More

    ಒತ್ತಡದ ನಡುವೆಯೇ ಪ್ರವಾಸಿ ತಂಡಕ್ಕೆ ಶಾಕ್​; ಸರಣಿಯಿಂದ ಹೊರಬಿದ್ದ ಪ್ರಮುಖ ಆಟಗಾರ

    ರಾಂಚಿ: ಇಲ್ಲಿನ ಜೆಎಸ್​ಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್​ ನಡುವಿನ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಅತಿಥೇಯರ ಬಿಗಿ ಬೌಲಿಂಗ್​ ದಾಳಿಗೆ ನಲುಗಿರುವ ಪ್ರವಾಸಿ ತಂಡಕ್ಕೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.

    ತಂಡದ ಸ್ಟಾರ್ ಯುವ ಸ್ಪಿನ್ನರ್ ರೆಹಾನ್ ಅಹ್ಮದ್ ಇದೀಗ ಇಡೀ ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಟೆಸ್ಟ್ ಸರಣಿಯ ಎಲ್ಲಾ ಮೂರು ಪಂದ್ಯಗಳನ್ನು ಆಡಿರುವ ಲೆಗ್ ಸ್ಪಿನ್ನರ್ ರೆಹಾನ್ ರಾಂಚಿ ಟೆಸ್ಟ್‌ಗೂ ಮುನ್ನ ಏಕಾಏಕಿ ತಂಡವನ್ನು ತೊರೆದು ತಮ್ಮ ತಾಯ್ನಾಡು ಬ್ರಿಟನ್‌ಗೆ ಮರಳುತ್ತಿರುವುದಾಗಿ ತಿಳಿದು ಬಂದಿದೆ.

    Rehan Ahmed

    ಇದನ್ನೂ ಓದಿ: ಯುಪಿಯಲ್ಲಿ ಕುಡುಕರ ಕಾಟ ಎಂದ ರಾಹುಲ್; ಇದು ಯಾವ ರೀತಿಯ ಭಾಷೆ ಎಂದು ಕಿಡಿಕಾರಿದ ಪ್ರಧಾನಿ ಮೋದಿ

    ಆರಂಭದಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ರೆಹಾನ್ ಅಹ್ಮದ್​ರನ್ನು ಬೇಕಂತಲೆ ತಂಡದಿಂದ ಹೊರಗಿಡಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ,ರೆಹಾನ್ ಅಹ್ಮದ್ ಕೌಟುಂಬಿಕ ಕಾರಣಗಳಿಂದ ಈ ಟೆಸ್ಟ್ ಮತ್ತು ಸರಣಿಯಿಂದ ಹೊರಗುಳಿದಿದ್ದು ಬ್ರಿಟನ್‌ಗೆ ಮರಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ರಾಂಚಿ ಟೆಸ್ಟ್ ಪಂದ್ಯದ ಟಾಸ್ ನಂತರ ರೆಹಾನ್ ಅಹ್ಮದ್ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ ಎಂಬ ಸುದ್ದಿ ಖಚಿತವಾಯಿತು. ವಾಸ್ತವವಾಗಿ ಪಂದ್ಯಕ್ಕೆ ಒಂದು ದಿನ ಮೊದಲು ಇಂಗ್ಲೆಂಡ್ ತನ್ನ ಪ್ಲೇಯಿಂಗ್ ಇಲೆವೆನ್ ಅನ್ನು ಘೋಷಿಸಿತು, ಅದರಲ್ಲಿ ರೆಹಾನ್ ಸ್ಥಾನ ಪಡೆದಿರಲಿಲ್ಲ. ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ ಈ ಅನನುಭವಿ ಲೆಗ್ ಸ್ಪಿನ್ನರ್ ಆಡಿದ 3 ​​ಪಂದ್ಯಗಳಲ್ಲಿ ಕೇವಲ 11 ವಿಕೆಟ್ಗಳನ್ನು ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts