More

    ಜೋಶಿ ಮತ್ತು ಬಿಜೆಪಿ ಸೋಲಿಸುವುದು ನಿಮ್ಮ ಕರ್ತವ್ಯ; ಕನ್ನಡಿಗರ ಪರ ಧನಿ ಎತ್ತಲಿಲ್ಲ; ತಡಸ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

    ಹಾವೇರಿ: ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ರಾಜ್ಯದ 25 ಸಂಸದರು ಒಂದೇ ಒಂದು ದಿನ ಪ್ರಧಾನಿ ಮೋದಿ ಅವರ ಬಳಿ ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಧನಿ ಎತ್ತಲಿಲ್ಲ. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಜೋಶಿ ಹಾಗೂ ಬಿಜೆಪಿಯನ್ನು ಸೋಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
    ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕು ತಡಸ ಕ್ರಾಸ್‌ನಲ್ಲಿ ಗುರುವಾರ ಆಯೋಜಿಸಿದ್ದ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
    ರಾಜ್ಯದಲ್ಲಿ ಬರಗಾಲ ಇದೆ. ನೀರು, ಮೇವು, ಉದ್ಯೋಗ ಕೇಳಿಕೊಂಡು ಮೋದಿ, ಅಮಿತ್ ಶಾ ಬಳಿ ಹೋದರೆ ಈವರೆಗೆ ಒಂದು ರೂಪಾಯಿಯನ್ನೂ ಕೊಡಲಿಲ್ಲ. 150 ದಿನ ನರೇಗಾ ಕೂಲಿ ಕೊಡಲಿಲ್ಲ. ಬರಗಾಲದ ವರದಿ ಕೊಟ್ಟ ತಿಂಗಳ ಒಳಗಾಗಿ ಪರಿಹಾರ ಕೊಡಬೇಕು ಎಂದು ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಹೇಳುತ್ತದೆ. ಆದರೂ ಈವರೆಗೆ ಪರಿಹಾರ ಕೊಡಲಿಲ್ಲ. ಇದು ಅವರು ಮಾಡಿದ ದೊಡ್ಡ ಮೋಸ. ಇಂಥವರನ್ನು ಮತ್ತೆ ಲೋಕಸಭಾ ಸದಸ್ಯರನ್ನಾಗಿ ಮಾಡಬೇಡಿ. ನಿಮ್ಮ ಸಂಕಷ್ಟಕ್ಕೆ ಸ್ಪಂದಿಸುವ ಕಾಂಗ್ರೆಸ್‌ಗೆ ಕ್ಷಿುತ ನೀಡಿ ಎಂದು ಕೋರಿದರು.
    ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ, ಸಚಿವ ಸಂತೋಷ ಲಾಡ್, ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ, ಸಲೀಂ ಅಹ್ಮದ್, ಎನ್.ಎಚ್.ಕೋನರಡ್ಡಿ, ಸೋಮಣ್ಣ ಬೇವಿನಮರದ, ಅಜೀಮ್‌ಪೀರ್ ಖಾದ್ರಿ, ಅನೀಲ ಪಾಟೀಲ, ಸಂಜೀವ ನೀರಲಗಿ, ಇತರರಿದ್ದರು.

    ಮೋದಿ ತೆಗಳಿದ್ದ ಗೌಡರು ರಿವರ್ಸ್
    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು 2014, 2019ರಲ್ಲಿ ವಾಚಾಮಗೋಚರವಾಗಿ ತೆಗಳಿದ್ದರು. ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ. ಮುಂದಿನ ಜನ್ಮ ಎಂಬುದಿದ್ದರೆ ನಾನು ಕ್ಷಿುುಸಲ್ಮಾನನಾಗಿ ಹುಟ್ಟುವೆ ಎಂದಿದ್ದರು. ಈಗ ಬಿಜೆಪಿ ಜತೆಗೆ ಅಪವಿತ್ರ ಮೈತ್ರಿ ಮಾಡಿಕೊಂಡು ರಿವರ್ಸ್ ಹೊಡೆದಿದ್ದಾರೆ ಎಂದು ಕುಟುಕಿದರು.

    ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಾಲಮನ್ನಾ ಮಾಡಿ ಎಂದರೆ ನಮ್ಮ ಬಳಿ ನೋಟು ಪ್ರಿಂಟ್ ಮಾಡುವ ಮಷಿನ್ ಇಲ್ಲ ಎಂದಿದ್ದರು. ಬಸವಣ್ಣನವರನ್ನು ಸಾಂಸ್ಕೃತಿಕ ರಾಯಭಾರಿಯನ್ನಾಗಿ ಘೋಷಿಸಿದ್ದು ನಮ್ಮ ಸರ್ಕಾರ. ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರವಲ್ಲ ಎಂಬುದನ್ನು ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು.
    – ಸಿದ್ದರಾಮಯ್ಯ, ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts