More

    ‘ಕನ್ನಡ್’​ ಎಂದವನಿಗೆ ಫುಲ್ ಕ್ಲಾಸ್​ ತೆಗೆದುಕೊಂಡ ಕೆ.ಎಲ್. ರಾಹುಲ್​; ನೋಡ ನೋಡ ಎಷ್ಟು ಚೆಂದ ಎಂದ ಫ್ಯಾನ್ಸ್

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಆಟಗಾರ, ಕನ್ನಡಿಗೆ ಕೆ.ಎಲ್. ರಾಹುಲ್ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಗಾಯದ ಸಮಸ್ಯೆಯಿಂದಾಘಿ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಬಿದ್ದಿರುವ ರಾಹುಲ್ ಈಗ ಭಾಷೆಯ ಮೇಲಿ ಅಭಿಮಾನವನ್ನು ವ್ಯಕ್ತಪಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಸ್ಟಾರ್ ಸ್ಪೋರ್ಟ್‌ಗಾಗಿ ಐಪಿಎಲ್‌ ಪ್ರೋಮೊ ಶೂಟ್ ಮಾಡುವ ಸಂದರ್ಭದಲ್ಲಿ ಅವರು ಕನ್ನಡದ ಬಗ್ಗೆ ಮಾತನಾಡಿದ್ದಾರೆ. ವಿಡಿಯೋದಲ್ಲಿ ಹುಡುಗನೊಬ್ಬ ಡೈಲಾಗ್ ಹಾಳೆಯನ್ನು ಕೆಎಲ್ ರಾಹುಲ್‌ಗೆ ಕೊಡುತ್ತಾರೆ. ಅದನ್ನು ನೋಡಿದ ಕೆಎಲ್ ರಾಹುಲ್ ಇಷ್ಟೊಂದು ಡೈಲಾಗ್‌ಗಳನ್ನು ಹೇಗೆ ನೆನಪಿಟ್ಟುಕೊಳ್ಳಲಿ ಎಂದು ಕೇಳುತ್ತಾರೆ.

    ಇದನ್ನೂ ಓದಿ: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು; 6 ಮಂದಿ ಮೃತ್ಯು

    ಉರು ಹೊಡೆಯಲು ಬಂದಿದ್ದರೆ ಇನ್ನೂ ಹೆಚ್ಚಾಗಿ ಓದಿರುತ್ತಿದ್ದೆ, ಮ್ಯಾಚ್ ಡೇ ಪ್ರೋಮೋ ಇಂಗ್ಲಿಷ್, ಮ್ಯಾಚ್ ಡೇ ಪ್ರೋಮೋ ಹಿಂದಿ, ಮ್ಯಾಚ್ ಡೇ ಪ್ರೋಮೋ ಕನ್ನಡ ಎನ್ನುವಾಗ ಡೈಲಾಗ್ ಶೀಟ್ ಕೊಟ್ಟ ಹುಡುಗ, ಕನ್ನಡ್ ಎನ್ನುತ್ತಾನೆ. ಅದು ಕನ್ನಡ್ ಅಲ್ಲ ಕನ್ನಡ ನಿಮಗೆ ಎಷ್ಟು ಬಾರಿ ಹೇಳಬೇಕು ಎಂದು ರೇಗುತ್ತಾರೆ. ಕನ್ನಡ್ ಅಲ್ಲ ಕನ್ನಡ ಹೇಳು ಎಂದು ಆ ಹುಡುಗನ ಬಳಿ ಹೇಳಿಸುತ್ತಾರೆ.

    ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಔಯರಲ್​ ಆಗಿದ್ದು, ಇರೋ ಒಂದು ಹೃದಯಾನ ಎಷ್ಟು ಸಾರಿ ಗೆಲ್ತೀಯ ಗುರು ಎಂದು ಕನ್ನಡಿಗರು ರಾಹುಲ್‌ರನ್ನು ಹೊಗಳಿದ್ದಾರೆ. ಇನ್ನೂ ಕೆಲವರು ಈ ವಿಡಿಯೋ ನೋಡಿದ ಬಳಿಕ ಕೆ.ಎಲ್. ರಾಹುಲ್ ಅವರ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಯಿತು ಎಂದು ಕಮೆಂಟ್​ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts