ಇಂಗ್ಲಿಷ್​ನಲ್ಲಿ​ ಮಾತನಾಡುವ ವಿಡಿಯೋ ಟ್ರೋಲ್​: ತೆಲುಗು ಮೂಲದ ಹಾಲಿವುಡ್​ ನಟಿ ಆವಂತಿಕಾ ಉತ್ತರ ಹೀಗಿತ್ತು…

Avantika
Published on

ಹೈದರಾಬಾದ್​: ಒಂದು ಕಾಲದಲ್ಲಿ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬಾಲ ನಟಿಯಾಗಿ ಎಲ್ಲರ ಮನಸ್ಸು ಗೆದ್ದಿದ್ದ ಆವಂತಿಕಾ ವಂದನಪು, ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಬಾಲನಟಿಯಾಗಿದ್ದ ಸಮಯಕ್ಕೂ ಈಗ ಅವರು ಬದಲಾಗಿರುವ ರೀತಿಯನ್ನು ನೋಡಿ ಸಿನಿರಸಿಕರು ದಂಗಾಗಿದ್ದಾರೆ. ಇದರ ನಡುವೆ ಆಕೆಯ ವಿಡಿಯೋವೊಂದು ಸಿಕ್ಕಾಪಟ್ಟೆ ಟ್ರೋಲ್​ ಆಗಿತ್ತು. ಅದಕ್ಕೆ ಆವಂತಿಕಾ ಇದೀಗ ಉತ್ತರ ನೀಡಿದ್ದಾರೆ.

ಇಷ್ಟು ದಿನ ಆವಂತಿಕಾ, ತೆಲುಗು ಭಾಷೆಯಲ್ಲಿ ಮಾತನಾಡುವುದನ್ನು ಜನರು ಹೆಚ್ಚು ಕೇಳುತ್ತಿದ್ದರು. ಆದರೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅಮೆರಿಕನ್ನರು ಮಾತನಾಡುವ ರೀತಿಯಲ್ಲೇ ಹರಳು ಹುರಿದಂತೆ ಇಂಗ್ಲಿಷ್​ ಮಾತನಾಡಿದ್ದರು. ಇದಿಷ್ಟೇ ಅಲ್ಲದೆ, ವಿಚಿತ್ರವಾಗಿ ಮುಖದ ಅಭಿವ್ಯಕ್ತಿ ಪ್ರದರ್ಶಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿ ಭಾರಿ ಟ್ರೋಲ್​ ಆಗಿತ್ತು. ಇದೀಗ ಆ ಟ್ರೋಲ್​ ಬಗ್ಗೆ ಆವಂತಿಕಾ ಮಾತನಾಡಿದ್ದಾರೆ.

ನನಗೆ ನಿಜವಾಗಿಯೂ ಅರ್ಥವಾಗುತ್ತಿಲ್ಲ. ನಾನು ಹುಟ್ಟಿ ಬೆಳೆದದ್ದು ಅಮೆರಿಕದಲ್ಲಿ. ನಾವು ಶಾಲೆಗೆ ಹೋದಾಗ ಇಂಗ್ಲಿಷ್ ಉಚ್ಚಾರಣೆಯೊಂದಿಗೆ ಮಾತನಾಡುತ್ತೇವೆ. ಅಲ್ಲದೆ, ತಂದೆ-ತಾಯಿ ಭಾರತೀಯ ಇಂಗ್ಲಿಷ್ ಉಚ್ಚಾರಣೆಯೊಂದಿಗೆ ಮಾತನಾಡುತ್ತಾರೆ. ಇದನ್ನು ಕೋಡ್ ಸ್ವಿಚಿಂಗ್ ಎಂದು ಕರೆಯಲಾಗುತ್ತದೆ. ಆದರೆ, ಅನೇಕರಿಗೆ ಈ ವಿಷಯ ಅರ್ಥವಾಗುತ್ತಿಲ್ಲ ಎಂದು ನನಗೆ ಈಗ ತಿಳಿದಿದೆ. ಅದಕ್ಕೆ ಎಲ್ಲರೂ ಈ ರೀತಿ ಟ್ರೋಲ್ ಮಾಡಿದ್ದಾರೆ. ಅವಳು ಯಾಕೆ ಈ ರೀತಿ ಮಾತನಾಡುತ್ತಾಳೆ ಎಂದು ಹೇಳುತ್ತಾರೆ? ಅದು ನನ್ನ ಸಹಜ ಉಚ್ಚಾರಣೆ ಎಂದು ಆವಂತಿಕಾ ಹೇಳಿದರು.

ಅಂದಹಾಗೆ ಬ್ರಹ್ಮೋತ್ಸವಂ, ಕೃಷ್ಣಗಾಡಿ ವೀರ ಪ್ರೇಮಕತಾ ಮತ್ತು ಪ್ರೇಮಂ ಸಿನಿಮಾಗಳಲ್ಲಿ ಆವಂತಿಕಾ ನಟನೆ ಮರೆಯುವಂತಿಲ್ಲ. ಇಷ್ಟೇ ಅಲ್ಲದೆ, ಅಜ್ಞಾತವಾಸಿ, ಆಕ್ಸಿಜನ್​, ರಾರಂಡೋಯಿ ವೇದುಕ ಚೂಢಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ಆವಂತಿಕಾ ನಟನೆ ಮಾಡಿದ್ದಾರೆ. ಬಾಲನಟಿಯಾಗಿ ಒಳ್ಳೆಯ ಹೆಸರು ಮಾಡಿದ್ದರು.

ಸಿನಿಮಾದಲ್ಲಿ ಬಿಜಿಯಾಗಿದ್ದಾಗಲೇ ಆವಂತಿಕಾ ಕುಟಂಬ ಅಮೆರಿಕಕ್ಕೆ ಹೋಗಿ ನೆಲೆಸಿತು. ಆದರೂ ತಮ್ಮ ನಟನಯನ್ನು ನಿಲ್ಲಿಸಿದ ಆವಂತಿಕಾ, ನಟನೆಯನ್ನೇ ತಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಅಲ್ಲಿಯೇ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಆರಂಭದಲ್ಲಿ ಅನೇಕ ಹಾಲಿವುಡ್​ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದರು. ಇದರ ನಡುವೆ ಸ್ಪಿನ್​ ಹೆಸರಿನ ಹಾಲಿವುಡ್​ ಸಿನಿಮಾದಲ್ಲಿ ಲೀಡ್​ ರೋಲ್​ನಲ್ಲಿ ಆವಂತಿಕಾ ನಟಿಸಿದರು. ಸೀನಿಯರ್​ ಗರ್ಲ್​ ಹಾಲಿವುಡ್​ ಸಿನಿಮಾದಲ್ಲಿ ಮುಖ್ಯವಾದ ಪಾತ್ರವನ್ನು ನಿರ್ವಹಿಸಿದ ಆವಂತಿಕಾ ಮೀನ್​ ಗರ್ಲ್​ ಸಿನಿಮಾದಲ್ಲಿ ನಟಿಸಿದ್ದಾರೆ.

ಅಂದಹಾಗೆ ಆವಂತಿಕಾ ಅವರು ಹಾಲಿವುಡ್ ಮಾತ್ರವಲ್ಲದೆ ಭಾರತದಲ್ಲೂ ವೈರಲ್ ಆಗಿದ್ದಾರೆ. ಆವಂತಿಕಾ ಅವರು ಹಾಲಿವುಡ್‌ನಲ್ಲಿ ಕೆಲವು ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾಗಿದ್ದಾರೆ ಎಂದು ವರದಿಯಾಗಿದೆ. ಅಲ್ಲಿನ ಸಿನಿಮಾಗಳಲ್ಲಿ ತೆಲುಗು ಹುಡುಗಿ ಪ್ರಮುಖ ನಾಯಕಿಯಾಗಿರುವುದು ತೆಲುಗು ಮಂದಿಗೆ ತುಂಬಾ ಖುಷಿಯಾಗಿದೆ. ಆವಂತಿಕಾ ಅವರ ಬಾಲ್ಯದ ಫೋಟೋಗಳು ಮತ್ತು ಈಗಿನ ಫೋಟೋಗಳನ್ನು ನೋಡಿ ಈ ರೇಂಜ್​ನಲ್ಲಿ ಬದಲಾಗಿದ್ದಾರೆ ಎಂದು ನೆಟಿಜನ್​ಗಳು ಕಮೆಂಟ್ ಮಾಡುತ್ತಿದ್ದು, ಫೋಟೋಗಳು ವೈರಲ್​ ಆಗುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net