More

    ‘ರಾಹುಲ್ ಪ್ರಧಾನಿ ಅಭ್ಯರ್ಥಿ’..ಅಖಿಲೇಶ್ ಯಾದವ್ ಸ್ಪಷ್ಟನೆ..!

    ನವದೆಹಲಿ: ದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ನಾಲ್ಕು ಹಂತದ ಮತದಾನ ಮುಗಿದಿದ್ದು, ಏಳು ಹಂತದ ಮತದಾನ ಪ್ರಕ್ರಿಯೆ ಜೂನ್ 1 ರಂದು ಪೂರ್ಣಗೊಳ್ಳಲಿದೆ. ಈ ಹಂತದಲ್ಲಿ ಕಾಂಗ್ರೆಸ್ಸಿಗರು ರಾಹುಲ್​ ಪ್ರಧಾನಿಯಾಗುತ್ತಾರೆ ಎಂದು ಹೇಳುತ್ತಿದ್ದು, ‘INDIA’ ಮೈತ್ರಿಕೂಟದ ನಾಯಕರು ಇನ್ನೂ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ. ಇದಕ್ಕೆ ಎಸ್​ಪಿ ನಾಯಕ ಅಖಿಲೇಶ್​ ಯಾದವ್​ ಸಹ ಹೊರತಲ್ಲ.

    ಇದನ್ನೂ ಓದಿ: ‘ಪ್ರಧಾನಿ ಮೋದಿ ಸೋಲು ಖಚಿತ’: ಖರ್ಗೆ

    ಲಖನೌದಲ್ಲಿ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲೇಶ್​ ಯಾದವ್​, ಜೂನ್ 4 ರ ನಂತರ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ ಎಂದು ಭವಿಷ್ಯ ಮುಡಿದರು.

    ಬಿಜೆಪಿಯ ರಥ ಸಂಪೂರ್ಣ ಕುಸಿದಿದ್ದು, ಪಕ್ಷಕ್ಕೆ 140 ಸ್ಥಾನ ಕೂಡ ಬರುವುದಿಲ್ಲ ಎಂದರು.

    ರಾಯ್ ಬರೇಲಿಯಿಂದ ಚುನಾವಣೆಗೆ ಸ್ಪರ್ಧಿಸಿರುವ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡುತ್ತೀರಾ ಎಂಬ ಪ್ರಶ್ನೆಗೆ ನಮ್ಮ ತಂತ್ರಗಾರಿಕೆ ಈಗ ಬಹಿರಂಗವಾಗುವುದಿಲ್ಲ ಎಂದು ಅಖಿಲೇಶ್ ಹೇಳಿದರು.

    ಬಿಜೆಪಿ ಹಿನ್ನಡೆ ಆರಂಭವಾಗಿದೆ. ಬಿಜೆಪಿ ಎಷ್ಟು ಎತ್ತರಕ್ಕೆ ಹೋಗಬೇಕೋ ಅಷ್ಟು ಎತ್ತರಕ್ಕೆ ಹೋಗಿದೆ. ಈಗ ಪಾಥಾಳಕ್ಕೆ ಇಳಿಯುವ ಕಾರ್ಯ ಶುರುವಾಗಿದೆ. ಬಿಜೆಪಿ ನಿರಂತರವಾಗಿ ಕುಸಿಯುತ್ತಿದ್ದು, ಬಿಜೆಪಿಯ ರಥ ಸಂಪೂರ್ಣ ಮುಳುಗಿದೆ ಎಂದರು.

    ಉತ್ತರ ಪ್ರದೇಶದಲ್ಲಿ ನಾವು 79 ಸ್ಥಾನಗಳನ್ನು ಗೆಲ್ಲುವುದು ಖಚಿತ. ಇಲ್ಲಿನ ಜನರು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ ಮತ್ತು ಅದು ಸಂಸತ್ ಚುನಾವಣೆ ಫಲಿತಾಂಶದಿಂದ ಇಡೀ ದೇಶಕ್ಕೆ ಇದು ತಿಳಿಯಲಿದೆ ಎಂದರು.

    ಗುಂಡು ಹಾರಿಸಿಕೊಂಡು ಸಚಿನ್ ತೆಂಡೂಲ್ಕರ್ ಭದ್ರತಾ ಸಿಬ್ಬಂದಿ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts