ಅಂದು ಬಾಲನಟಿ ಇಂದು ಹಾಲಿವುಡ್​ ಬ್ಯೂಟಿ! ಆವಂತಿಕಾ ನೋಡಿ ಹುಬ್ಬೇರಿಸಿದ ನೆಟ್ಟಿಗರು

Avantika Vandanapu
Published on

ಹೈದರಾಬಾದ್​: ಒಂದು ಕಾಲದಲ್ಲಿ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬಾಲ ನಟಿಯಾಗಿ ಎಲ್ಲರ ಮನಸ್ಸು ಗೆದ್ದಿದ್ದ ಆವಂತಿಕಾ ವಂದನಪು ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಬಾಲನಟಿಯಾಗಿದ್ದ ಸಮಯಕ್ಕೂ ಈಗ ಅವರು ಬದಲಾಗಿರುವ ರೀತಿಯನ್ನು ನೋಡಿ ಸಿನಿರಸಿಕರು ದಂಗಾಗಿದ್ದಾರೆ.

ಬ್ರಹ್ಮೋತ್ಸವಂ, ಕೃಷ್ಣಗಾಡಿ ವೀರ ಪ್ರೇಮಕತಾ ಮತ್ತು ಪ್ರೇಮಂ ಸಿನಿಮಾಗಳಲ್ಲಿ ಆವಂತಿಕಾ ನಟನೆ ಮರೆಯುವಂತಿಲ್ಲ. ಇಷ್ಟೇ ಅಲ್ಲದೆ, ಅಜ್ಞಾತವಾಸಿ, ಆಕ್ಸಿಜನ್​, ರಾರಂಡೋಯಿ ವೇದುಕ ಚೂಢಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ಆವಂತಿಕಾ ನಟನೆ ಮಾಡಿದ್ದಾರೆ. ಬಾಲನಟಿಯಾಗಿ ಒಳ್ಳೆಯ ಹೆಸರು ಮಾಡಿದ್ದರು.

ಸಿನಿಮಾದಲ್ಲಿ ಬಿಜಿಯಾಗಿದ್ದಾಗಲೇ ಆವಂತಿಕಾ ಕುಟಂಬ ಅಮೆರಿಕಕ್ಕೆ ಹೋಗಿ ನೆಲೆಸಿತು. ಆದರೂ ತಮ್ಮ ನಟನಯನ್ನು ನಿಲ್ಲಿಸಿದ ಆವಂತಿಕಾ, ನಟನೆಯನ್ನೇ ತಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಅಲ್ಲಿಯೇ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಆರಂಭದಲ್ಲಿ ಅನೇಕ ಹಾಲಿವುಡ್​ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದರು. ಇದರ ನಡುವೆ ಸ್ಪಿನ್​ ಹೆಸರಿನ ಹಾಲಿವುಡ್​ ಸಿನಿಮಾದಲ್ಲಿ ಲೀಡ್​ ರೋಲ್​ನಲ್ಲಿ ಆವಂತಿಕಾ ನಟಿಸಿದರು. ಸೀನಿಯರ್​ ಗರ್ಲ್​ ಹಾಲಿವುಡ್​ ಸಿನಿಮಾದಲ್ಲಿ ಮುಖ್ಯವಾದ ಪಾತ್ರವನ್ನು ನಿರ್ವಹಿಸಿದ ಆವಂತಿಕಾ ಇದೀಗ ಮೀನ್​ ಗರ್ಲ್​ ಸಿನಿಮಾದಲ್ಲಿ ನಟಿಸಿದ್ದಾರೆ.

ಹಾಲಿವುಡ್​ ಸಿನಿಮಾ ಮೀನ್​ ಗರ್ಲ್​ ಜನವರಿ 12ರಂದು ಬಿಡುಗಡೆಯಾಯಿತು. ಈ ಸಿನಿಮಾದಲ್ಲಿ ಆಕೆಯ ಡಾನ್ಸ್​ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಆವಂತಿಕಾರ ಬೋಲ್ಡ್​ ಅವತಾರ ಕಂಡ ತೆಲುಗು ಮತ್ತು ತಮಿಳು ಸಿನಿ ರಸಿಕರು ಇವರೇನಾ ಆವಂತಿಕಾ ಎಂದು ಹುಬ್ಬೇರಿಸಿದ್ದಾರೆ. ಏನಿದು ಈ ರೀತಿ ಬದಲಾಗಿದ್ದಾರಲ್ಲಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಆವಂತಿಕಾ ಅವರು ಹಾಲಿವುಡ್ ಮಾತ್ರವಲ್ಲದೆ ಭಾರತದಲ್ಲೂ ವೈರಲ್ ಆಗಿದ್ದಾರೆ. ಆವಂತಿಕಾ ಅವರು ಹಾಲಿವುಡ್‌ನಲ್ಲಿ ಕೆಲವು ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾಗಿದ್ದಾರೆ ಎಂದು ವರದಿಯಾಗಿದೆ. ಅಲ್ಲಿನ ಸಿನಿಮಾಗಳಲ್ಲಿ ತೆಲುಗು ಹುಡುಗಿ ಪ್ರಮುಖ ನಾಯಕಿಯಾಗಿರುವುದು ತೆಲುಗು ಮಂದಿಗೆ ತುಂಬಾ ಖುಷಿಯಾಗಿದೆ. ಆವಂತಿಕಾ ಅವರ ಬಾಲ್ಯದ ಫೋಟೋಗಳು ಮತ್ತು ಈಗಿನ ಫೋಟೋಗಳನ್ನು ನೋಡಿ ಈ ರೇಂಜ್​ನಲ್ಲಿ ಬದಲಾಗಿದ್ದಾರೆ ಎಂದು ನೆಟಿಜನ್​ಗಳು ಕಮೆಂಟ್ ಮಾಡುತ್ತಿದ್ದು, ಫೋಟೋಗಳು ವೈರಲ್​ ಆಗುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net