More

    ದರ್ಶನ್ vs ಉಮಾಪತಿ; ಈ ಸಂದರ್ಭದಲ್ಲಿ ಇಂತಹ ಬೆಳವಣಿಗೆ ಬೇಕಾಗಿರಲಿಲ್ಲ: ಇಂದ್ರಜಿತ್​ ಲಂಕೇಶ್

    ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ನಡುವಿನ ಕಾಳಗ ಯಾಕೋ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಕಾಟೇರ ಸಿನಿಮಾದ ಟೈಟಲ್​ ಹಾಗೂ ಕತೆಯಿಂದ ಶುರುವಾದ ಈ ವಿವಾದವು ಈಗ ಮತ್ತೊಂದು ಹಂತ ತಲುಪಿದ್ದು, ಇದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಪ್ರತಿಕ್ರಿಯಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಇಂದ್ರಜಿತ್​, ಚಿತ್ರರಂಗಕ್ಕೆ ಹಲವಾರು ದಿನಗಳ ನಂತರ ಕಾಟೇರದಂತಹ ಯಶಸ್ವಿ ಚಿತ್ರ ಸಿಕ್ಕಿದೆ. ಕಾಟೇರ ಬಗ್ಗೆ ನಾನು ಹೇಳಬೇಕಿಲ್ಲ. 50 ದಿನಗಳನ್ನು ಕಂಡಿದೆ ಜನರೇ ಯಶಸ್ವಿ ಮಾಡಿದ್ದಾರೆ. ಕಾಟೇರದಲ್ಲಿ ಕೆಲಸ ಮಾಡಿದ ತಂತ್ರಜ್ಞರೆಲ್ಲರೂ ಈ ಹಿಂದೆ ನನ್ನ ಸಿನಿಮಾದಲ್ಲೂ ಮಾಡಿದ್ದಾರೆ.

    Darshan Umapathy

    ಇದನ್ನೂ ಓದಿ: ಬಾಲಿವುಡ್​ನಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ, ಸೆಲೆಬ್ರಿಟಿಗಳ ವಾಟ್ಸ್​ಆ್ಯಪ್​ ಹ್ಯಾಕ್​ ಆಗಿದೆ: ಕಂಗನಾ ರಣಾವತ್

    ದರ್ಶನ್ ಕೂಡ ನನ್ನ ಪ್ರೀತಿಯ ರಾಮು ಹಾಗೂ ಸಂಗೊಳ್ಳಿರಾಯಣ್ಣ ಬಳಿಕ ಅದ್ಭುತ ಅಭಿನಯ ನೀಡಿರುವ ಸಿನಿಮಾವಿದು. ಈಗ ಕಾಟೇರನೂ ಹಿಟ್ ಆಗಿದೆ. ಈ ಸಂದರ್ಭದಲ್ಲಿ ಇಂತಹದ್ದೊಂದು ಬೆಳವಣಿಗೆ ಬೇಕಾಗಿರಲಿಲ್ಲ. ನಿರ್ಮಾಪಕ ಉಮಾಪತಿ ಹಾಗೂ ದರ್ಶನ್ ನಡುವಿನ ಕಿತ್ತಾಟ ಚಿತ್ರರಂಗಕ್ಕೆ ಶೋಭೆ ತರುವುದಿಲ್ಲ. ಈ ಸಮಸ್ಯೆಯನ್ನು ಅವರವರೇ ಕೂತು ಬಗೆ ಹರಿಸಿಕೊಳ್ಳಬೇಕು. ಇದು ಚಿತ್ರರಂಗಕ್ಕೆ ಶೋಭೆ ತರವಂತಹದ್ದು ಅಲ್ಲ.

    ಹಿಂದೆ ನಾನು ಕೆಲವು ವಿಷಯಗಳ ಬಗ್ಗೆ ಮಾತಾಡಿದ್ದೆ. ಈ ಸಂದರ್ಭದಲ್ಲಿ ನನಗೆ ಮಾತಾಡುವುದಕ್ಕೆ ಇಷ್ಟವಿಲ್ಲ. ಯಾಕಂದ್ರೆ, ನೀವು ನೋಡಿದ್ದೀರ, ಕೆಟ್ಟ ಬೆಳವಣಿಗೆ ಆಗುತ್ತೆ. ಇವತ್ತು ನಾನು ಕಮೆಂಟ್ ಮಾಡುತ್ತೇನೆ. ಮುಂದೆ ಯಾರೋ ಕಮೆಂಟ್ ಮಾಡುತ್ತಾರೆ. ಅದೊಂತರ ಬೆಳೆದು ಹೋಗುತ್ತೆ. ಚಿತ್ರರಂಗದ ದೃಷ್ಟಿಯಲ್ಲಿ ಕೂತು ಬಗೆಹರಿಸಿಕೊಳ್ಳಬೇಕು ಎಂದು ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಅಭಿಪ್ರಾಯಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts