More

    ಮೋದಿ ಅಲೆ ಇಲ್ಲ ಒನ್ಲಿ ಗ್ಯಾರಂಟಿ ಅಲೆ; ಚುನಾವಣೆ ಬಂದಾಗ ಮಾತ್ರ ಪ್ರಧಾನಿ ಓಡೋಡಿ ಬರುವರು; ಸಿಎಂ ಸಿದ್ದರಾಮಯ್ಯ ಟೀಕೆ

    ಹಾವೇರಿ: ರಾಜ್ಯದಲ್ಲಿ ಈ ಬಾರಿ ಮೋದಿ ಅಲೆ ಇಲ್ಲ. ಇರುವುದು ಗ್ಯಾರಂಟಿ ಅಲೆ ಮಾತ್ರ. ರಾಜ್ಯದಲ್ಲಿ ಅತಿವೃಷ್ಠಿ, ಬರಗಾಲ ಬಂದು ಜನ, ರೈತರು ಸಂಕಷ್ಟಕ್ಕೀಡಾದಾಗ ಬಾರದ ಪ್ರಧಾನಿ ನರೇಂದ್ರ ಮೋದಿ, ಚುನಾವಣೆ ಬರುತ್ತಿದ್ದಂತೆ ರಾಜ್ಯಕ್ಕೆ ಓಡೋಡಿ ಬರುತ್ತಾರೆ. ಈ ಬಾರಿಯೂ ಗೆಲ್ಲುತ್ತೇವೆ ಎಂಬ ಅಹಂನಲ್ಲಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜನರಿಗೆ ಕರೆ ನೀಡಿದರು.
    ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಡಸ ಕ್ರಾಸ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ 2 ಸಮಾವೇಶದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಅವರು ಮಾತನಾಡಿದರು.
    ್ಯಾತ್ಯಾತೀತ ಜನತಾದಳ ಆರಂಭವಾದ ದಿನದಿಂದಲೂ ಕೋಮುವಾದಿ ಬಿಜೆಪಿ ಜತೆ ಕೈಜೋಡಿಸುವುದಿಲ್ಲ ಎಂದಿದ್ದ ದೇವೇಗೌಡರು ಮೋದಿ ಅವರನ್ನು ತೆಗಳುತ್ತಿದ್ದರು. ಇದೀಗ ಅವರನ್ನು ಹೊಗಳುತ್ತ ವೇದಿಕೆ ಕ್ಷಿಂಚಿಕೊಳ್ಳುತ್ತಿದ್ದಾರೆ. ಇದೇನಾ ಅವರ ಜಾತ್ಯಾತೀತತೆ ಎಂದು ಪ್ರಶ್ನಿಸಿದರು.
    ರಾಜ್ಯಕ್ಕೆ ಕೊಡಬೇಕಿರುವ 18 ಸಾವಿರ ಕೋಟಿ ಬರ ಪರಿಹಾರ ಬಂದಿಲ್ಲ. 15ನೇ ಹಣಕಾಸು ಯೋಜನೆಯ ಅನುದಾನ ಕೊಟ್ಟಿಲ್ಲ. ಒಟ್ಟು 1.86 ಲಕ್ಷ ಕೋಟಿ ರೂ. ರಾಜ್ಯಕ್ಕೆ ಅನ್ಯಾಯವಾಗಿದೆ. ಈ ಬಗ್ಗೆ ಪ್ರಶ್ನಿಸದ ಜೋಶಿ ಹಾಗೂ ಬಿಜೆಪಿ ಸಂಸದರನ್ನು ಸೋಲಿಸಿ ಎಂದರು.
    ಬಂಡವಾಳಶಾಹಿಗಳ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡುವ ಮೋದಿ ಅವರಿಗೆ ಬಡವರು, ರೈತರ ಬಗ್ಗೆ ಕಾಳಜಿ ಇಲ್ಲ. ಬರಗಾಲದಿಂದ 48 ಲಕ್ಷ ಹೆಕ್ಟೆರ್ ಬೆಳೆ ಹಾನಿಯಾಗಿದೆ. 35 ಸಾವಿರ ಕೋಟಿ ನಷ್ಟ ಉಂಟಾಗಿದೆ. ಆರು ತಿಂಗಳಾದರೂ ಪರಿಹಾರ ಕೊಟ್ಟಿಲ್ಲ. ಈ ಮೂಲಕ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಹಾಗಾಗಿ, ನೀವೆಲ್ಲರೂ ನಾಡಿಗೆ ಆದ ಅನ್ಯಾಯ ಖಂಡಿಸಿ. ಬಿಜೆಪಿ ಸೋಲಿಸುವುದು ನಿಮ್ಮ ಕರ್ತವ್ಯ ಎಂದರು.
    ಮೋದಿ ಅವರದ್ದು ಸುಳ್ಳುಗಳ ಸರಮಾಲೆ. ಅವರು ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸಿಲ್ಲ. ನಾವು ಪ್ರಣಾಳಿಕೆಯಲ್ಲಿ ಹೇಳಿದಂತೆ ರಾಜ್ಯದಲ್ಲಿ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಹಾಗಾಗಿ, ಬಿಜೆಪಿ ಅವರಿಗೆ ಮತ ಕೇಳುವ ನೈತಿಕ ಹಕ್ಕು ಇಲ್ಲ ಎಂದರು ಸಿಎಂ.
    ಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿ, ಮೋದಿ ಅವರ ಆಡಳಿತದಲ್ಲಿ ರೈತರ ಆದಾಯ ದ್ವಿಗುಣಗೊಂಡಿಲ್ಲ. ಅಂಬಾನಿ ಆದಾಯ 11 ಲಕ್ಷ ಕೋಟಿಗೆ ಏರಿದೆ. ಕಳಸಾ ಬಂಡೂರಿ ಯೋಜನೆಗೆ ಅನುಮತಿ ಕೊಡಲು ವಿಶ್ವಗುರುವಿಗೆ ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯವಾಡಿದರು.
    ಸಮಾವೇಶದಲ್ಲಿ ವಿಧಾನ ಪರಿಸತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕ ಎನ್.ಎಚ್.ಕೋನರಡ್ಡಿ, ಸೋಮಣ್ಣ ಬೇವಿನಮರದ, ಕುಸುಮಾ ಶಿವಳ್ಳಿ, ಅನೀಲ ಪಾಟೀಲ, ಸಂಜೀವಕುಮಾರ ನೀರಲಗಿ, ಅಜೀಮ್‌ಪೀರ್ ಖಾದ್ರಿ, ರಾಜೇಶ್ವರಿ ಪಾಟೀಲ, ಯಾಸೀರ್ ಪಠಾಣ, ಇತರರಿದ್ದರು.
    ಸುಳ್ಳು, ಸತ್ಯದ ನಡುವೆ ಸ್ಪರ್ಧೆ
    ಬಾರಿ ಚುನಾವಣೆಯಲ್ಲಿ ಸುಳ್ಳು ಮತ್ತು ಸತ್ಯದ ನಡುವೆ ಸ್ಪರ್ಧೆ ನಡೆಯುತ್ತಿದೆ. ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ರೈತರ ಸಾಲಮನ್ನಾ ಮಾಡುತ್ತೇವೆ. ಎಂಎಸ್‌ಪಿ ಕಾನೂನು ಜಾರಿಗೊಳಿಸುತ್ತೇವೆ. ಜಾತಿ ಗಣತಿ ವರದಿ ಸ್ವೀಕರಿಸಿ ಎಲ್ಲ ವರ್ಗಕ್ಕೂ ನ್ಯಾಯ ಕೊಡುತ್ತೇವೆ. ಈ ಸಲ ಯುವಕ, ಸಜ್ಜನರಾದ ವಿನೋದ ಅಸೂಟಿ ಅವರನ್ನು ಗೆಲ್ಲಿಸಿ.
    – ಸಿದ್ದರಾಮಯ್ಯ, ಮುಖ್ಯಮಂತ್ರಿ

    ಭಾರತ ದೇಶ ಹಿಂದು, ಮುಸ್ಲಿಮರನ್ನೊಳಗೊಂಡ ಸೌಹಾರ್ದ ರಾಷ್ಟ್ರ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜಾತಿ, ಧರ್ಮಗಳ ನಡುವೆ ಧ್ವೇಷ ಬಿತ್ತುತ್ತಿದೆ. ಕೋಮು ಸೌಹಾರ್ದ ಕದಡುತ್ತಿದೆ. ಹಾಗಾಗಿ, ಎಲ್ಲರನ್ನೂ ಒಗ್ಗಟ್ಟಾಗಿ ಕರೆದೊಯ್ಯುವ ಕಾಂಗ್ರೆಸ್ ಬೆಂಬಲಿಸಿ. ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ.
    – ವಿನೋದ ಅಸೂಟಿ, ಕಾಂಗ್ರೆಸ್ ಅಭ್ಯರ್ಥಿ

    ಜೋಶಿಗೆ ತಕ್ಕ ಪಾಠ ಕಲಿಸಿ..
    ನಾನು ಪ್ರಲ್ಹಾದ ಜೋಶಿ ವಿರುದ್ಧ ಚುನಾವಣೆಯಲ್ಲಿ ಸೋತಿರಬಹುದು. ಆದರೆ, ಸತ್ತಿಲ್ಲ. ಜೋಶಿ ಸೇಡಿನ ರಾಜಕೀಯ ಮಾಡಿದ್ದಾರೆ. ಸತ್ತವರ ಮನೆಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಇವರ ಹೊಲಸು ರಾಜಕಾರಣಕ್ಕೆ ತಕ್ಕ ಪಾಠ ಕಲಿಸಬೇಕು. ಕೇಂದ್ರ ಸಚಿವಾರದರೂ ಕಳಸಾ ಬಂಡೂರಿ ಯೋಜನೆ ಜಾರಿಗೊಳಿಸಲಾಗಲಿಲ್ಲ. ನಾಚಿಕೆ ಬರಬೇಕು ಅವರಿಗೆ. ಬರೀ ಕೇಸ್ ಹಾಕಿಸುವುದು, ಸಿಬಿಐಗೆ ಕೊಡುವುದು ಅವರ ಕಸುಬು. ನನ್ನ ಕ್ಷೇತ್ರಕ್ಕೆ ನಾನು ಹೋಗಲು ಬಿಟ್ಟಿಲ್ಲ ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಆಕ್ರೋಶಭರಿತರಾಗಿ ನುಡಿದರು.

    ಲಿಂಗಾಯತ ಸಮಾಜಕ್ಕೆ ಮಾನ, ಮರ್ಯಾದೆ ಇದ್ದರೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಏಾತಿ ನೋಡಬೇಡಿ. ಇದೊಂದು ಬಾರಿ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಅವರನ್ನು ಗೆಲ್ಲಿಸಿ. ಜೋಶಿ ಅವರನ್ನು ಮನೆಗೆ ಕಳುಹಿಸಿ.
    – ವಿನಯ ಕುಲಕರ್ಣಿ, ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts