

ನವದೆಹಲಿ: ಜೂನ್ 01ರಿಂದ ಯುಎಸ್ಎ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ಗೆ ಈಗಾಗಲೇ ತಂಡಗಳು ಭರದಿಂದ ಸಿದ್ದತೆ ನಡೆಸಿದ್ದು, ಬಹುತೇಕ ತಂಡಗಳು 15 ಸದಸ್ಯರ ಟೀಮ್ಅನ್ನು ಘೋಷಿಸಿದೆ. ಜೂನ್ 05ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ತನ್ನ ಅಭಿಯಾನವನ್ನು ಆರಂಭಿಸಲಿದ್ದು, ಇದಕ್ಕೂ ಮುಂಚಿತವಾಗಿ ತಂಡದ ಹೊಸ ಜೆರ್ಸಿಯನ್ನು ಅನಾವರಣ ಮಾಡಲಾಗಿದೆ.
ಅಡಿಡಾಸ್ ಪ್ರಾಯೋಜಕತ್ವದಲ್ಲಿ ಮೂಡಿಬಂದಿರುವ ನೂತನ ಜೆರ್ಸಿಯಲ್ಲಿ ನೀಲಿ ಹಾಗೂ ಕೇಸರಿ ಬಣ್ಣಗಳನ್ನು ಮುಖ್ಯ ಬಣ್ಣಗಳಾಗಿ ಬಳಸಲಾಗಿದೆ. ಅದರಂತೆ ಭಾರತ ತಂಡದ ಟ್ರೇಡ್ ಮಾರ್ಕ್ ಬಣ್ಣವಾಗಿರುವ ನೀಲಿ ಜೆರ್ಸಿಯ ತೋಳ್ಭಾಗದಲ್ಲಿ ಕೇಸರಿ ಬಣ್ಣ ನೀಡಲಾಗಿದೆ. ಹಾಗೆಯೇ ಜೆರ್ಸಿಯ ಕಾಲರ್ ಮೇಲೆ ತ್ರಿವರ್ಣ ಧ್ವಜವನ್ನು ಪ್ರತಿನಿಧಿಸುವಂತೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳ ಪಟ್ಟಿಯನ್ನು ನೀಡಲಾಗಿರುವುದು ವಿಶೇಷ. ಈ ಹಿಂದೆ ಏಕದಿನ ವಿಶ್ವಕಪ್ ಜೆರ್ಸಿಯ ತೋಳ್ಭಾಗದಲ್ಲಿ ತ್ರಿವರ್ಣ ಧ್ವಜದ ಪಟ್ಟಿಗಳನ್ನು ನೀಡಲಾಗಿತ್ತು. ಆದರೆ ಈ ಬಾರಿ ಕುತ್ತಿಗೆ ಭಾಗದಲ್ಲಿ ರಾಷ್ಟ್ರಧ್ವಜದ ಬಣ್ಣಗಳನ್ನು ನೀಡಲಾಗಿದೆ.
ಇನ್ನೂ ಟೀಮ್ ಇಂಡಿಯಾದ ನೂತನ ಜೆರ್ಸಿ ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದ್ದು, ಇದನ್ನು ಅಡಿಡಾಸ್ನ ಅಧಿಕೃತ ಸ್ಟೋರ್ ಹಾಗೂ ಆನ್ಲೈನ್ ವೆಬ್ಸೈಟ್ನಲ್ಲಿ ಖರೀದಿಸಬಹುದಾಗಿದೆ. ಆದರೆ, ನೂತನ ಜೆರ್ಸಿ ಬೆಲೆ ಕೇಳಿ ಜನ ದಂಗಾಗಿದ್ದು, ಕ್ರೀಡಾಭಿಮಾನಿಗಳು ಹೌಹಾರಿದ್ದಾರೆ. ಬಿಡುಗಡೆ ಮಾಡಲಾಗಿರುವ ನೂತನ ಜೆರ್ಸಿಗೆ 5,999 ರೂಗಳನ್ನು ನಿಗದಿಪಡಿಸಲಾಗಿದ್ದು, ನೂತನ ಜೆರ್ಸಿ ಖರೀದಿಸುವ ಬದಲು ದೆಹಲಿಯಿಂದ ಗೋವಾಗೆ ವಿಮಾನದಲ್ಲಿ ಹೋಗಬಹುದು ಎಂದು ಕಮೆಂಟ್ ಮಾಡಿದ್ದಾರೆ.
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ಅರ್ಷ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ. ಅದರಂತೆ ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಹಾಗೂ ಆವೇಶ್ ಖಾನ್ ಅವರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ.