More

    ಪಂದ್ಯದ ವೇಳೆ ದುರ್ವತನೆ; ಆರ್​ಸಿಬಿ ಮಾಜಿ ಆಟಗಾರನಿಗೆ ನಿಷೇಧ ಹೇರಿದ ಐಸಿಸಿ

    ನವದೆಹಲಿ: ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ-20 ಸರಣಿಯನ್ನು ಅತಿಥೇಯರು 2-1 ಅಂತರದಲ್ಲಿ ಜಯಿಸಿದ್ದು, ಸಂಭ್ರಮದ ನಡುವೆಯೇ ಉಭಯ ತಂಡಗಳಿಗೆ ದೊಡ್ಡ ಹಿನ್ನಡೆಯಾಗಿದೆ.

    ಪಂದ್ಯದ ವೇಳೆ ಉಭಯ ತಂಡಗಳ ಆಟಗಾರರು ತೋರಿದ ದುರ್ವತನೆಗೆ ಅಸಮಾಧಾನಗೊಂಡಿರುವ ಅಂತರಾಷ್ಟ್ರೀಕಯ ಕ್ರಿಕೆಟ್​ ಮಂಡಳಿ (ICC) ಇಬ್ಬರೂ ಆಟಗಾರರನ್ನು ಶಿಕ್ಷೆಗೆ ಗುರಿಪಡಿಸಿದೆ. ಅದರಂತೆ ಮಹತ್ವದ ನಿರ್ಧಾರ ಕೈಗೊಂಡಿರುವ ಐಸಿಸಿ ಓರ್ವ ಆಟಗಾರನಿಗೆ ನಿಷೇಧ ಹೇರಿದ್ದು, ಮತ್ತೋರ್ವ ಆಟಗಾರನಿಗೆ ದಂಡವನ್ನು ವಿಧಿಸಿದೆ.

    ಪಂದ್ಯದ ವೇಳೆ ದುರ್ವತನೆ ತೋರಿದ ಆರೋಪದ ಮೇಲೆ ಆರ್​ಸಿಬಿ ಮಾಜಿ ಆಟಗಾರ, ಶ್ರೀಲಂಕಾ ಕ್ರಿಕೆಟ್​ ತಂಡದ ನಾಯಕ ವನಿಂದು ಹಸರಂಗ ಹಾಗೂ ಅಫ್ಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್‌ಗೆ ಐಸಿಸಿ ಶಿಕ್ಷೆ ವಿಧಿಸಿದ್ದು, ಪಂದ್ಯ ಶುಲ್ಕ ಮತ್ತು ಡಿಮೆರಿಟ್ ಪಾಯಿಂಟ್‌ಗಳನ್ನು ದಂಡವಾಗಿ ವಿಧಿಸಿದೆ.

    ಇದನ್ನೂ ಓದಿ: ಕನ್ನಡದಲ್ಲಿಯೇ ಸ್ವಾಗತಿಸಿದ ಶಾರುಖ್‌ ಖಾನ್‌: ಮಹಿಳಾ ಪ್ರೀಮಿಯರ್ ಲೀಗ್ ಗೆ ಅದ್ಧೂರಿ ಚಾಲನೆ

    ಐಸಿಸಿ ವಿಧಿಸಿರುವ ಶಿಕ್ಷೆಯ ಅನುಸಾರ ಲಂಕಾ ನಾಯಕ ವನಿಂದು ಹಸರಂಗ ಇಡೀ ಸರಣಿಯಲ್ಲಿ ಒಟ್ಟು 5 ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ನಿಯಮಗಳ ಪ್ರಕಾರ, ಒಬ್ಬ ಆಟಗಾರ ಕಳೆದ ಎರಡು ವರ್ಷಗಳಲ್ಲಿ ಐದು ಡಿಮೆರಿಟ್ ಅಂಕಗಳನ್ನು ಪಡೆದರೆ, ಆತನಿಗೆ ಪಂದ್ಯದ ಶುಲ್ಕದ 50 ಪ್ರತಿಶತವನ್ನು ದಂಡವಾಗಿ ವಿಧಿಸಲಾಗುತ್ತದೆ ಮತ್ತು ಎರಡು ಪಂದ್ಯಗಳಿಂದ ಅಮಾನತುಗೊಳಿಸಲಾಗುತ್ತದೆ. ಅದರಂತೆ ಐದು ಡಿಮೆರಿಟ್ ಅಂಕ ಪಡೆದಿರುವ ಹಸರಂಗಗೆ ಎರಡು ಪಂದ್ಯಗಳಿಂದ ನಿಷೇಧ ಹಾಗೂ ಪಂದ್ಯದ ಶುಲ್ಕವನ್ನು ದಂಡವಾಗಿ ವಿಧಿಸಲಾಗಿದೆ.

    ಇನ್ನು ಅಫ್ಘಾನಿಸ್ತಾನದ ಆಟಗಾರ ರಹಮಾನುಲ್ಲಾ ಗುರ್ಬಾಜ್ ಬಗ್ಗೆ ಹೇಳುವುದಾದರೆ ಗುರ್ಬಾಜ್, ಐಸಿಸಿ ನೀತಿ ಸಂಹಿತೆಯ ಲೆವೆಲ್ 1ರಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಅವರು ಈ ಸಂಹಿತೆಯ ಆರ್ಟಿಕಲ್ 2.4 ರ ನಿಯಮವನ್ನು ಉಲ್ಲಂಘಿಸಿದ್ದಾರೆ. ಅದರಲ್ಲೂ ಅಂಪೈರ್ ಮಾತನ್ನು ಕಡೆಗಣಿಸಿದಕ್ಕಾಗಿ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ಅದರಂತೆ ಪಂದ್ಯ ಶುಲ್ಕದ ಶೇ.15ರಷ್ಟು ದಂಡ ವಿಧಿಸಲಾಗಿದ್ದು, ದಂಡದ ಹೊರತಾಗಿ 1 ಡಿಮೆರಿಟ್ ಪಾಯಿಂಟ್ ಅನ್ನು ಪಡೆದಿದ್ದಾರೆ.

    ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಹಸರಂಗ ಅಂಪೈರ್ ಲಿಂಡನ್ ಹ್ಯಾನಿಬಲ್ ಬಳಿಗೆ ಹೋಗಿ ಫುಲ್ ಟಾಸ್​ಗೆ ನೋ ಬಾಲ್ ನೀಡದಿದ್ದಕ್ಕಾಗಿ ಅಸಮಾಧಾನ ಹೊರಹಾಕಿದ್ದರು. ಈ ಕಾರಣಕ್ಕಾಗಿ ಅವರನ್ನು ದಂಡನೆಗೆ ಗುರಿ ಮಾಡಲಾಗಿದೆ. ಇದೀಗ ಮುಂದಿನ ತಿಂಗಳು ಬಾಂಗ್ಲಾದೇಶ ವಿರುದ್ಧ ನಡೆಯಲ್ಲಿರುವ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಿಂದ ಹಸರಂಗ ಹೊರಗುಳಿಯಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts