More

    ರಾಹುಲ್ ಸೋಲಿಸುವುದೇ ಗುರಿ?..ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಬಿಜೆಪಿ!

    ಕೊಟ್ಟಾಯಂ(ಕೇರಳ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮನದಿಂದ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ವಯನಾಡ್ ಕ್ಷೇತ್ರದಲ್ಲಿ ಬಿಜೆಪಿ ಪರ ಸೆಣೆಸಲು ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ.

    ಇದನ್ನೂ ಓದಿ: VIDEO | ಮೈದಾನಕ್ಕೆ ನಾಯಿ ಓಡಿಬರುತ್ತಿದ್ದಂತೆ ಮೊಳಗಿತು ‘ಹಾರ್ದಿಕ್..ಹಾರ್ದಿಕ್’ ಕೂಗು! ಶ್ವಾನಕ್ಯಾಕೆ ಹೋಲಿಕೆ?

    ಯುಡಿಎಫ್ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಹಾಗೂ ಎಲ್ ಡಿಎಫ್‌ ನಿಂದ ಸಿಪಿಐ ಮುಖಂಡ ಅನಿರಾಜ ಸ್ಪರ್ಧಿಸುತ್ತಿರುವ ಕ್ಷೇತ್ರದಲ್ಲಿ ಅನಿರೀಕ್ಷಿತ ಅಭ್ಯರ್ಥಿಯಾಗಿ ಪಕ್ಷದ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಕಣಕ್ಕಿಳಿಯುತ್ತಿರುವುದು ಬಿಜೆಪಿ ಯಾರನ್ನು ಕಣಕ್ಕಿಳಿಸುತ್ತದೆ ಎಂಬ ಊಹಾಪೋಹಗಳಿಗೆ ತೆರೆಬಿದ್ದಂತಾಗಿದೆ.

    ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಆಲೋಚನೆಯಿಂದ ಸುರೇಂದ್ರನ್ ಹೆಸರು ಹೊರಹೊಮ್ಮಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಸ್ತಾಪಿಸಿದ್ದಾರೆ. ಅಮಿತ್ ಶಾ ಭಾಗವಹಿಸಿದ್ದ ಸಭೆಯಲ್ಲಿ ಸುರೇಂದ್ರನ್ ಅವರ ಉಮೇದುವಾರಿಕೆಯನ್ನು ಅಂತಿಮಗೊಳಿಸಲಾಯಿತು. ಪಕ್ಷದ ರಾಷ್ಟ್ರೀಯ ನಾಯಕತ್ವವು ಕಳೆದ ವಾರ ಸುರೇಂದ್ರನ್ ಅವರನ್ನು ದೆಹಲಿಗೆ ಕರೆಸಿಕೊಂಡು ವಯನಾಡಿನಲ್ಲಿ ಅಭ್ಯರ್ಥಿಯನ್ನಾಗಿ ಪರಿಗಣಿಸುವ ವಿಷಯವನ್ನು ವಿವರಿಸಿದ್ದರು.

    ಲೋಕಸಭೆ ಚುನಾವಣೆ ಬಳಿಕ ರಾಜ್ಯಾಧ್ಯಕ್ಷ ಸ್ಥಾನ ತೆರವಾಗುತ್ತದೆ. ಆಗ ಸುರೇಂದ್ರನ್ ಅವರಿಗೆ ಸೂಕ್ತ ಸ್ಥಾನ ಕಲ್ಪಿಸುವ ಕುರಿತು ತೀರ್ಮಾನವಾಗಿದೆ. ಸಾಂಸ್ಥಿಕ ಮಟ್ಟದಲ್ಲಿ ಅಥವಾ ಆಡಳಿತ ವ್ಯವಸ್ಥೆಯಲ್ಲಿ ಸರಿಯಾಗಿ ಬಳಸಿಕೊಳ್ಳುವುದು, ರಾಜ್ಯಸಭೆ ಮತ್ತು ಕೇಂದ್ರ ಸಚಿವ ಸ್ಥಾನ ನೀಡುವುದಕ್ಕೆ ಪಕ್ಷವು ಪರಿಗಣಿಸುತ್ತಿದೆ ಎಂದು ವರದಿಯಾಗಿದೆ.

    ಬಿಜೆಪಿ ನಾಯಕತ್ವವು ಹಲವು ಸ್ಪಷ್ಟ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ಗೆ ಭಾರಿ ಹೊಡೆತ ನೀಡುವ ಉದ್ದೇಶದಿಂದಲೇ ಶೇಕಡಾ 8 ಕ್ಕಿಂತ ಕಡಿಮೆ ಮತಗಳನ್ನು ಹೊಂದಿರುವ ಕ್ಷೇತ್ರದಲ್ಲಿ ರಾಜ್ಯಾಧ್ಯಕ್ಷರನ್ನು ಸ್ಪರ್ಧೆಗೆ ಇಳಿಸಿದೆ. ಕಳೆದ ಬಾರಿ ವಯನಾಡಿನಲ್ಲಿ ರಾಹುಲ್‌ ಗಾಂಧಿ ಪಡೆದಿದ್ದ ಭಾರಿ ಬಹುಮತವನ್ನು ತಗ್ಗಿಸಿ, ಪ್ರಚಾರದಲ್ಲಿ ಆದಷ್ಟು ಅವರನ್ನು ವಯನಾಡಿನಲ್ಲೇ ಕಟ್ಟಿಹಾಕುವುದು ಮುಖ್ಯ ಗುರಿಯಾಗಿದೆ.

    ಸುರೇಂದ್ರನ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿರುವುದರಿಂದ ಅವರು ಈ ಬಾರಿ ವಯನಾಡಿನಲ್ಲಿ ಬಿರುಸಿನ ಪ್ರಚಾರ ನಡೆಸುವುದು ಖಚಿತವಾಗಿದೆ. ಬಿಜೆಪಿಯ ರಾಷ್ಟ್ರೀಯ ನಾಯಕರು ಹಾಗೂ ಸ್ಪಾರ್ ಪ್ರಚಾರಕರು ಈ ಬಾರಿ ಸುರೇಂದ್ರ ಪರವಾಗಿ ಕಾಣಿಸಿಕೊಳ್ಳಲಿದ್ದಾರೆ.

    2019ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಬಿಡಿಜೆಎಸ್‌ ಅಧ್ಯಕ್ಷ ತುಷಾರ್ ವೆಲ್ಲಪ್ಪಳ್ಳಿ ಎನ್ ಡಿಎ ಪರವಾಗಿ ಸ್ಪರ್ಧಿಸಿದ್ದರು. ಆಗ ಅವರು ಗಳಿಸಿದ್ದು ಕೇವಲ 78,816 ಮತಗಳು ವೆಲ್ಲಪ್ಪಳ್ಳಿ 2014ರಲ್ಲಿ 80,712 ಮತಗಳನ್ನು ಪಡೆದಿದ್ದರು. ಈ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಪ್ರಬಲ ಪೈಪೋಟಿ ನೀಡುವ ಬಿಜೆಪಿ ರಾಜ್ಯಾಧ್ಯಕ್ಷರನ್ನೇ ಕಣಕ್ಕಿಳಿಸಲು ನಿರ್ಧರಿಸಿದೆ.

    ಮಿತ್ರಪಕ್ಷಗಳು ಸ್ಪರ್ಧಿಸುತ್ತಿರುವ ಸಂದರ್ಭದಲ್ಲಿ ಆ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಬಿಜೆಪಿ ರಾಷ್ಟ್ರೀಯ ನಾಯಕರ ಆಸಕ್ತಿಯ ಕೊರತೆಯನ್ನು ಸುರೇಂದ್ರನ್ ಅವರ ಉಮೇದುವಾರಿಕೆಯು ನೀಗಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಬಿಜೆಪಿ ರಾಷ್ಟ್ರೀಯ ನಾಯಕತ್ವವು ವಯನಾಡಿನಿಂದಲೇ ರಾಹುಲ್ ಗಾಂಧಿ ಮತ್ತು ಫ್ರಂಟ್ ಆಫ್ ಇಂಡಿಯಾ ವಿರುದ್ಧ ಪ್ರಚಾರದ ವಿಷಯಗಳನ್ನು ಎತ್ತಲಿದೆ ಎಂದು ಅಂದಾಜಿಸಲಾಗಿದೆ.

    ಬಹುನಿರೀಕ್ಷಿತ ‘ಕಂಗುವ’ ವಿಶೇಷ ಯೋಜನೆ.. ಸೂರ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts