More

    ನಡು ರಸ್ತೇಲಿ ರೀಲ್ಸ್ ಮಾಡುತ್ತಿದ್ದ ಮಹಿಳೆಗೆ ಕಾದಿತ್ತು ಬಿಗ್​ಶಾಕ್!

    ಲಖನೌ: ಮೊಬೈಲ್​ ಈಗ ಅಗತ್ಯವಾದವರಿಗೆ ಕರೆ ಮಾಡುವುದು, ಕರೆ ಸ್ವೀಕರಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ವಿಚಿತ್ರ ಸನ್ನಿವೇಶಗಳ ಮಾತಂತಿರಲಿ, ಇತ್ತೀಚಿಗೆ ಕಣ್ಣಿಗೆ ಕಂಡಿದ್ದು, ಮನಸ್ಸಿಗೆ ತೋಚಿದ್ದನ್ನೆಲ್ಲ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಮನೋಭಾವ ಸೆಲಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರ ತನಕ ಬಂದಿದೆ.

    ಇದನ್ನೂ ಓದಿ: ‘ನನ್ನನ್ನೂ ಬ್ಲೂ ಫಿಲಂ ಕೇಸ್​ನಲ್ಲಿ ಸಿಕ್ಕಿಸಲಾಗಿತ್ತು’: ಶಾಕಿಂಗ್ ವಿಷಯಗಳನ್ನು ಬಹಿರಂಗಪಡಿಸಿದ ಹಿರಿಯ ನಟ!

    ಹಲವು ರೀತಿಯ ವಿಡಿಯೋಗಳು ವೈರಲ್ ಆಗಿವೆ. ಕೆಲವು ಉತ್ಸಾಹಿಗಳು ರೀಲ್‌ಗಳು ಮತ್ತು ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ಮಾಡುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಅಲೆ ಸೃಷ್ಟಿಸುತ್ತಿದ್ದಾರೆ. ಸಾಕಷ್ಟು ಹಣವನ್ನೂ ಗಳಿಸುತ್ತಿದ್ದಾರೆ. ಇದರಿಂದ ಸ್ಫೂರ್ತಿಗೊಂಡು ಹಲವರು ರಸ್ತೆ, ನದಿ, ನೀರು, ಜಲಪಾತವೆನ್ನದೆ ತಮ್ಮ ಪ್ರಾಣ ಪಣಕ್ಕಿಟ್ಟು ವೀಡಿಯೋಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ ಮಹಿಳೆ ರೀಲ್ಸ್ ಮಾಡುವಾಗ ಅನಿರೀಕ್ಷಿತ ಆಘಾತ ಎದುರಾಗಿದೆ.

    ಉತ್ತರಪ್ರದೇಶದ ಗಾಜಿಯಾಬಾದ್ ನ ಇಂದ್ರಪುರಂನ ಸುಷ್ಮಾ ಇನ್ ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್ ವೈರಲ್​ ಆಗಿದೆ. ಇಷ್ಟಕ್ಕೂ ಆಕೆ ಹಾಕಿದ ಪೋಸ್ಟ್​ ಯಾವುದು? ಎಂದು ನೋಡುವುದಾದರೆ, ಆಕೆ ನಡು ರಸ್ತೆಯಲ್ಲಿ ನಡೆದು ಬರುತ್ತಿರುತ್ತಾರೆ. ಆಕೆಯ ಗೆಳತಿ ದೂರ ನಿಂತು ವೀಡಿಯೋ ಮಾಡುತ್ತಿರುತ್ತಾರೆ. ಅಷ್ಟರಲ್ಲಿ ಬೈಕ್ ನಲ್ಲಿ ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬ ಸುಷ್ಮಾ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತು ಶರವೇಗದಲ್ಲಿ ಪರಾರಿಯಾಗುತ್ತಾನೆ.

    ಇದರಿಂದ ಸುಷ್ಮಾ ಹಾಗೂ ಆಕೆಯ ಸ್ನೇಹಿತೆ ಬೆಚ್ಚಿಬಿದ್ದಿದ್ದು, ಏನಾಗಿದೆ ಎಂದು ಯೋಚಿಸುವ ಮೊದಲೇ ಬೈಕ್ ನಲ್ಲಿದ್ದ ಕಳ್ಳ ಹೊರಟು ಹೋಗಿದ್ದ. ಬಳಿಕ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚೈನ್‌ ಸ್ನಾಚರ್‌ಗಾಗಿ ಶೋಧ ನಡೆಸುತ್ತಿದ್ದಾರೆ.

    ಹಲವರು ರಸ್ತೆಗಳಲ್ಲಿ ರೀಲ್ ಮಾಡಿ ಇತರರಿಗೆ ತೊಂದರೆ ಕೊಡುತ್ತಿದ್ದಾರೆ. ರೀಲ್​ ಮಾಡುವಾಗ ನಿರ್ಲಕ್ಷ್ಯ ವಹಿಸಿದರೆ ಇಂತಹ ಘಟನೆಗಳು ನಡೆಯುತ್ತವೆ. ರೀಲ್ ಮಾಡುವವರು ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದರ ಬಗ್ಗೆಯೂ ಗಮನ ಹರಿಸಬೇಕು ಎಂದು ಪೊಲೀಸರು ಸೂಚಿಸುತ್ತಾರೆ.

    ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ನೆಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ. ಇದು ಕೂಡ ರೀಲ್‌ಗಳ ಭಾಗವೇ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ರೀಲ್ ಮಾಡುವಾಗ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದರ ಕಡೆ ಗಮನಿಸುವುದು ಉತ್ತಮ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    ರಾಹುಲ್ ಸೋಲಿಸುವುದೇ ಗುರಿ?..ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಬಿಜೆಪಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts