More

    ಡಗ್​ಔಟ್​ನಲ್ಲಿ ಕಣ್ಣೀರು ಹಾಕಿದ ಹಿಟ್​ಮ್ಯಾನ್​; ವಿಡಿಯೋ ವೈರಲ್​

    ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್​ ಹಾಗೂ ಸನ್​ರೈಸರ್ಸ್​ ನಡುವಿನ ಐಪಿಎಲ್​ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಪಡೆಯೂ ಸೂರ್ಯಕುಮಾರ್​ ಯಾದವ್​ ಶತಕ ಬಲದಿಂದ ಗೆಲುವಿನ ನಗೆ ಬೀರಿದ್ದು, ಪ್ಯಾಟ್​ ಕಮ್ಮಿನ್ಸ್​ ಪಡೆಗೆ ಸೋಲಿನ ರುಚಿ ತೋರಿಸಿದೆ. 174 ರನ್​ಗಳ ಸವಾಲಿನ ಗುರಿಯನ್ನು 17.2 ಓವರ್​ಗಳಲ್ಲಿ ಚೇಸ್​ ಮಾಡಿ ಗೆದ್ದರೂ ಯಾಕೋ ನಾಯಕ ರೋಹಿತ್​ ಶರ್ಮಾ ಅಷ್ಟಾಗಿ ಸಂತಸಗೊಂಡಂತೆ ಕಾಣುತ್ತಿರಲಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಸನ್​ರೈಸರ್ಸ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಮಾಜಿ ನಾಯಕ ರೋಹಿತ್​ ಶರ್ಮಾ ಮತ್ತೊಮ್ಮೆ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದಾರೆ. ಸನ್​ರೈಸರ್ಸ್​ ವಿರುದ್ಧದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಹಿಟ್​ಮ್ಯಾನ್​ 5 ಎಸೆತಗಳನ್ನು ಎದುರಿಸಿ 1 ಬೌಂಡರಿ ಒಳಗೊಂಡಂತೆ 4 ರನ್​ ಗಳಿಸಿ ಔಟಾದರು. ಔಟಾದ ಬಳಿಕ ಡಗ್​ಔಟ್​ ಕುಳಿತಿರುವ ರೋಹಿತ್​ ಶರ್ಮಾ ಅಳುತ್ತಿರುವಂತೆ ಕಂಡು ಬಂದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಟಿ-20 ವಿಶ್ವಕಪ್​ ಆರಂಭಕ್ಕೂ ಮುನ್ನ ನಾಯಕ ರೋಹಿತ್​ ಶರ್ಮಾ ಪದೇ ಪದೇ ವೈಫಲ್ಯ ಅನುಭವಿಸುತ್ತಿದ್ದು, ಕಳಪೆ ಫಾರ್ಮ್​ನಿಂದ ಕಂಗೆಟ್ಟಿದ್ದಾರೆ. ಐಪಿಎಲ್​ ಪ್ರಾರಂಭದಲ್ಲಿ ಮುಂಬೈ ಪರ ಉತ್ತಮ ಪ್ರದರ್ಶನ ನೀಡಿದ ರೋಹಿತ್​ ಶರ್ಮಾ ಬಳಿಕ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಟಿ-20 ವಿಶ್ವಕಪ್​ಗೂ ಮೊದಲು ರೋಹಿತ್​ ಶರ್ಮಾ ಫಾರ್ಮ್​ ಕಂಡುಕೊಳ್ಳಲು ಅವಕಾಶ ಹೊಂದಿದ್ದು, ಹಿಟ್​ಮ್ಯಾನ್​ ಇದನ್ನು ಸದುಪಯೋಗಪಡಿಸಿಕೊಳ್ಳಲಿದ್ದಾರಾ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts