಸಿರುವ ರೀತಿ ಎಲ್ಲರ ಗಮನ ಸೆಳೆದಿದ್ದು, ಇವರಿಬ್ಬರು ಪ್ರಭುದ್ಧವಾಗಿ ಚಿಂತಿಸುತ್ತಾರೆ ಎಂಬುದು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ.

  ಇದನ್ನೂ ಓದಿ: ದರ್ಶನ್ vs ಉಮಾಪತಿ; ಈ ಸಂದರ್ಭದಲ್ಲಿ ಇಂತಹ ಬೆಳವಣಿಗೆ ಬೇಕಾಗಿರಲಿಲ್ಲ: ಇಂದ್ರಜಿತ್​ ಲಂಕೇಶ್

  ಒಂದು ದಿನ ಸಂಜೆ ನಾವಿಬ್ಬರು ಕುಳಿತಿದ್ದಾಗ ಕಿರಣ್​ಗೆ ಒಂದು ಪ್ರಶ್ನೆ ಕೇಳಿದೆ. ಗಂಡನಾಗಿ ನನ್ನಲ್ಲಿ ನಿನಗೆ ಏನು ಕೊರತೆ ಕಾಣಿಸಿದೆ? ಜೀವನದಲ್ಲಿ ಮುಂದೆ ಸಾಗುತ್ತಿದ್ದೇನೆ. ನನ್ನನ್ನು ನಾನು ಸುಧಾರಿಸಿಕೊಳ್ಳಬೇಕು ಎಂದು ನಾನು ಕಿರಣ್​ಗೆ ನಾನು ಕೇಳಿದೆ. ಇದಕ್ಕೆ ಉತ್ತರಿಸಿದ ಕಿರಣ್​ ಓಕೆ.. ಬರೆದುಕೊಳ್ಳಿ ಅಂತ ಕಿರಣ್​ ನನಗೆ ಪಟ್ಟಿ ನೀಡಿದರು. ನೀವು ಬಹಳ ಮಾತನಾಡುತ್ತೀರಿ. ಬೇರೆಯವರಿಗೆ ಮಾತನಾಡಲು ನೀವು ಬಿಡುವುದಿಲ್ಲ. ನಿಮ್ಮದೇ ವಾದಕ್ಕೆ ಅಂಟಿಕೊಂಡಿರುತ್ತೀರಿ. ಈ ರೀತಿ 15-20 ವಿಷಯಗಳ ಪಟ್ಟಿ ನೀಡಿದರು ಎಂದು ಆಮೀರ್​ ಸಂದರ್ಶನದಲ್ಲಿ ಹೇಳಿದ್ದಾರೆ.

  ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಸೋತ ಬಳಿಕ ಆಮಿರ್​ ಖಾನ್​ ಸಿತಾರೆ ಜಮೀನ್​ ಪರ್ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಲಾಪತಾ ಲೇಡಿಸ್​ ಚಿತ್ರದ ಪ್ರಮೋಸನ್​ನಲ್ಲಿ ತೊಡಗಿಸಿಕೊಂಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts