ರಾಮೇಶ್ವರಂ ಕೆಫೆ ರೀತಿಯಲ್ಲೇ ಬಸ್​, ರೈಲು ನಿಲ್ದಾಣ ಸ್ಪೋಟ: ಸಿಎಂ, ಡಿಸಿಎಂಗೂ ಬಾಂಬ್​ ಬೆದರಿಕೆ

1 Min Read
CM and DCM

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್​ ಸ್ಪೋಟದಿಂದಾಗಿ ರಾಜಧಾನಿಯ ಮಂದಿ ಆತಂಕದಲ್ಲಿದ್ದು, ಈ ಕಹಿ ಘಟನೆ ಮಾಸುವ ಮುನ್ನವೇ ಮತ್ತೊಂದು ಬಾಂಬ್​ ಬೆದರಿಕೆ ಸಂದೇಶ ಬಂದಿರುವುದು ಬೆಂಗಳೂರಿಗರಲ್ಲಿ ಮತ್ತಷ್ಟು ಭಯ ಹುಟ್ಟಿಸಿದೆ. ಅಲ್ಲದೆ, ಸರ್ಕಾರ ಮತ್ತು ಪೊಲೀಸ್ ಇಲಾಖೆಯ ನಿದ್ದೆಗೆಡಿಸಿದೆ.

ಇಂದು (ಮಾ.05) ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ, ಗೃಹಸಚಿವರು ಮತ್ತು ಬೆಂಗಳೂರು ನಗರ ಪೊಲೀಸ್​ ಆಯುಕ್ತರಿಗೆ ಇ ಮೇಲ್​ ಮೂಲಕ ಬೆದರಿಕೆ ಸಂದೇಶವೊಂದು ಬಂದಿದೆ. 2.5 ಮಿಲಿಯನ್​ ಡಾಲರ್​ ಕೊಡಲಿಲ್ಲ ಅಂದರೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಸ್ಪೋಟಿಸಿದ ರೀತಿಯಲ್ಲೇ ನಗರದ ಬಸ್​ಗಳು, ಬಸ್​ ಹಾಗೂ ರೈಲು ನಿಲ್ದಾಣಗಳನ್ನು ಸ್ಪೋಟಿಸುವುದಾಗಿ ಇ ಮೇಲ್ ಸಂದೇಶದಲ್ಲಿ ಬೆದರಿಕೆ ಹಾಕಲಾಗಿದೆ.

10786progongmail.com ಎನ್ನುವ ಇ ಮೇಲ್ ಐಡಿಯಿಂದ ಬೆದರಿಕೆ ಮೆಸೇಜ್​ ಬಂದಿದೆ. ರಾಮೇಶ್ವರಂ ಕೆಫೆ ಪ್ರಕರಣ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ನಗರದ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈಗಾಗಲೇ ಸಿಸಿಬಿ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು  ತನಿಖೆಯನ್ನು ಆರಂಭಿಸಿದ್ದಾರೆ. ಇಮೇಲ್ ಸಂದೇಶದ ಮೂಲವನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ.

ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್​ ಸ್ಫೋಟ ರಾಜ್ಯದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದೆ. ಶಂಕಿತ ಬಾಂಬರ್​ ರವೆ ಇಡ್ಲಿ ತಿಂದು, ಬಾಂಬ್​ ಇಟ್ಟು ಪರಾರಿಯಾಗಿದ್ದು, ಇದುವರೆಗೂ ಪತ್ತೆಯಾಗಿಲ್ಲ. ಒಂದು ಸಣ್ಣ ಸುಳಿವು ಕೂಡ ಸಿಕ್ಕಿಲ್ಲ. ಪರಿಸ್ಥಿತಿ ಹೀಗಿರುವಾಗ ಇದೀಗ ಮತ್ತೊಂದು ಬೆದರಿಕೆ ಸಂದೇಶ ಬಂದಿರುವುದು ಪೊಲೀಸ್​ ಇಲಾಖೆಯನ್ನು ಅಣಕಿಸುವಂತಿದೆ.

ಡಿಸಿಎಂ ಡಿ.ಕೆ. ಶಿವಕುಮಾರ್​​ಗೆ ಬಿಗ್​ ರಿಲೀಫ್​: ಇಡಿ ಪ್ರಕರಣ ರದ್ದು ಮಾಡಿದ ಸುಪ್ರೀಂಕೋರ್ಟ್​

ಭಾರತದ ಜಿಡಿಪಿ ಬೆಳವಣಿಗೆ ದರ ಮುನ್ನೋಟವನ್ನು ಶೇ. 6.8ಕ್ಕೆ ಹೆಚ್ಚಿಸಿದ ಮೂಡೀಸ್​!

See also  ಸಭೆ ನಡೆಸಿದ ಮಾತ್ರಕ್ಕೆ ಏನೂ ಆಗಲ್ಲ, ಉಮೇಶ್ ಕತ್ತಿ ಪಕ್ಷ ಬಿಡಲ್ಲ...
Share This Article