More

    3 ಲಕ್ಷ ಮತಗಳಿಂದ ಜೋಶಿ ಗೆಲುವು

    ವಿಜಯವಾಣಿ ಸುದ್ದಿಜಾಲ ನವಲಗುಂದ
    ಪ್ರಚಾರ ಸಮಯದಲ್ಲಿ ಸೇರಿರುವ ಜನ ಸಮೂಹ ಗಮನಿಸಿದರೆ ಪ್ರಲ್ಹಾದ ಜೋಶಿ 3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹೇಳಿದರು.
    ನವಲಗುಂದ ಪಟ್ಟಣದಲ್ಲಿ ಬಿಜೆಪಿ ಅಭ್ಯಥಿರ್ ಪ್ರಲ್ಹಾದ ಜೋಶಿ ಪರ ವಿನಾಯಕ ಪೇಟೆಯಿಂದ ಲಿಂಗರಾಜ ವೃತ್ತದವರೆಗೆ ಸೋಮವಾರ ಸಂಜೆ ಏರ್ಪಡಿಸಿದ್ದ ರೋಡ್​ ಶೋದಲ್ಲಿ ಅವರು ಮಾತನಾಡಿದರು.
    ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯಥಿರ್ಗಳು ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್​ ನೆಲಸಮ ಖಚಿತ. ಕಾಂಗ್ರೆಸ್​ನವರಿಗೆ ಪ್ರಧಾನಿ ಅಭ್ಯಥಿರ್ಯೇ ಇಲ್ಲ. ಪಾಕಿಸ್ತಾನ ಸಹ ಮೋದಿ ಪ್ರಧಾನಿ ಆಗಬೇಕು ಎನ್ನುತ್ತಿದೆ. ರಾಜ್ಯದಲ್ಲಿ ಸರ್ಕಾರ ದಿವಾಳಿ ಆಗಿದೆ. ನಿಮ್ಮ ಸೇವೆಗಾಗಿ ಜೋಶಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
    ಪ್ರಲ್ಹಾದ ಜೋಶಿ ಮಾತನಾಡಿ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿರುವುದು ವಿಜಯೋತ್ಸವ ರೀತಿ ಕಾಣುತ್ತಿದೆ. 10 ವರ್ಷಗಳಲ್ಲಿ ಭಾರತ ಸ್ವಾವಲಂಬಿ ಆಗಿದೆ. 5 ಕೆಜಿ ಅಕ್ಕಿ ಕೊಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿ. ನವಲಗುಂದಕ್ಕೆ ಮಲಪ್ರಭಾ ಕುಡಿಯುವ ನೀರು ಪೂರೈಕೆಗೆ ಪ್ರಧಾನಿ 1400 ಕೋಟಿ ರೂ. ಕೊಟ್ಟಿದ್ದಾರೆ. ಕಳಸಾ ಬಂಡೂರಿಗೆ ಮೊದಲ ಹೋರಾಟ ಮಾಡಿದ್ದು ನಾವು. ಸೋನಿಯಾ ಗಾಂಧಿ ಒಂದು ಹನಿ ನೀರು ಕೊಡುವುದಿಲ್ಲ ಎಂದಿದ್ದರು. ಕಳಸಾ ಬಂಡೂರಿ ಯೋಜನೆಗೆ ಅರಣ್ಯ ಇಲಾಖೆ ಕ್ಲಿಯರೆನ್ಸ್​ ಮಾತ್ರ ಬಾಕಿ ಇದೆ. 55 ಹೆಕ್ಟೇರ್​ ದಟ್ಟ ಅರಣ್ಯ ನಾಶವಾಗಲಿದೆ ಎಂಬ ಕಾರಣಕ್ಕೆ ವನ್ಯಜಿವಿ ಮಂಡಳಿಗೆ ಅನುಮತಿ ಕೋರಲಾಗಿದೆ. ಇಷ್ಟರಲ್ಲೇ ಫಾರೆಸ್ಟ್​ ಕ್ಲಿಯರೆನ್ಸ್​ ಕೊಡಿಸುವುದು ನನ್ನ ಜವಾಬ್ದಾರಿ ಎಂದರು.
    ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಕೃಷಿ ಬಜೆಟ್​ ಕೊಟ್ಟ ಶ್ರೇಯಸ್ಸು ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಅವರ ಮೇಲಿನ ಉತ್ಸಾಹ ನೋಡಿದರೆ ಜೋಶಿ ಅವರು ಮತ್ತೊಮ್ಮೆ ಗೆಲ್ಲುವುದು ಖಚಿತ ಎಂದರು.
    ರೋಡ್​ ಶೋದಲ್ಲಿ ಭಾಗವಹಿಸಿದ್ದು ಬಿಜೆಪಿಯ ಸಾವಿರಾರು ಕಾರ್ಯಕರ್ತರು, ಯಡಿಯೂರಪ್ಪ ಅಭಿಮಾನಿಗಳು ಜೈಕಾರ ಕೂಗಿ ಸಂಭ್ರಮಿಸಿದರು. ಮೋದಿ, ಯಡಿಯೂರಪ್ಪ ಮತ್ತು ಜೋಶಿ ಕಟೌಟ್​ಗಳನ್ನು ಹಿಡಿದು ಕುಣಿದರು. ಭಾರತ ಮಾತಾ ಕಿ ಜೈ ಘೋಷಣೆ ಮೊಳಗಿಸಿದರು. ಅಲ್ಲಲ್ಲಿ ಮನೆಗಳ ಮೇಲೆ ನಿಂತಿದ್ದ ಯಡಿಯೂರಪ್ಪ ಅಭಿಮಾನಿಗಳು ತೆರೆದ ವಾಹನದ ಮೇಲೆ ಪುಷ್ಪ ವೃಷ್ಟಿಗೈದರು.
    ಮಾಜಿ ಸಚಿವ ಕೆ.ಎನ್​. ಗಡ್ಡಿ, ಮುಖಂಡರಾದ ಪ್ರಕಾಶ ಅಂಗಡಿ, ಷಣ್ಮುಖಪ್ಪ ಗುರಿಕಾರ, ದೇವರಾಜ ಧಾಡಿಬಾವಿ, ಅಣ್ಣಪ್ಪ ಭಾಗಿ, ಎಸ್​.ಬಿ. ದಾನಪ್ಪಗೌಡರ, ಎನ್​.ಪಿ. ಕುಲಕಣಿರ್, ಸಿದ್ದನಗೌಡ ಪಾಟೀಲ, ಶಂಕರಗೌಡ ರಾಯನಗೌಡರ, ಸಾವಿರಾರು ಕಾರ್ಯಕರ್ತರು, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts