More

    ಕಾಲೇಜು ಅಭಿವೃದ್ಧಿಗೆ ರೂ. 5 ಲಕ್ಷ ಸಹಾಯಧನ

    ಸಾಗರ : ಸಾಗರದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದಿಂದ ನಡೆಯುತ್ತಿರುವ ಡಾ. ಜಿ.ಎ.ನಾರಿಬೋಲಿ ಎಂಡಿಎಫ್ ಶಿಕ್ಷಣ ಮಹಾವಿದ್ಯಾಲಯಕ್ಕೆ ಡಾ. ಪ್ರಮೋದಾ ಮತ್ತೀಹಳ್ಳಿ ಶುಕ್ರವಾರ ಭೇಟಿ ನೀಡಿ, ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ 5 ಲಕ್ಷ ರೂ. ವೈಯಕ್ತಿಕ ಧನಸಹಾಯ ನೀಡಿದರು.
    ನಂತರ ಮಾತನಾಡಿದ ಅವರು, ಸುಮಾರು 20 ವರ್ಷಗಳ ಕಾಲ ಎಲ್.ಬಿ ಮತ್ತು ಎಸ್.ಬಿ.ಎಸ್ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದೇನೆ. ಕಾಲೇಜಿನ ಅಭಿವೃದ್ಧಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ. ಜೀವನದಲ್ಲಿ ನಮಗಾದಷ್ಟು ಉಪಕಾರ ಮಾಡಬೇಕು. ಬಹಳ ವ್ಯವಸ್ಥಿತವಾಗಿ ಶಿಕ್ಷಣ ಸಂಸ್ಥೆ ನಡೆಸಿಕೊಂಡು ಬರುತ್ತಿದ್ದು, ಈ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿರುವುದು ನಮ್ಮ ಹೆಮ್ಮೆ ಎಂದರು.

    ಎಂಡಿಎಫ್‌ನಿಂದ ಡಾ. ಪ್ರಮೋದ ಮತ್ತೀಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ಎಂ.ಹರನಾಥ ರಾವ್, ಉಪಾಧ್ಯಕ್ಷ ಬಿ.ಆರ್.ಜಯಂತ್, ಪ್ರಮುಖರಾದ ಎಚ್.ಎಂ.ರವಿಕುಮಾರ್, ಡಾ. ಎಚ್.ಎಂ.ಶಿವಕುಮಾರ್, ಕವಲಕೋಡು ವೆಂಕಟೇಶ್, ಸತ್ಯನಾರಾಯಣ, ಡಾ. ಕೋಮಲಾ, ಡಾ. ಟಿ.ಎಸ್.ರಾಘವೇಂದ್ರ, ಎ.ಎಸ್. ವಿನಾಯಕ, ಡಾ.ವಿ.ಎನ್.ಶಿಲ್ಪಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts