More

    ಆಸ್ಪತ್ರೆಯ ಬಿಲ್​ ಕಟ್ಟಲು ಸಾಧ್ಯವಾಗುತ್ತಿಲ್ಲವೆಂದು ಪತ್ನಿಯನ್ನೇ ಕೊಂದ ಪತಿ

    ನವದೆಹಲಿ: ಆಸ್ಪತ್ರೆಯ ಬಿಲ್​ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಅಮೆರಿಕಾದ ಮಿಸೌರಿಯಲ್ಲಿ ನಡೆದಿದೆ. ಮಿಸೌರಿಯಾ ಜಾಕ್ಸನ್​​ ಕೌಂಟಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಬಂಧಿತನನ್ನು ರಾನಿ ವಿಗ್ಸ್​ ಎಂದು ಗುರುತಿಸಲಾಗಿದೆ.

    ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಇಂಡಿಪೆಂಡೆನ್ಸ್​ ಪೊಲೀಸ್​ ಡಿಪಾರ್ಟ್​ಮೆಂಟ್​ನ ಅಧಿಕಾರಿಯೊಬ್ಬರು, ಮೇ 03ರ ರಾತ್ರಿ 11:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಐಸಿಯುನಲ್ಲಿದ್ದ ರೋಗಿಯನ್ನು ಯಾರೋ ವ್ಯಕ್ತಿ ಕೊಲ್ಲಲು ಯತ್ನಿಸುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ಮಾರನೆಯ ದಿನ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ ದಿನದಿಂದ ಆರ್ಥಿಕವಾಗಿ ಕಷ್ಟದಲ್ಲಿದ್ದೇನೆ ಹಾಗೂ ಮಾನಸಿಕವಾಗಿ ನೊಂದಿದ್ದೇನೆ. ಈ ಕಾರಣದಿಂದಲೇ ಆಕೆಯನ್ನು ಕೊಂದೆ ಎಂದು ಪತಿ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿಂದೆ ಎರಡು ಬಾರಿ ಆತ ಆಕೆಯನ್ನು ಕೊಲ್ಲಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ. ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಂಡಿಪೆಂಡೆನ್ಸ್​ ಪೊಲೀಸ್​ ಡಿಪಾರ್ಟ್​ಮೆಂಟ್​ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts