More

    ಸೆಲ್ಫಿ ಕೇಳಿದ ಅಭಿಮಾನಿ ಮೇಲೆ ಹಲ್ಲೆಗೆ ಮುಂದಾದ ಖ್ಯಾತ ಕ್ರಿಕೆಟಿಗ; ವಿಡಿಯೋ ವೈರಲ್

    ಢಾಕಾ: ಬಾಂಗ್ಲಾದೇಶ ಕ್ರಿಕೆಟ್​ ತಂಡದ ನಾಯಕ ಶಕೀಬ್​ ಅಲ್​ ಹಸನ್​ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾರೆ. ತಮ್ಮ ಜೊತೆ ಸೆಲ್ಫಿ ಕ್ಲಿಕ್ಕಿಸಲು ಆಗಮಿಸಿದ್ದ ಅಭಿಮಾನಿಯೋರ್ವನ ಮೇಲೆ ಹಲ್ಲೆ ಮಾಡಲು ಮುಂದಾದ ಕಾರಣ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಹಿಂದೆ ಶಕೀಬ್​ ಅಲ್​ ಹಸನ್​ ಅನೇಕ ಬಾರಿ ಅಭಿಮಾನಿಗಳ ಮೇಲೆ ಕೈ ಮಾಡುವ ಮೂಲಕ ಸುದ್ದಿಯಾಗಿದ್ದು, ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ.

    ಇದನ್ನೂ ಓದಿ: ಟೀಮ್​ ಇಂಡಿಯಾದ ನೂತನ ಜೆರ್ಸಿ ಬೆಲೆ ರಿವೀಲ್​; ರೇಟ್​ ಕೇಳಿ ದಂಗಾದ ಜನರು

    ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಢಾಕಾದ ಕ್ರೀಡಾಂಗಣದಲ್ಲಿ ಸಹ ಆಟಗಾರರ ಜೊತೆ ಮಾತನಾಡುತ್ತ ನಿಂತಿರುವ ಶಕೀಬ್​ ಅವರ ಬಳಿ ಬರುತ್ತಾನೆ. ಆತನನ್ನು ನೋಡಿದ ಶಕೀಬ್​ ಕೂಡಲೇ ದೂರ ಸರಿಯುವಂತೆ ಸೂಚಿಸುತ್ತಾರೆ. ಈ ವೇಳೆ ಆತ ಇನ್ನೊಮ್ಮೆ ಸೆಲ್ಫಿ ಕೇಳುತ್ತಾನೆ. ಇದರಿಂದ ಕುಪಿತಗೊಂಡ ಶಕೀಬ್​ ಆತನಿಗೆ ಕಪಾಳಮೋಕ್ಷ ಮಾಡಲು ಮುಂದಾಗುತ್ತಾರೆ. ಆತ ಕ್ಷಮೆಯಾಚಿಸಿದರೂ ಶಕೀಬ್ ಸುಮ್ಮನಾಗದಿರುವುದನ್ನು ನೋಡಬಹುದಾಗಿದೆ.

    ಈ ವಿಡಿಯೋವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.ಕೆಲ ದಿನಗಳ ಹಿಂದೆ ಪಾರ್ಲಿಮೆಂಟ್​ ಎಲೆಕ್ಷನ್​ ಸಮಯದಲ್ಲಿ ಶಕೀಬ್​ ವ್ಯಕ್ತಿ ಒಬ್ಬರಿಗೆ ಕಪಾಳ ಮೋಕ್ಷ ಮಾಡುವ ಮಾಡುವ ಮೂಲಕ ಸು್ದಿಯಾಗಿದ್ದರು. ಇದೀಗ ತಾಳ್ಮೆ ಕಳೆದುಕೊಳ್ಳುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts