More

    ಮೊದಲ ದಿನ ಅಂದಾಜು ಶೇ.84.94 ರಷ್ಟು ಮತದಾನ

    ಬಾಗಲಕೋಟೆ: ಪ್ರಸಕ್ತ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮನೆಯಿಂದಲೇ ಮತದಾನ ಮಾಡಲಿಕ್ಕೆ 85 ವರ್ಷ ಮೇಲ್ಪಟ್ಟ ವೃದ್ದರು, ವಿಶೇಷ ಚೇತನರು ಹಾಗೂ ಕೊವಿಡ್-19 ಶಂಕಿತ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಿದ್ದು, ಮೊದಲ ದಿನವಾದ ಶುಕ್ರವಾರದಂದು ಅಂದಾಜು ಶೇ. 84.94 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.

    ಭಾರತ ಚುನಾವನಾ ಆಯೋಗವು ಬಾಗಲಕೋಟೆ ಲೋಕಸಭಾ ಮತಕ್ಷೇತ್ರದಲ್ಲಿ ಮನೆಯಿಂದಲೇ ಮತದಾನ ಮಾಡಲಿಕ್ಕೆ ಎಪ್ರೀಲ್ 26 ಮತ್ತು 27 ರಂದು ಎರಡು ದಿನಗಳ ಕಾಲ ಅವಕಾಶ ಕಲ್ಪಿಸಿದ್ದು, ಮೊದಲ ದಿನ ಅಂದಾಜು ಶೇ.84.94 ರಷ್ಟು ಮತದಾನವಾಗಿದೆ. ಪ್ರಸಕ್ತ ಲೋಕಸಭಾ ಮತಕ್ಷೇತ್ರದಲ್ಲಿ ನರಗುಂದ ಮತಕ್ಷೇತ್ರ ಸೇರಿದಂತೆ 2139 ಮತದಾರರು ಮನೆಯಿಂದಲೇ ಮತದಾನಕ್ಕೆ ನೊಂದಾಯಿಸಿಕೊಂಡಿದ್ದರು. ಅದರಲ್ಲಿ 85 ವರ್ಷ ಮೇಲ್ಪಟ್ಟವರು 1420 ಹಾಗೂ ವಿಶೇಷ ಚೇತನರು 719 ಇದ್ದರು, ಈ ಪೈಕಿ 85 ವರ್ಷ ಮೇಲ್ಪಟ್ಟ 1100, ವಿಶೇಷ ಚೇತನ 693 ಸೇರಿ ಒಟ್ಟು 1793 ಜನ ಮತದಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಎಪ್ರೀಲ್ 26 ರಂದು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವೊಂದು ಮತದಾರರು ಲಭ್ಯವಿಲ್ಲದ ಕಾರಣ ಎಪ್ರೀಲ್ 27 ರಂದು ಮತ್ತೊಮ್ಮೆ ಭೇಟಿ ನೀಡಿ ಮತದಾನ ಮಾಡಿಸಲಾಗುತ್ತಿದೆ. ಆಗಲೂ ಮತದಾರ ಲಭ್ಯವಾಗದಿದ್ದರೆ ಮತದಾನ ಮಾಡಲು ಅವಕಾಶ ಇರುವದಿಲ್ಲ. ಅಲ್ಲದೇ ಗೈರು ಹಾಜರಿ ಮತದಾರರು ಮತಗಟ್ಟೆಗೆ ಬಂದು ಮತ ಹಾಕಲು ಅವಕಾಶ ಇರುವುದಿಲ್ಲವೆಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts