More

    ನಿಜ್ಜಾರ್ ಹತ್ಯೆ ಪ್ರಕರಣದ ಬಂಧಿತರಿಗಿದೆ ಗ್ಯಾಂಗ್​ಗಳ ಸಂಪರ್ಕ: ಜೈಶಂಕರ್

    ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ನನ್ನು ಕಳೆದ ವರ್ಷ ಹತ್ಯೆಗೈದ ಆರೋಪದ ಮೇಲೆ ಮೂವರು ಭಾರತೀಯರ ಬಂಧನ ಮತ್ತು ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಕೆನಡಾದ ಅಧಿಕಾರಿಗಳಿಂದ ಭಾರತವು ಮಾಹಿತಿಯನ್ನು ನಿರೀಕ್ಷಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

    ಇದನ್ನೂ ಓದಿ: ಚೀನಾದ 7 ಯುದ್ಧ ವಿಮಾನ ಕಾರ್ಯಾಚರಣೆ..ಕ್ಷಿಪಣಿ ನಿಯೋಜನೆಗೆ ಸಜ್ಜಾದ ತೈವಾನ್

    ಕೆನಡಾ ಪೊಲೀಸರು ಶುಕ್ರವಾರ ಮೂವರು ಶಂಕಿತರನ್ನು ಬಂಧಿಸಿಅವರು ಭಾರತ ಸರ್ಕಾರದೊಂದಿಗೆ ಇರುವ ಸಂಪರ್ಕಗಳನ್ನು ತನಿಖೆ ಮಾಡುತ್ತಿದ್ದಾರೆ.

    ಶಂಕಿತರು ಹಲವು ರೀತಿಯ ಗ್ಯಾಂಗ್ ಚಟುವಟಿಕೆಗಳೊಂದಿಗೆ ಸಂಬಂಧವನ್ನು ಹೊಂದಿರುವ ಸಾಧ್ಯತೆಯಿದ್ದು, ಕೆನಡಾದ ಕಾನೂನು ಜಾರಿ ಅಧಿಕಾರಿಗಳಿಂದ ಸ್ಪಷ್ಟತೆ ಸಿಗಬೇಕಿದೆ ಎಂದು ಜೈಶಂಕರ್ ಹೇಳಿದರು. ಕೆನಡಾದಿಂದ ಪಂಜಾಬ್‌ ಮತ್ತಿತರ ಕಡೆ ಸಂಘಟಿತ ಅಪರಾಧಗಳನ್ನು ನಡೆಸುತ್ತಿರಯವ ಉಗ್ರರ ಬಗ್ಗೆ ಭಾರತದ ದೀರ್ಘಕಾಲದ ಕಳವಳವನ್ನು ಅವರು ಪುನರುಚ್ಚರಿಸಿದರು.

    ಬಂಧನದ ಕುರಿತು ಮಾತನಾಡಿದ ಜೈಶಂಕರ್, “ಶಂಕಿತರು ಕೆಲವು ರೀತಿಯ ಗ್ಯಾಂಗ್ ಹಿನ್ನೆಲೆಯ ಭಾರತೀಯರು ಎಂದು ಹೇಳಲಾಗಿದೆ. ಇದನ್ನು ಕೆನಡಾ ಪೊಲೀಸರು ನಮಗೆ ತಿಳಿಸುವ ತನಕ ನಾವು ಕಾಯಬೇಕಾಗಿದೆ” ಎಂದು ಸ್ಪಸ್ಟಪಡಿಸಿದರು.

    ಮತ್ತೊಂದೆಡೆ, ಕೆನಡಾದಲ್ಲಿನ ಭಾರತದ ಹೈ ಕಮಿಷನರ್ ಸಂಜಯ್ ವರ್ಮಾ ಅವರು ಪರಿಸ್ಥಿತಿಯ ಬಗ್ಗೆ ಅವಲೋಕಿಸುತ್ತಿದ್ದಾರೆ. ಕೆನಡಾದ ಅಧಿಕಾರಿಗಳಿಂದ ಮಾಹಿತಿ ಸಿಗುವ ಭರವಸೆಯನ್ನು ವ್ಯಕ್ತಪಡಿಸಿದರು. ಈ ಸಮಸ್ಯೆಯು ಕೆನಡಾದ ಆಂತರಿಕ ವಿಚಾರವಾಗಿದೆ ಎಂದು ಅವರು ಮತ್ತಷ್ಟು ಒತ್ತಿಹೇಳಿದರು, ಭಾರತವು ಇದರಲ್ಲಿ ಅತ್ಯಾಸಕ್ತಿ ವಹಿಸದೆ ಪ್ರತಿಕ್ರಿಯೆಯಿಂದ ದೂರವಿರುತ್ತದೆ ಎಂದು ತಿಳಿಸಿದ್ದಾರೆ.

    ಕೆನಡಾದ ಪೊಲೀಸ್ ಮೂಲಗಳ ಪ್ರಕಾರ ಶುಕ್ರವಾರ ಆಲ್ಬರ್ಟಾದ ಎಡ್ಮಂಟನ್‌ನಲ್ಲಿ ಮೂವರು ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ. 45 ವರ್ಷ ವಯಸ್ಸಿನ ಹರ್ದೀಪ್ ಸಿಂಗ್ ನಿಜ್ಜರ್, ಗಣನೀಯ ಪ್ರಮಾಣದ ಸಿಖ್ ಸಮುದಾಯವನ್ನು ಹೊಂದಿರುವ ವ್ಯಾಂಕೋವರ್‌ನ ಉಪನಗರವಾದ ಸರ್ರೆಯ ಗುರುದ್ವಾರದ ಹೊರಗೆ ಮಾರಣಾಂತಿಕವಾಗಿ ಗುಂಡು ಹಾರಿಸಲಾಯಿತು. ಈ ಘಟನೆಯು ಕಳೆದ ವರ್ಷ ಜೂನ್‌ನಲ್ಲಿ ಸಂಭವಿಸಿತ್ತು. ಘಟನೆ ಬಳಿಕ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಇದರಲ್ಲಿ ಭಾರತ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿದ್ದರು. ಇದು ಒಟ್ಟಾವಾ ಮತ್ತು ನವದೆಹಲಿ ನಡುವೆ ಉದ್ವಿಗ್ನತೆಗೆ ಕಾರಣವಾಗಿತ್ತು. 

    ಪಾಕ್​ನಲ್ಲಿ ಹಾಲಿನ ಬೆಲೆ 10 ಪಿಕೆಆರ್​ ಏರಿಕೆ.. ಲೀಟರ್​ಗೆ ಎಷ್ಟೆಂದು ಕೇಳಿದ್ರೆ ಹೌಹಾರ್ತೀರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts