More

    ಬಾಲಿವುಡ್​ನಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ, ಸೆಲೆಬ್ರಿಟಿಗಳ ವಾಟ್ಸ್​ಆ್ಯಪ್​ ಹ್ಯಾಕ್​ ಆಗಿದೆ: ಕಂಗನಾ ರಣಾವತ್

    ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್​ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್​ನಲ್ಲಿ ಅನೇಕ ನಟ-ನಟಿಯರ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡುವ ಮೂಲಕ ನಟಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವ ಈಕೆಗೂ ವಿವಾದಕ್ಕೂ ಎಲ್ಲಿಲ್ಲದ ನಂಟು ಎಂದೇ ಹೇಳಬಹುದಾಗಿದೆ.

    ಇದೀಗ ನಟಿ ವಿಚಾರ ಒಂದಕ್ಕೆ ಹೇಳಿಕೆ ನೀಡಿದ್ದು, ಕೂಡಲೇ ಕೇಂದ್ರ ಸರ್ಕಾರದ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ. ಕೆಲವರು ಕಂಗಾನಾರನ್ನು ಟೀಕೆ ಮಾಡಿದರೆ ಇನ್ನೂ ಕೆಲವರು ಕಂಗನಾ ಅವರನ್ನು ಬೆಂಬಲಿಸಿದ್ದಾರೆ.

    ಇದನ್ನೂ ಓದಿ: ಒತ್ತಡದ ನಡುವೆಯೇ ಪ್ರವಾಸಿ ತಂಡಕ್ಕೆ ಶಾಕ್​; ಸರಣಿಯಿಂದ ಹೊರಬಿದ್ದ ಪ್ರಮುಖ ಆಟಗಾರ

    ಕೆಲವು ಖ್ಯಾತ ಸೆಲೆಬ್ರಿಟಿಗಳು ಬೇರೆ ಸೆಲೆಬ್ರಿಟಿಗಳ ವಾಟ್ಸಾಪ್ ಹ್ಯಾಕ್ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಡಾರ್ಕ್ ವೆಬ್ ವಿಚಾರದಲ್ಲೂ ಏನಾದರೂ ಮಾಡಬೇಕು. ಅನೇಕ ಸೆಲೆಬ್ರಿಟಿಗಳು ಅಕ್ರಮ ಸ್ಟಫ್​ಗಳನ್ನು ಡಾರ್ಕ್​ ವೆಬ್​ನಿಂದ ತರಿಸಿಕೊಳ್ಳುತ್ತಿಲ್ಲ. ಇದರ ಜೊತೆಗೆ ವಾಟ್ಸಾಪ್​ ಹಾಗೂ ಮೇಲ್​ಗಳನ್ನು ಹ್ಯಾಕ್ ಮಾಡುತ್ತಿದ್ದಾರೆ. ಇದನ್ನು ಕೇಂದ್ರ ಪತ್ತೆ ಹೆಚ್ಚಿದರೆ ದೊಡ್ಡ ಸೆಲೆಬ್ರಿಟಿಗಳ ಹೆಸರು ಹೊರ ಬರುತ್ತದೆ ಎಂದು ದೂರಿದ್ದಾರೆ.

    ಇನ್ನು ನಟಿಯ ಆರೋಪ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ ಹುಟ್ಟು ಹಾಕಿದ್ದು, ಕೆಲವರು ನಟಿಯ ಹೇಳಿಕೆಯನ್ನು ಬೆಂಬಲಿಸಿದ್ದಾರೆ ಇನ್ನು ಕೆಲವರು ನಟಿಯ ಹೇಳಿಕೆಯನ್ನು ಟೀಕಿಸಿದ್ದು, ಈ ರೀತಿ ಹೇಳಿಕೆ ಕೊಟ್ಟರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts