More

    VIDEO | ಮೈದಾನಕ್ಕೆ ನಾಯಿ ಓಡಿಬರುತ್ತಿದ್ದಂತೆ ಮೊಳಗಿತು ‘ಹಾರ್ದಿಕ್..ಹಾರ್ದಿಕ್’ ಕೂಗು! ಶ್ವಾನಕ್ಯಾಕೆ ಹೋಲಿಕೆ?

    ಅಹಮದಾಬಾದ್‌: ನಿನ್ನೆ (ಮಾ.24) ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್​ ಮತ್ತು ಗುಜರಾತ್ ಟೈಟನ್ಸ್​ ತಂಡಗಳ ನಡುವಿನ ಪಂದ್ಯವು ಬಹಳ ರೋಚಕವಾಗಿ ಮೂಡಿಬಂದಿತು. ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಮತ್ತು ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ಘರ್ಷಣೆ ಸ್ಟೇಡಿಯಂನಲ್ಲಿ ತುಂಬಿದ್ದ ಕ್ರಿಕೆಟ್​ ಅಭಿಮಾನಿಗಳಲ್ಲಿ ಭಾರೀ ಕ್ರೇಜ್​ ಹುಟ್ಟುಹಾಕಿತ್ತು.

    ಇದನ್ನೂ ಓದಿ: ಭಾರತದಲ್ಲಿ ವೇಗವಾಗಿ ಹೆಚ್ಚುತ್ತಿದೆ ಬಿಲಿಯನೇರ್‌ಗಳ ಸಂಖ್ಯೆ…ಕಳೆದ ಐದು ವರ್ಷಗಳಲ್ಲಿ ಈ ಸಂಖ್ಯೆ ಸುಮಾರು 76% ಹೆಚ್ಚಳ!

    ಎರಡು ತಂಡಗಳ ಮಧ್ಯೆ ಭಾರೀ ಹಣಾಹಣಿ ನಡೆಯುವ ವೇಳೆಯೇ ಮೈದಾನದೊಳಗೆ ನುಸುಳಿ ಬಂದ ಶ್ವಾನವೊಂದು ಇಡೀ ಗ್ರೌಂಡ್ ತುಂಬ ಓಡಾಡಿದೆ. ನಾಯಿ ಓಡುತ್ತಿದ್ದಂತೆ ರೊಚ್ಚಿಗೆದ್ದ ಅಭಿಮಾನಿಗಳು ಹಾರ್ದಿಕ್​….ಹಾರ್ದಿಕ್​ ಎಂದು ನಿರಂತರವಾಗಿ ಕೂಗಿದ್ದಾರೆ. ಇದು ನೋಡುಗರಲ್ಲಿ ಬಹಳ ಹಾಸ್ಯ ಮೂಡಿಸಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ನೆಟ್ಟಿಗರು ಮನಬಂದಂತೆ ಕಮೆಂಟ್ ಮಾಡಿದ್ದಾರೆ.

    ಇನ್ನು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಹಾರ್ದಿಕ್ ತಂಡ ಗುಜರಾತ್​ಗೆ ಬ್ಯಾಟ್ ಮಾಲು ಅವಕಾಶ ನೀಡಿತು. 20 ಓವರ್‌ಗಳಲ್ಲಿ ಗುಜರಾತ್​ 168 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 120 ಬಾಲ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಕಡೆಯ ಓವರ್​ವರೆಗೂ ಹೋದ ಈ ಪಂದ್ಯ ಬಹಳ ರೋಚಕವಾಗಿ ಸಾಗಿತು. ಅಂತಿಮವಾಗಿ 6 ರನ್​ಗಳಿಂದ ಮುಂಬೈ ಹೀನಾಯ ಸೋಲು ಅನುಭವಿಸಿತು.

    ಗುಜರಾತ್ ನೀಡಿದ 168 ರನ್ ಚೇಸ್​ ಮಾಡಿದ ಮುಂಬೈ ಆರಂಭಿಕ ಹಂತದಲ್ಲೇ ಶೂನ್ಯಕ್ಕೆ ಇಶಾನ್ ಕಿಶಾನ್​ರನ್ನು ಕಳೆದುಕೊಂಡಿತು. ತದನಂತರ ತಂಡಕ್ಕೆ ಆಸರೆಯಾಗಿದ್ದು, ರೋಹಿತ್ ಶರ್ಮಾ- ಡೆವಾಲ್ಡ್ ಬ್ರೆವಿಸ್ ಹೋರಾಟ. ಡೆವಾಲ್ಡ್ ಸಿಕ್ಸರ್ ಮತ್ತು ಬೌಂಡರಿಗಳನ್ನು ಸಿಡಿಸಿ 46 ರನ್ ಗಳಿಸಿದರೆ, ಮಾಜಿ ನಾಯಕ ರೋಹಿತ್ ಶರ್ಮಾ 29 ಎಸೆತಗಳಲ್ಲಿ 43 ರನ್ ಗಳಿಸಿಕೊಟ್ಟರು. ಇನ್ನು 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ 4 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಹೊಡೆಯುವ ಮೂಲಕ 11 ರನ್​ ಸಿಡಿಸಿದರೂ ಕೂಡ ತಂಡವನ್ನು ಗೆಲುವು ತಂಡುಕೊಡಲು ವಿಫಲರಾದರು,(ಏಜೆನ್ಸೀಸ್).

    ಅದೊಂದು ಪಾತ್ರ ನಾನು ಒಪ್ಪಬಾರದಿತ್ತು! ಆ ತಪ್ಪಿಂದ ನನ್ನ ಆಸೆಯೇ ನುಚ್ಚುನೂರಾಯ್ತು: ನಟಿ ಅರ್ಚನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts