More

    ಕನ್ನಡದಲ್ಲಿಯೇ ಸ್ವಾಗತಿಸಿದ ಶಾರುಖ್‌ ಖಾನ್‌: ಮಹಿಳಾ ಪ್ರೀಮಿಯರ್ ಲೀಗ್ ಗೆ ಅದ್ಧೂರಿ ಚಾಲನೆ

    ಬೆಂಗಳೂರು:ಮಹಿಳಾ ಪ್ರೀಮಿಯರ್​ ಲೀಗ್​ 2024ರ 2ನೇ ಸೀಸನ್​ಗೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಈ ವೇಳೆ ನಟ ಶಾರುಖ್ ಖಾನ್ ಕನ್ನಡದಲ್ಲಿ ಮಾತನಾಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

    ಶಾರುಖ್​ ಖಾನ್​ ವೇದಿಕೆಗೆ ಆಗಮಿಸುತ್ತಿದ್ದಂತೆ ಕನ್ನಡದಲ್ಲಿಯೇ ಮಾತನಾಡುವ ಮೂಲಕ ಕನ್ನಡಿಗರ ಮನ ಗೆದ್ದರು. ಶಾರುಖ್​ ಖಾನ್​, ನಮಸ್ಕಾರ, ಸ್ವಾಗತ ಬೆಂಗಳೂರು ಎಂದು ಕನ್ನಡದಲ್ಲಿಯೇ ಹೇಳುವ ಮೂಲಕ ಬೆಂಗಳೂರಿನ ಜನರ ಮನಸ್ಸು ಗೆದ್ದಿದ್ದಲ್ಲದೇ ಎಲ್ಲರಿಗೂ ಮಹಿಳಾ ಪ್ರೀಮಿಯರ್​ ಲೀಗ್​ಗೆ ಸ್ವಾಗತಿಸಿದರು.

    ಶಾರುಖ್​ ಖಾನ್​ ಭರ್ಜರಿ ಡ್ಯಾನ್ಸ್ ಮೂಲಕ ನೆರೆದ ಜನರನ್ನು ರಂಜಿಸಿದರೆ, ನಂತರ 5 ತಂಡಗಳ ನಾಯಕಿಯರನ್ನು ಸ್ವಾಗತಿಸಿ, ಮಹಿಳಾ ಪ್ರೀಮಿಯರ್​ ಲೀಗ್​ 2024ರ 2ನೇ ಸೀಸನ್​ಗೆ ಅದ್ಧೂರಿಯಾಗಿ ಚಾಲನೆ ನೀಡಿದರು.

    WPL

    ಇದನ್ನೂ ಓದಿ: ಪೊಲೀಸರ ಜೊತೆ ರೈತರ ಘರ್ಷಣೆ; ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗ, ಹಲವರ ಬಂಧನ

    ಪಂದ್ಯಕ್ಕೂ ಮುನ್ನ ಬಾಲಿವುಡ್​ ಸ್ಟಾರ್​ ಗಳು ಭರ್ಜರಿಯಾಗಿ ಕಾರ್ಯಕ್ರಮ ನೀಡಿದರು. ಈ ಪಂದ್ಯಾವಳಿಯ ಎರಡನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ನಟರಾದ ಶಾಹಿದ್ ಕಪೂರ್, ಟೈಗರ್ ಶ್ರಾಫ್, ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ ಉಪಸ್ಥಿತರಿದ್ದರು. ಅಲ್ಲದೇ ವಿಶೆಷ ಅತಿಥಿಯಾಗಿ ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​ ಖಾನ್​ ಸಹ ಉಪಸ್ಥಿತರಿದ್ದರು.

    ಮಹಿಳಾ ಪ್ರೀಮಿಯರ್ ಲೀಗ್ (WPL 2024) ಫೆಬ್ರವರಿ 23ರಿಂದ ಅಂದರೆ ಇಂದಿನಿಂದ ಅದ್ಧೂರಿಯಾಗಿ ಆರಂಭವಾಗಿದೆ. ಎರಡನೇ ಆವೃತ್ತಿಯ ಟೂರ್ನಿಯಲ್ಲಿ ಒಟ್ಟು 5 ತಂಡಗಳು ಭಾಗವಹಿಸಲಿವೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದೊಂದಿಗೆ ಲೀಗ್ ಆರಂಭವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts